AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Business Idea: ಮನೆಯಿಂದಲೇ ಶುರು ಮಾಡಿ ತಿಂಗಳಿಗೆ 35ರಿಂದ 40 ಸಾವಿರ ರೂಪಾಯಿ ಲಾಭ ಬರುವ ಬಿಜಿನೆಸ್ ಐಡಿಯಾ ಇದು

Small Business Ideas: ಉದ್ಯಮವನ್ನು ಆರಂಭಿಸುವ ಉದ್ದೇಶ ಇರುವವರಿಗಾಗಿ ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ಗಳಿಸಬಹುದಾದ ಬಿಜಿನೆಸ್ ಐಡಿಯಾ ಇಲ್ಲಿದೆ.

Business Idea: ಮನೆಯಿಂದಲೇ ಶುರು ಮಾಡಿ ತಿಂಗಳಿಗೆ 35ರಿಂದ 40 ಸಾವಿರ ರೂಪಾಯಿ ಲಾಭ ಬರುವ ಬಿಜಿನೆಸ್ ಐಡಿಯಾ ಇದು
ಸಾಂದರ್ಭಿಕ ಚಿತ್ರ
TV9 Web
| Updated By: Digi Tech Desk|

Updated on:Dec 25, 2021 | 12:36 PM

Share

ಯಾವುದೇ ಬಿಜಿನೆಸ್ ಯಶಸ್ವಿ ಆದ ಮೇಲೆ, ಅಯ್ಯೋ ನನಗೂ ಅಂಥದ್ದೊಂದು ವ್ಯವಹಾರ ಮಾಡಬೇಕು ಅಂತ ಇತ್ತು ಅಂದುಕೊಳ್ಳುವವರು ಅಥವಾ ನಾನೇ ಇದನ್ನು ಮಾಡಲು ಹೇಳಿದ್ದೆ ಅನ್ನೋರು ಬಹಳ ಮಂದಿ. ಆದರೆ ವರ್ಕೌಟ್ ಆಗುವಂಥ ಉದ್ಯಮದ ಆಲೋಚನೆ ಬರುವುದು ಅಥವಾ ಆರಂಭಿಸುವ ಉದ್ಯಮವನ್ನು ಲಾಭದಾಯಕವಾಗಿ ಮಾಡುವುದು ಸಲೀಸಾದ ಸಂಗತಿ ಅಲ್ಲ. ಮೊದಲನೆಯದಾಗಿ ಯಾವ ವ್ಯವಹಾರ ಆರಂಭಿಸಬೇಕು ಅಂತ ನಿರ್ಧರಿಸುವುದೇ ಕಷ್ಟವಾದ ಸವಾಲು. ಅದಾದ ಮೇಲೆ ಅದಕ್ಕೆ ಪೂರಕವಾಗಿ ಬೇಕಾದದ್ದನ್ನು ಹೊಂದಿಸಿಕೊಳ್ಳುವುದು ಮತ್ತೂ ಕಠಿಣ. ಇವೆರಡು ಹಂತ ದಾಟಿದ ನಂತರ ಹಿಡಿದ ಹಠ ಬಿಡದೆ ವ್ಯವಹಾರವನ್ನು ಯಶಸ್ಸು ಕಾಣುವಂತೆ ಮಾಡುವುದು ಮತ್ತಷ್ಟು ಕಷ್ಟವಾಗುತ್ತದೆ. ಈ ಲೇಖನದಲ್ಲಿ ಬಿಜಿನೆಸ್ ಐಡಿಯಾವೊಂದಿದೆ. ಇದರಲ್ಲಿನ ಮಾಹಿತಿಗಳು ಓದುಗರಿಗೆ ಸಹಾಯ ಆಗಬಹುದು ಎಂಬ ಕಾರಣಕ್ಕೆ ನೀಡಲಾಗುತ್ತಿದೆ. ಅದ್ಯಾವ ಬಿಜಿನೆಸ್ ಅಂದರೆ, ಹಪ್ಪಳ ಮಾಡುವುದು. ಈಗಂತೂ ಎಷ್ಟೋ ಮಂದಿ ಮನೆಗಳಿಂದಲೇ ವ್ಯಾಪಾರ, ವ್ಯವಹಾರ, ಸಣ್ಣ ಮಟ್ಟಗಿನ ಉದ್ಯಮವನ್ನೇ ಆರಂಭಿಸುತ್ತಿದ್ದಾರೆ. ಹಾಗಿದ್ದ ಮೇಲೆ ಈ ಸಾಧ್ಯತೆಯನ್ನು ಏಕೆ ಆಲೋಚಿಸಬಾರದು?

ಈ ಬಿಜಿನೆಸ್​ನ ಪ್ರಮುಖಾಂಶಗಳನ್ನು ತಿಳಿಸಿಬಿಡುತ್ತೇವೆ: – ಕಡಿಮೆ ಬಂಡವಾಳದಲ್ಲಿ ಈ ಉದ್ಯಮವನ್ನು ಶುರು ಮಾಡಬಹುದು. – ಭಾರತ ಸರ್ಕಾರದ ಎನ್​ಎಸ್​ಐಸಿ (ನ್ಯಾಷನಲ್ ಸ್ಮಾಲ್ ಇಂಡಸ್ಟ್ರೀಸ್ ಕಾರ್ಪೊರೇಷನ್) ಈ ಬಗ್ಗೆ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಿದೆ. – ಈ ಉದ್ಯಮಕ್ಕೆ ಮುದ್ರಾ ಯೋಜನೆ ಅಡಿಯಲ್ಲಿ ನಾಲ್ಕು ಲಕ್ಷ ರೂಪಾಯಿ ತನಕ ಕಡಿಮೆ ಬಡ್ಡಿಯ ಸಾಲ ದೊರೆಯುತ್ತದೆ. – 6 ಲಕ್ಷ ರೂಪಾಯಿ ಮೊತ್ತದೊಂದಿಗೆ 30 ಸಾವಿರ ಕೇಜಿಯ ಉತ್ಪನ್ನ ಸಿದ್ಧವಾಗುತ್ತದೆ. – ಫಿಕ್ಸೆಡ್ ಬಂಡವಾಳವಾಗಿ 2 ಮಶೀನ್, ಪ್ಯಾಕೇಜಿಂಗ್ ಸಲಕರಣೆಗಳಂಥದ್ದು ಒಳಗೊಂಡಿರುತ್ತವೆ. – ವರ್ಕಿಂಗ್ ಕ್ಯಾಪಿಟಲ್ ಅಂತ ನೋಡುವುದಾದರೆ ಸಿಬ್ಬಂದಿಯ ಮೂರು ತಿಂಗಳ ವೇತನ, ಮೂರು ತಿಂಗಳಿಗಾಗುವಷ್ಟು ಕಚ್ಚಾ ಪದಾರ್ಥ, ಯುಟಿಲಿಟಿ ಪದಾರ್ಥಗಳಿಗೆ ಆಗುವಷ್ಟು ಇರಬೇಕು. – ಇನ್ನು ನೀರು, ವಿದ್ಯುತ್​ ಸೇರಿದಂತೆ ಇತರ ಖರ್ಚುಗಳನ್ನು ಸಹ ಸೇರಿಸಲಾಗಿದೆ.

ಉದ್ಯಮ ಆರಂಭಿಸುವುದಕ್ಕೆ ಅಗತ್ಯಗಳಿವು: – ಕನಿಷ್ಠ 250 ಚದರಡಿಯ ಜಾಗ ಬೇಕಾಗುತ್ತದೆ. – ಮೂವರು ಕೌಶಲ ರಹಿತ ಕಾರ್ಮಿಕರು, ಇಬ್ಬರು ಕೌಶಲ ಇರುವ ಕಾರ್ಮಿಕರು, ಒಬ್ಬರು ಸೂಪರ್​ವೈಸರ್ ಅಗತ್ಯ ಇದೆ. – ಈ ಉದ್ಯಮದ ಆರಂಭಕ್ಕೆ 4 ಲಕ್ಷ ರೂಪಾಯಿ ತನಕ ಸಾಲ ದೊರೆಯುತ್ತದೆ. – ಉದ್ಯಮ ಆರಂಭಿಸುವವರು 2 ಲಕ್ಷ ರೂಪಾಯಿ ತನಕ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ.

ಸಾಲ ಎಲ್ಲಿ ಸಿಗುತ್ತದೆ? ಪ್ರಧಾನಮಂತ್ರಿ ಮುದ್ರಾ ಯೋಜನಾ ಅಡಿಯಲ್ಲಿ ಯಾವುದೇ ಬ್ಯಾಂಕ್​ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಾಲ ಮರುಪಾವತಿಗೆ 5 ವರ್ಷಗಳ ಅವಕಾಶ ಇದೆ.

ಆದಾಯ ಎಷ್ಟು ಬರಬಹುದು? ಹಪ್ಪಳ ತಯಾರಿಸಿದ ಮೇಲೆ ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ರೀಟೇಲ್ ಮಳಿಗೆ, ಕಿರಾಣಾ ಅಂಗಡಿ, ಸೂಪರ್​ ಮಾರ್ಕೆಟ್ ಇಲ್ಲೆಲ್ಲವೂ ಮಾರಾಟವನ್ನು ಮಾಡಬಹುದು. 6 ಲಕ್ಷ ರೂಪಾಯಿ ಹೂಡಿಕೆ ಮಾಡುವುದರೊಂದಿಗೆ ತಿಂಗಳಿಗೆ 1 ಲಕ್ಷ ರೂಪಾಯಿ ತನಕ ವಹಿವಾಟನ್ನು ನಡೆಸಬಹುದು. ಇದರಲ್ಲಿ ಲಾಭ ಅಂತ 35ರಿಂದ 40 ಸಾವಿರ ರೂಪಾಯಿ ತನಕ ಬರುತ್ತದೆ.

ಇದನ್ನೂ ಓದಿ: Business Idea: ವರ್ಷವಿಡೀ ಬೇಡಿಕೆ ಇರುವ ಈ ಕೃಷಿ ಉತ್ಪನ್ನದ ಮೂಲಕ 15 ಲಕ್ಷ ರೂಪಾಯಿ ತನಕ ಗಳಿಸಿ

Published On - 12:30 pm, Sat, 25 December 21

ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ