SBI Customer Alert: ಎಸ್ಬಿಐ ಗ್ರಾಹಕರೇ ಎಚ್ಚರ, ಇಂಥ ನಕಲಿ ಸಂದೇಶಗಳಿಗೆ ಸ್ಪಂದಿಸದಿರಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ವಂಚನೆಯ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಬಗ್ಗೆ ಹರಿದಾಡುತ್ತಿರುವ ನಕಲಿ ಎಸ್ಸೆಮ್ಮೆಸ್ ಬಗ್ಗೆ ಪ್ರೆಸ್ ಇನ್ಫರ್ಮೇಷನ್ ಬ್ಯುರೋದಿಂದ ಎಚ್ಚರಿಕೆ ನೀಡಿದೆ. “ನಿಮ್ಮ ಖಾತೆ ಸ್ಥಗಿತವಾಗಿದೆ” ಎಂಬ ನಕಲಿ ಸಂದೇಶಗಳು ಬರುತ್ತಿರುವುದಾಗಿ ಮತ್ತು ಅಂಥ ಎಸ್ಸೆಮ್ಮೆಸ್ಗಳಿಗೆ ಪ್ರತಿಕ್ರಿಯೆ ನೀಡದಂತೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ, ಆ ರೀತಿಯ ಇಮೇಲ್ಗಳಿಗೂ ಸ್ಪಂದಿಸದಂತೆ, ವೈಯಕ್ತಿಕ ಮಾಹಿತಿಯನ್ನೋ ಅಐವಾ ಬ್ಯಾಂಕ್ ವಿವರಗಳನ್ನೋ ಹಂಚಿಕೊಳ್ಳದಂತೆ ಸೂಚಿಸಿದ್ದು, ಆ ಮೂಲಕ ವಂಚನೆಯ ಚಟುವಟಿಕೆಗಳನ್ನು ನಿಯಂತ್ರಿಸಬಹುದು ಎಂದು ಹೇಳಲಾಗಿದೆ. “ಒಂದು ಸಂದೇಶ ಹರಿದಾಡುತ್ತಿದೆ, ಅದರಲ್ಲಿ ನಿಮ್ಮ @TheOfficialSBI ಖಾತೆ ಬ್ಲಾಕ್ ಮಾಡಲಾಗಿದೆ ಎಂದಿರುವುದು #FAKE.” ಈ ವಂಚಕರ ಚಟುವಟಿಕೆಯನ್ನು ನಿಯಂತ್ರಿಸಲು ಪಿಐಬಿ ಈಚೆಗೆ ಟ್ವೀಟ್ ಮಾಡಿ, “ನಿಮ್ಮ ವೈಯಕ್ತಿಕ ಅಥವಾ ಬ್ಯಾಂಕಿಂಗ್ ಮಾಹಿತಿ ಕೋರಿದರೆ ಇಮೇಲ್/ಎಸ್ಸೆಮ್ಮೆಸ್ ಮೂಲಕ ಹಂಚಿಕೊಳ್ಳಬೇಡಿ. ಅಂಥ ಸಂದೇಶಗಳು ಬಂದಲ್ಲಿ ತಕ್ಷಣವೇ phishing@sbi.co.inಗೆ ವರದಿ ಮಾಡಿ,” ಎನ್ನಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸಹ ನಕಲಿ ಎಸ್ಸೆಮ್ಮೆಸ್ ಮತ್ತು ಇಮೇಲ್ ವಿರುದ್ಧ ನಿರಂತರವಾಗಿ ಎಚ್ಚರಿಸುತ್ತಲೇ ಇದೆ. “ಯಾರಾದರೂ ಮೋಸ ಮಾಡಿ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವಿಥ್ಡ್ರಾ ಮಾಡಿದಲ್ಲಿ ಬ್ಯಾಂಕ್ ಗಮನಕ್ಕೆ ತಕ್ಷಣ ತನ್ನಿ,” ಎಂದು ಆರ್ಬಿಐ ಸಲಹೆ ನೀಡಿದೆ. ಮಾರ್ಚ್ನಲ್ಲಿ ರಿಸರ್ವ್ ಬ್ಯಾಂಕ್ ಜಾಗೃತಿ ಬುಕ್ಲೆಟ್ ಹಂಚಿತ್ತು. ಹೇಗೆ ವಂಚನೆ ನಡೆಯುತ್ತದೆ, ಅವುಗಳನ್ನು ನಿಯಂತ್ರಿಸಲು ಗ್ರಾಹಕರು ಏನು ಮಾಡಬೇಕು ಎಂಬುದನ್ನು ವಿವರಿಸಲಾಗಿತ್ತು. “ಅನುಮಾನಾಸ್ಪದ ಅಥವಾ ವಂಚನೆಯ ಲಿಂಕ್ಗಳು ಅಜ್ಞಾತ ಮೂಲಗಳಿಂದ ಬಂದಲ್ಲಿ ಅಂಥ ಇಮೇಲ್ಗಳನ್ನು ಎಂದಿಗೂ ತೆರೆಯಬೇಡಿ, ಪ್ರತಿಕ್ರಿಯಿಸಬೇಡಿ,” ಎಂದು ಒಂದಂಶದಲ್ಲಿ ವಿವರಣೆ ನೀಡಲಾಗಿದೆ.
ಎಸ್ಬಿಐನಿಂದ ಗ್ರಾಹಕರಿಗೆ ನಕಲಿ ಎಸ್ಸೆಮ್ಮೆಸ್/ಇಮೇಲ್ಗಳ ಬಗ್ಗೆ ಎಚ್ಚರಿಕೆ
“ಸರ್ಚ್ ಎಂಜಿನ್ಗಳಲ್ಲಿ ಲಿಸ್ಟ್ ಆದ ನಕಲಿ ವಂಚಕ ಗ್ರಾಹಕ ಸೇವಾ ಸಂಖ್ಯೆಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಸರಿಯಾದ ಸಂಪರ್ಕ ಮಾಹಿತಿ ಯಾವಾಗಲೂ ಎಸ್ಬಿಐನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ,” ಎಂದು ಶನಿವಾರದಂದು ಗ್ರಾಹಕರಿಗೆ ಎಸ್ಬಿಐ ಇನ್ಫೋಸೆಕ್ ತಂಡವು ತಿಳಿಸಿದೆ. ಎಸ್ಬಿಐ ಹೆಸರಲ್ಲಿ ಬರುತ್ತಿರುವ ನಕಲಿ ಸಂದೇಶಗಳ ಬಗ್ಗೆ ಕೂಡ ಕಳೆದ ತಿಂಗಳು ಸಾರ್ವಜನಿಕ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ. “ಅಂಥ ಎಸ್ಸೆಮ್ಮೆಸ್ಗಳು ವಂಚನೆಗೆ ಎಡೆ ಮಾಡಿಕೊಡಬಹುದು, ಇದರಿಂದ ನಿಮ್ಮ ಉಳಿತಾಯ ಕಳೆದುಕೊಳ್ಳಬಹುದು. ಎಂಬೆಡ್ ಆದ ಲಿಂಕ್ ಕ್ಲಿಕ್ ಮಾಡಬೇಡಿ. ನಿಮಗೆ ಎಸ್ಸೆಮ್ಮೆಸ್ ಬಂದಾಗ ಸರಿಯಾದ ಎಸ್ಬಿಐ ಶಾರ್ಟ್ ಕೋಡ್ಗಾಗಿ ನೋಡಿ. ಎಚ್ಚರಿಕೆಯಿಂದ ಇರಿ ಹಾಗೂ #SafeWithSBI,” ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.
“ಗ್ರಾಹಕರ ಮಾಹಿತಿ ಪಡೆಯುವುದಕ್ಕೆ ಎಸ್ಬಿಐ ಎಂದಿಗೂ ಇಮೇಲ್ ಕಳುಹಿಸುವುದಿಲ್ಲ. ನಿಮ್ಮ ಯೂಸರ್ ನೇಮ್ ಅಥವಾ ಪಾಸ್ವರ್ಡ್ ಅಥವಾ ಬೇರೆ ಯಾವುದೇ ಮಾಹಿತಿಯನ್ನು ಎಸ್ಬಿಐ ಕೇಳುವುದಕ್ಕೆ ಇಮೇಲ್ ಕಳುಹಿಸುವುದಿಲ್ಲ. ಒಂದು ವೇಳೆ ಅಂಥ ಮೇಲ್ ಬಂದಲ್ಲಿ ವಂಚಕ ಮೇಲ್ ಆಗಿರುತ್ತದೆ,” ಎಂದು ಎಚ್ಚರಿಸಲಾಗಿದೆ. “ಸ್ಟೇಟ್ ಬ್ಯಾಂಕ್ ಅಥವಾ ಅದರ ಪ್ರತಿನಿಧಿಗಳು ಎಂದಿಗೂ ನಿಮ್ಮ ವೈಯಕ್ತಿಕ ಮಾಹಿತಿ, ಪಾಸ್ವರ್ಡ್ ಅಥವಾ ಒನ್ಟೈಮ್ ಎಸ್ಸೆಮ್ಮೆಸ್ ಪಾಸ್ವರ್ಡ್ಗಾಗಿ ಇಮೇಲ್/ಎಸ್ಸೆಮ್ಮೆಸ್ಗಳು ಅಥವಾ ಫೋನ್ ಕರೆ ಮಾಡುವುದಿಲ್ಲ.”
ಅಂಥ ಇ-ಮೇಲ್, ಎಸ್ಸೆಮ್ಮೆಸ್ ಅಥವಾ ಫೋನ್ ಕರೆ ಮೂಲಕ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಖಾತೆಯಲ್ಲಿ ಹಣವನ್ನು ವಂಚಕ ದಾರಿಯಲ್ಲಿ ವಿಥ್ಡ್ರಾ ಮಾಡಬಹುದು. ಇಂಥ ಇಮೇಲ್, ಟೆಕ್ಸ್ಟ್ ಸಂದೇಶ, ಅಥವಾ ಫೋನ್ ಕರೆಗೆ ಎಂದಿಗೂ ಸ್ಪಂದಿಸಬೇಡಿ. ಆ ಕೂಡಲೇ ಅದರ ಬಗ್ಗೆ ವರದಿ ಮಾಡಿ. ಅಂಥ ಇಮೇಲ್, ಎಸ್ಸೆಮ್ಮೆಸ್, ಇಮೇಲ್ ಅಥವಾ ಫೋನ್ ಕರೆ ಬಂದಲ್ಲಿ ಕೂಡಲೇ phishing@sbi.co.in ಸಂಪರ್ಕಿಸಿ. ಅಪ್ಪಿತಪ್ಪಿ ನಿಮ್ಮ ಕ್ರೆಡೆನ್ಷಿಯಲ್ಸ್ ತಿಳಿಸಿದ್ದಲ್ಲಿ ಕೂಡಲೇ ನಿಮ್ಮ ಪಾಸ್ವರ್ಡ್ ಬದಲಾಯಿಸಿ,” ಎಂದು ಎಸ್ಬಿಐ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Electric Car Loan: ಎಸ್ಬಿಐನಿಂದ ಎಲೆಕ್ಟ್ರಿಕ್ ಕಾರು ಸಾಲ ಶೇ 7.25 ಬಡ್ಡಿ ದರದಿಂದ ಆರಂಭ