Sign In

By signing in or creating an account, you agree with Associated Broadcasting Company's Terms & Conditions and Privacy Policy.

Business Idea: ವರ್ಷವಿಡೀ ಬೇಡಿಕೆ ಇರುವ ಈ ಕೃಷಿ ಉತ್ಪನ್ನದ ಮೂಲಕ 15 ಲಕ್ಷ ರೂಪಾಯಿ ತನಕ ಗಳಿಸಿ

ವರ್ಷದ ಎಲ್ಲ ಸಮಯದಲ್ಲೂ ಬೇಡಿಕೆ ಇರುವ ಶುಂಠಿ ಬೆಳೆಯುವ ಮೂಲಕ ಎಷ್ಟು ಲಾಭ ಗಳಿಸಬಹುದು ಗೊತ್ತೆ? ಜತೆಗೆ ಅದನ್ನು ಬೆಳೆಯುವ ವಿಧಾನವನ್ನು ಸಹ ಇಲ್ಲಿ ನೀಡಲಾಗಿದೆ.

Business Idea: ವರ್ಷವಿಡೀ ಬೇಡಿಕೆ ಇರುವ ಈ ಕೃಷಿ ಉತ್ಪನ್ನದ ಮೂಲಕ 15 ಲಕ್ಷ ರೂಪಾಯಿ ತನಕ ಗಳಿಸಿ
ಶುಂಠಿ
Follow us
TV9 Web
| Updated By: Digi Tech Desk

Updated on:Dec 25, 2021 | 12:36 PM

ಕೃಷಿಯ ಮೂಲಕ ದೊಡ್ಡ ಆದಾಯವನ್ನು ಗಳಿಸಲು ಬಯಸುವವರಿಗಾಗಿ ಈ ಲೇಖನದಲ್ಲಿ ಸಲಹೆಯೊಂದಿದೆ. ಇದರ ಮೂಲಕ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಗಳಿಸಬಹುದು. ನೆನಪಿನಲ್ಲಿಡಿ, ಇದು ಯಾವಾಗಲೂ ಬೇಡಿಕೆಯಲ್ಲಿರುವ ವ್ಯವಹಾರವಾಗಿದೆ. ಇಂದು ಅನೇಕ ವಿದ್ಯಾವಂತರು ಕೃಷಿಯತ್ತ ಮುಖ ಮಾಡಿ ಶ್ರಮಪಟ್ಟು, ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾರೆ. ಕೃಷಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಸರ್ಕಾರವೂ ಸಹಾಯ ಮಾಡುತ್ತಿದೆ. ಇಂದು ನಾವು ನಿಮಗೆ ಶುಂಠಿ ಕೃಷಿ ಮಾಡುವ ಸಲಹೆಯನ್ನು ನೀಡುತ್ತಿದ್ದೇವೆ. ಇದನ್ನು ಚಹಾದಿಂದ ತರಕಾರಿಗಳು, ಉಪ್ಪಿನಕಾಯಿವರೆಗೆ ಬಳಸಲಾಗುತ್ತದೆ. ವರ್ಷವಿಡೀ ಉತ್ತಮ ಬೇಡಿಕೆ ಇರುವುದರ ಜತೆಗೆ ಉತ್ತಮ ಬೆಲೆಯೂ ದೊರೆಯುತ್ತದೆ. ಚಳಿಗಾಲದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿರುತ್ತದೆ. ಇದರೊಂದಿಗೆ ಬೇಡಿಕೆಯು ವರ್ಷವಿಡೀ ಇರುತ್ತದೆ. ಇದರಲ್ಲಿ ನೀವು ಕೆಲಸಕ್ಕಿಂತ ಹೆಚ್ಚು ಲಾಭ ಗಳಿಸಬಹುದು. ಇದರ ಬೇಸಾಯಕ್ಕೆ ಕೇಂದ್ರ ಸರ್ಕಾರದಿಂದ ಸಹಾಯವೂ ದೊರೆಯಲಿದೆ ಎಂಬುದು ಬಹುಮುಖ್ಯವಾದ ಸಂಗತಿ.

ಶುಂಠಿಯನ್ನು ಹೇಗೆ ಬೆಳೆಸುವುದು? ಶುಂಠಿ ಕೃಷಿ ಮಳೆ ನೀರಿನ ಮೇಲೆ ಅವಲಂಬಿತವಾಗಿದೆ. ಇದನ್ನು ಒಂದೇ ಅಥವಾ ಪಪ್ಪಾಯಿ ಮತ್ತು ಇತರ ದೊಡ್ಡ ಮರದ ಬೆಳೆಗಳೊಂದಿಗೆ ಅಕ್ಕಡಿಯಾಗಿ ಬೆಳೆಯಬಹುದು. ಒಂದು ಹೆಕ್ಟೇರ್‌ನಲ್ಲಿ (2.47 ಎಕರೆ) ಬಿತ್ತನೆ ಮಾಡಲು 2 ರಿಂದ 3 ಕ್ವಿಂಟಲ್ ಬೀಜ ಬೇಕಾಗುತ್ತವೆ. ಶುಂಠಿಯ ಬೇಸಾಯವನ್ನು ಬದುಗಳನ್ನು ಸಣ್ಣದಾಗಿ ವಿಂಗಡಣೆ ಮಾಡಿಕೊಳ್ಳುವ ಮೂಲಕ ಮೂಲಕ ಮಾಡಬೇಕು. ಅಲ್ಲದೇ ಮಧ್ಯದಲ್ಲಿ ಬಸಿಗಾಲುವೆ ಮಾಡುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತದೆ. ನೀರು ನಿಲ್ಲುವ ಹೊಲಗಳಲ್ಲಿ ಶುಂಠಿ ಬೆಳೆಯಬಾರದು. 6-7 pH ಹೊಂದಿರುವ ಮಣ್ಣನ್ನು ಶುಂಠಿ ಕೃಷಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಹಿಂದಿನ ಬೆಳೆ ಶುಂಠಿಯ ಗೆಡ್ಡೆಗಳನ್ನು ಬಳಸಲಾಗುತ್ತದೆ. ದೊಡ್ಡ ಶುಂಠಿಯ ಗೆಣ್ಣುಗಳನ್ನು ಒಂದು ತುಂಡಿನಲ್ಲಿ ಎರಡರಿಂದ ಮೂರು ಚಿಗುರುಗಳು ಉಳಿಯುವ ರೀತಿಯಲ್ಲಿ ಮುರಿಯಿರಿ.

ಶುಂಠಿಯನ್ನು ಹೇಗೆ ಬಿತ್ತುವುದು ಶುಂಠಿಯನ್ನು ಬಿತ್ತುವಾಗ ಸಾಲಿನಿಂದ ಸಾಲಿಗೆ 30ರಿಂದ 40 ಸೆಂ.ಮೀ ಅಂತರ ಮತ್ತು ಗಿಡದಿಂದ ಗಿಡಕ್ಕೆ 20 ರಿಂದ 25 ಸೆಂ.ಮೀ ಅಂತರವಿರಬೇಕು. ಇದಲ್ಲದೇ ಮಧ್ಯದ ಗಡ್ಡೆಗಳನ್ನು ನಾಲ್ಕೈದು ಸೆಂ.ಮೀ ಆಳದಲ್ಲಿ ಬಿತ್ತಿದ ನಂತರ ತಿಳಿ ಮಣ್ಣು ಅಥವಾ ಹಸುವಿನ ಗೊಬ್ಬರವನ್ನು ಹಾಕಿ ಮುಚ್ಚಬೇಕು.

ಎಷ್ಟು ವೆಚ್ಚವಾಗುತ್ತದೆ ಶುಂಠಿ ಬೆಳೆ ಸಿದ್ಧವಾಗಲು 8ರಿಂದ 9 ತಿಂಗಳು ಬೇಕಾಗಬಹುದು. ಒಂದು ಹೆಕ್ಟೇರ್‌ನಲ್ಲಿ ಶುಂಠಿಯ ಇಳುವರಿ 150ರಿಂದ 200 ಕ್ವಿಂಟಲ್‌ಗಳವರೆಗೆ ಇರುತ್ತದೆ. ಒಂದು ಹೆಕ್ಟೇರ್‌ನಲ್ಲಿ ಶುಂಠಿ ಕೃಷಿಗೆ ಸುಮಾರು 7ರಿಂದ 8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ.

ನೀವು ಎಷ್ಟು ಗಳಿಸುವಿರಿ ನಾವು ಶುಂಠಿಯಿಂದ ಗಳಿಸುವ ಬಗ್ಗೆ ಮಾತನಾಡಿದರೆ, ಒಂದು ಹೆಕ್ಟೇರ್​ಲ್ಲಿ ಶುಂಠಿಯ ಇಳುವರಿ 150ರಿಂದ 200 ಕ್ವಿಂಟಲ್ ಆಗಿರಬಹುದು. ಮಾರುಕಟ್ಟೆಯಲ್ಲಿ ಕೇಠಿ ಕೆಜಿಗೆ 80 ರೂ. ಅಥವಾ ಪ್ರತಿ ಕೇಜಿಗೆ 60 ರೂಪಾಯಿ ಎಂದು ಪರಿಗಣಿಸಿದರೆ, ಒಂದು ಹೆಕ್ಟೇರ್​ಗೆ 25 ಲಕ್ಷ ರೂಪಾಯಿವರೆಗೆ ಗಳಿಸುತ್ತದೆ. ವೆಚ್ಚವನ್ನೆಲ್ಲ ತೆಗೆದರೂ 15 ಲಕ್ಷದವರೆಗೆ ಲಾಭವಾಗುತ್ತದೆ.

ಇದನ್ನೂ ಓದಿ: Real Estate Investment: ನಿಮಗೆ ಉತ್ತಮ ಹೂಡಿಕೆಯ ಲಾಭ ಸಿಗಬೇಕೇ? ಆಸ್ತಿ ಮಾರ್ಕೆಟ್‌ನಲ್ಲಿ ಕೇವಲ 5000 ರೂಪಾಯಿ ಹೂಡಿ

Published On - 11:23 am, Sat, 25 December 21

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್