AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಹಣ ವರ್ಗಾವಣೆ: ಫಲಾನುಭವಿ ನೋಂದಣಿ ಅಗತ್ಯ ಇದೆಯೇ? ಗರಿಷ್ಠ ಮಿತಿ ಮತ್ತಿತರ ವಿವರಗಳನ್ನು ಪರಿಶೀಲಿಸಿ

ಯುಪಿಐ ಪಾವತಿ ಮಾಡುವುದು ಹೇಗೆ, ಗರಿಷ್ಠ ಮಿತಿ ಏನು ಎಂಬಿತ್ಯಾದಿ ಮಾಹಿತಿ ಈ ಲೇಖನದಲ್ಲಿದೆ. ಇದರ ಮೂಲಕ ನಿಮಗೆ ಅನುಕೂಲ ಆಗಲಿದೆ.

ಯುಪಿಐ ಹಣ ವರ್ಗಾವಣೆ: ಫಲಾನುಭವಿ ನೋಂದಣಿ ಅಗತ್ಯ ಇದೆಯೇ? ಗರಿಷ್ಠ ಮಿತಿ ಮತ್ತಿತರ ವಿವರಗಳನ್ನು ಪರಿಶೀಲಿಸಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata

Updated on: May 24, 2022 | 2:10 PM

Share

ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (UPI) ಎಂಬುದು ಒಂದು ಶೀಘ್ರ ಪಾವತಿ ವ್ಯವಸ್ಥೆ ಆಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದೆ. ಇಂಟರ್​ಫೇಸ್ ಜನರಿಗೆ ಬ್ಯಾಂಕ್ ಖಾತೆಗಳ ನಡುವೆ ಶೀಘ್ರವಾಗಿ ಹಣವನ್ನು ವರ್ಗಾಯಿಸುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಐಎಂಪಿಎಸ್​ಗಿಂತ ಯುಪಿಐ ಹೇಗೆ ಭಿನ್ನ ಎಂದು ಹಲವರು ಯೋಚಿಸಬಹುದು. ಯುಪಿಐ ಈ ಕೆಳಗಿನ ವಿಧಾನಗಳಲ್ಲಿ ಐಎಂಪಿಎಸ್​ಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ಇಲ್ಲಿ ನಮೂದಿಸಬೇಕು: P2P ಪುಲ್ ಕಾರ್ಯವನ್ನು ಒದಗಿಸುವುದು, ವ್ಯಾಪಾರಿ ಪಾವತಿಗಳನ್ನು ಸರಳಗೊಳಿಸುವುದು, ಹಣ ವರ್ಗಾವಣೆಗಾಗಿ ಒಂದೇ ಅಪ್ಲಿಕೇಷನ್ ಮತ್ತು ಒಂದೇ ಕ್ಲಿಕ್ ಎರಡು ಅಂಶದ ದೃಢೀಕರಣ ಇಷ್ಟೆಲ್ಲ ಅನುಕೂಲಗಳಿವೆ.

ಯುಪಿಐ ಬಳಸಿ ಪಾವತಿಸುವುದು ಹೇಗೆ? ಏನನ್ನಾದರೂ ಖರೀದಿಸುವಾಗ ಬಳಕೆದಾರರು ಯುಪಿಐ ಮೂಲಕ ವಹಿವಾಟು ಮಾಡಲು ಆಯ್ಕೆ ಮಾಡಬಹುದು. ವಹಿವಾಟು ನಡೆಸಲು, ಬಳಕೆದಾರರು ತಮ್ಮ ಪಾವತಿ ವಿಳಾಸವನ್ನು ನಮೂದಿಸಬೇಕಾಗುತ್ತದೆ (ಉದಾ – xyz@upi). ಒಮ್ಮೆ ನಮೂದಿಸಿದ ನಂತರ, ಬಳಕೆದಾರರು BHIM ಅಪ್ಲಿಕೇಷನ್‌ನಲ್ಲಿ ಸಂಗ್ರಹಣೆ ವಿನಂತಿಯನ್ನು ಪಡೆಯುತ್ತಾರೆ.

ಯುಪಿಐ ಮೂಲಕ ಹಣವನ್ನು ವರ್ಗಾಯಿಸುವ ಮೊದಲು ನೀವು ಫಲಾನುಭವಿಯನ್ನು ನೋಂದಾಯಿಸುವ ಅಗತ್ಯವಿದೆಯೇ? ಯುಪಿಐ ಮೂಲಕ ಹಣವನ್ನು ವರ್ಗಾಯಿಸಲು ಫಲಾನುಭವಿಯನ್ನು ನೋಂದಾಯಿಸುವ ಅಗತ್ಯವಿಲ್ಲ. ಏಕೆಂದರೆ ಈ ಮೊತ್ತವನ್ನು ವರ್ಚುವಲ್ ಐಡಿ/ಖಾತೆ+ಐಎಫ್‌ಎಸ್‌ಸಿ/ಆಧಾರ್ ಸಂಖ್ಯೆ ಆಧಾರದ ಮೇಲೆ ವರ್ಗಾಯಿಸಲಾಗುತ್ತದೆ.

ಯುಪಿಐ ವಹಿವಾಟುಗಳಿಗಾಗಿ ನಿಮಗೆ ಬ್ಯಾಂಕ್ ಖಾತೆ ಅಗತ್ಯವಿದೆಯೇ? ಈ ಹಿಂದೆ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಮಾತ್ರ ಜೋಡಣೆ ಮಾಡಲು ಅನುಮತಿಸಲಾಗಿತ್ತು. ಆದರೆ ಈಗ ಅವರು ಪಿಪಿಐ ವ್ಯಾಲೆಟ್‌ಗಳನ್ನು ಯುಪಿಐನಲ್ಲಿ ಜೋಡಣೆ ಮಾಡಬಹುದು.

ಹಣ ಕಡಿತ ಆದ ಮೇಲೆ ವಹಿವಾಟು ವಿಫಲವಾದರೆ ಏನು? ಅಂತಹ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಯುಪಿಐ ನಿರಾಕರಣೆಗಳಿಗೆ ರಿಯಲ್ ಟೈಮ್ ರಿವರ್ಸಲ್‌ಗಳನ್ನು ಒದಗಿಸುತ್ತದೆ ಮತ್ತು ಮೊತ್ತವನ್ನು ತಕ್ಷಣವೇ ಪಾವತಿದಾರರ ಖಾತೆಗೆ ವರ್ಗಾಯಿಸಲಾಗುತ್ತದೆ. ಇದು ಆಗದಿದ್ದಲ್ಲಿ ಗ್ರಾಹಕರು ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ವಹಿವಾಟು ವಿಫಲವಾದ ಸಂದರ್ಭದಲ್ಲಿ ಹಣವನ್ನು ಸ್ವಲ್ಪ ಸಮಯದ ನಂತರ ಖಾತೆಗೆ ಹಿಂತಿರುಗಿಸಲಾಗುತ್ತದೆ. ಕೆಲವೊಮ್ಮೆ ಇದು ಉದ್ದೇಶಿತಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಯುಪಿಐ ಬಳಸಿಕೊಂಡು ಹಣ ವರ್ಗಾವಣೆಯ ಮಿತಿ ಏನು? ಸದ್ಯಕ್ಕೆ ಪ್ರತಿ ಯುಪಿಐ ವಹಿವಾಟಿನ ಗರಿಷ್ಠ ಮಿತಿ 2 ಲಕ್ಷ ರೂಪಾಯಿ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: UPI For Feature Phones: ಫೀಚರ್​ ಫೋನ್​ ಯುಪಿಐಗೆ ಚಾಲನೆ ನೀಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್

ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್