INCOME TAX: ಆದಾಯ ತೆರಿಗೆ ಕಟ್ಟುವಾಗ ಮಾಡುವ ತಪ್ಪುಗಳಿವು: ಇಂಥ ತಪ್ಪುಗಳು ಅಪರಾಧವೆಂದು ತಿಳಿದಿದೆಯಾ?

ಐಟಿ ರಿಟರ್ನ್ಸ್ ಅನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಸಲ್ಲಿಸಬಹುದಾದರೂ ನಿಯಮಗಳನ್ನು ಅನುಸರಿಸಿಕೊಂಡು ಯಾವುದೇ ತಪ್ಪುಗಳನ್ನು ಮಾಡದೆ, ಸರಿಯಾದ ದಾಖಲೆಯೊಂದಿಗೆ ಫೈಲ್ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿರುತ್ತದೆ.

INCOME TAX: ಆದಾಯ ತೆರಿಗೆ ಕಟ್ಟುವಾಗ ಮಾಡುವ ತಪ್ಪುಗಳಿವು: ಇಂಥ ತಪ್ಪುಗಳು ಅಪರಾಧವೆಂದು ತಿಳಿದಿದೆಯಾ?
income tax returns
TV9kannada Web Team

| Edited By: Rakesh Nayak

May 24, 2022 | 10:47 AM

ಹೆಚ್ಚಿನ ಜನರು ಆದಾಯ ತೆರಿಗೆ (Income Tax) ಸಲ್ಲಿಕೆಯನ್ನು ಅನಗತ್ಯ ಎಂದು ಅಸಡ್ಡೆ ತೋರುತ್ತಾರೆ. ಆದರೆ ಇದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ನೈತಿಕ ಮತ್ತು ಸಾಮಾಜಿಕ ಕರ್ತವ್ಯವಾಗಿದೆ ಎಂಬುದನ್ನು ಮರೆಯಬಾರದು. ಪ್ರತಿ ಸರ್ಕಾರಿ ಇಲಾಖೆಯ ಸುಧಾರಿತ ತಂತ್ರಜ್ಞಾನ ಮತ್ತು ಡಿಜಿಟಲೈಸೇಷನ್​ನೊಂದಿಗೆ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲಿಂಗ್ ಅನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು. ಇದರ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ. ಅಧಿಕೃತ ವೆಬ್‌ಸೈಟ್‌ನಿಂದ ಸಂಬಂಧಿತ ವರ್ಷಕ್ಕೆ ಐಟಿಆರ್ ತಯಾರಿ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಸಾಫ್ಟ್‌ವೇರ್ ನೀಡಿದ ಸೂಚನೆಗಳನ್ನು ಅನುಸರಿಸಬಹುದು. ಆದರೆ ರಿಟರ್ನ್ಸ್ ಸಲ್ಲಿಸುವಾಗ ಕೆಲವರು ಒಂದಷ್ಟು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು. ಇದಕ್ಕೂ ಮುನ್ನ ಆದಾಯ ತೆರಿಗೆ ರಿಟರ್ನ್ಸ್ ಅಂದರೇನು ಅಂತ ತಿಳಿದುಕೊಳ್ಳೋಣ.

ಆದಾಯ ತೆರಿಗೆ ರಿಟರ್ನ್ಸ್ (ITR) ಅಂದರೆ, ಆದಾಯ ತೆರಿಗೆ ಇಲಾಖೆಯೊಂದಿಗೆ ವ್ಯಕ್ತಿ ಅಥವಾ ವ್ಯವಹಾರದಿಂದ ವರ್ಷವಿಡೀ ಗಳಿಸಿದ ಆದಾಯದ ವಿವರಗಳನ್ನು ವಿವರಿಸುವ ನಮೂನೆಗಳು. ಈಗ ನಾವು ರಿಟರ್ನ್ಸ್ ಸಲ್ಲಿಸುವಾಗ ಮಾಡುವ ತಪ್ಪುಗಳು ಯಾವುದು ಅಂತ ಹೇಳುತ್ತೇವೆ. ಇಂಥ ತಪ್ಪುಗಳು ಆಗದಂತೆ ನೋಡಿಕೊಳ್ಳಿ.

ಇದನ್ನೂ ಓದಿ: Income Tax Notice: ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಏಕೆ ಬರುತ್ತದೆ? ಆಗ ತೆರಿಗೆ ಪಾವತಿದಾರರು ಏನು ಮಾಡಬೇಕು?

ತಪ್ಪಾದ  ವಿವರಗಳನ್ನು ಒದಗಿಸುವುದು

ರಿಟರ್ನ್ಸ್ ಸಲ್ಲಿಸುವಾಗ ವೈಯಕ್ತಿಕ ದಾಖಲೆಗಳಾದ ಪ್ಯಾನ್, ಇ-ಮೇಲ್ ಐಡಿ, ದೂರವಾಣಿ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಮುಂತಾದ ವಿವರಗಳನ್ನು ನೀಡಬೇಕಾಗುತ್ತದೆ. ಆಕಸ್ಮಾತ್ ನೀವು ತಪ್ಪಾದ ದಾಖಲೆಯನ್ನು ನೀಡಿದ್ದೇ ಆದಲ್ಲಿ ಆದಾಯ ತೆರಿಗೆ ಇಲಾಖೆಯು ಡೇಟಾ ಹೊಂದಾಣಿಕೆಯಾಗುತ್ತಿಲ್ಲ ಎಂದು ಇ-ಫೈಲಿಂಗ್ ಅನ್ನು ತಿರಸ್ಕರಿಸಬಹುದು. ಹೀಗಾಗಿ ಸರಿಯಾದ ದಾಖಲೆಗಳ ವಿವರಗಳನ್ನೇ ನೀಡಿ.

ಆದಾಯದ ಮೂಲಗಳನ್ನು ಸೇರಿಸದಿರುವುದು

ಆದಾಯ ತೆರಿಗೆ ಕಾಯ್ದೆಯಡಿ, ಎಲ್ಲ ಆದಾಯಗಳನ್ನು ಐದು ವಿಭಿನ್ನ ವಿಭಾಗದ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಅವುಗಳು ಯಾವುದೆಂದರೆ  ಮನೆ ಆಸ್ತಿ, ಬಂಡವಾಳ ಲಾಭದ ಆದಾಯ, ಸಂಬಳದ ಆದಾಯ, ವ್ಯಾಪಾರದ ಆದಾಯ ಹಾಗೂ ಇತರೆ ಮೂಲಗಳಿಂದ ಬಂದ ಆದಾಯ. ಕೆಲವರು ಇಂತಹ ಆದಾಯ ತೆರಿಗೆಯನ್ನು ಬ್ಯಾಂಕ್ ಕಡಿತಗೊಳಿಸಿರುವುದರಿಂದ ಆದಾಯ ನಮೂದಿಸಬೇಕಾಗಿಲ್ಲ ಎಂದು ಭಾವಿಸುತ್ತಾರೆ. ಆದರೂ ಟಿಡಿಎಸ್​ ಅನ್ನು ಕಡಿತಗೊಳಿಸಿದ್ದರೂ ಅದನ್ನು ರಿಟರ್ನ್‌ನಲ್ಲಿ ಬಹಿರಂಗಪಡಿಸಬೇಕಾಗುತ್ತದೆ.

ಇದನ್ನೂ ಓದಿ: Tax On Gold: ಅಟ್ಟ ಏರಿ ಕುಳಿತಿದ್ದ ಚಿನ್ನದ ಬೆಲೆಯಲ್ಲಿ ಒಂದಿಷ್ಟು ಇಳಿಕೆ; ಮನೆಯಲ್ಲಿರುವ ಚಿನ್ನಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ ಗೊತ್ತಾ?

ಕ್ಲೇಮ್ ಕಡಿತದ ಬಗ್ಗೆ ಗಮನಹರಿಸಿ

ತೆರಿಗೆ ಹೊಣೆಗಾರಿಕೆ ಕಡಿಮೆ ಮಾಡಲು ಕಡಿತಗಳು ಬಹಳ ನಿರ್ಣಾಯಕ ಆಗಿರುವುದರಿಂದ ಮಾಡಲಾದ ಕ್ಲೇಮ್‌ಗಳು ಕಾನೂನಿಗೆ ಅನುಗುಣವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ರ ಪ್ರಕಾರ, PPF ಖಾತೆಗೆ ಕೊಡುಗೆ, ಅಂಗವಿಕಲ ವ್ಯಕ್ತಿಯ ಮೇಲಿನ ಖರ್ಚು, ಚಾರಿಟಬಲ್ ಟ್ರಸ್ಟ್‌ಗೆ ಕೊಡುಗೆ ಇತ್ಯಾದಿಗಳಿಗೆ ಕಡಿತಗಳನ್ನು ಮಾಡಬಹುದು. ಮಾಡಿದ ಕ್ಲೇಮ್‌ಗಳು ತೆರಿಗೆದಾರರು ಅರ್ಹರಾಗಿರುವ ಕಡಿತಗಳಿಗೆ ಮಾತ್ರ ಆಗಿರಬೇಕು. ಮೇಲಾಗಿ, ರಿಟರ್ನ್‌ಗಳನ್ನು ಸಲ್ಲಿಸುವಾಗ ಕ್ಲೇಮ್‌ಗಳನ್ನು ಮಾಡಬೇಕಾಗುತ್ತದೆ ಅಥವಾ ಐಟಿ ಇಲಾಖೆಯು ಯಾವುದೇ ನಂತರದ ಕ್ಲೇಮ್‌ಗಳನ್ನು ತಿರಸ್ಕರಿಸಬಹುದು.

ಸರಿಯಾದ ಫಾರ್ಮ್ ಸಲ್ಲಿಸದಿರುವುದು

ಆದಾಯ ತೆರಿಗೆ ರಿಟರ್ನ್ಸ್​ ಅನ್ನು ಸಲ್ಲಿಸುವಾಗ ಮಾಡುವ  ಇನ್ನೊಂದು ತಪ್ಪೆಂದರೆ, ಫಾರ್ಮ್​ ಅನ್ನು ಸರಿಯಾಗಿ ಸಲ್ಲಿಸದಿರುವುದು. ಪ್ರತಿಯೊಂದು ಫಾರ್ಮ್ ಪ್ರಕಾರವು ನಿರ್ದಿಷ್ಟವಾಗಿ ಪ್ರತಿಯೊಂದು ರೀತಿಯ ವ್ಯಾಪಾರ ಅಥವಾ ಆದಾಯದ ಮೂಲವನ್ನು ಸೂಚಿಸುತ್ತದೆ. ಹೀಗಾಗಿ ಆನ್‌ಲೈನ್ ಅಥವಾ ಆಫ್‌ಲೈನ್ ಫಾರ್ಮ್​ನಲ್ಲಿ ಅವುಗಳನ್ನು ಸಲ್ಲಿಸುವಾಗ ಪರಿಶೀಲಿಸುವುದು ಮತ್ತು ಮರುಪರಿಶೀಲಿಸುವುದು ತೆರಿಗೆದಾರರ ಕರ್ತವ್ಯವಾಗಿದೆ.

ಇದನ್ನೂ ಓದಿ: Income Tax: ಹೆಚ್ಚಿನ ನಗದು ಒಳಗೊಂಡ ಈ 5 ವಹಿವಾಟಿನ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ, ಗಮನಿಸಿ

ವಿನಾಯಿತಿ ಬಗ್ಗೆ ವರದಿ ಮಾಡದಿರುವುದು

ಆದಾಯವು ಲಾಭಾಂಶಗಳು, ದೀರ್ಘಾವಧಿಯ ಲಾಭಗಳು ಇತ್ಯಾದಿಗಳ ರೂಪದಲ್ಲಿ ಇರಬಹುದು. ಅವುಗಳಲ್ಲಿ ಹೆಚ್ಚಿನವು ತೆರಿಗೆಗಳಿಂದ ವಿನಾಯಿತಿ ಪಡೆದಿವೆ. ಅಂತಹ ಆದಾಯಗಳಿಗೆ ತೆರಿಗೆಗಳನ್ನು ಪಾವತಿಸುವ ಅಗತ್ಯವಿ ಇಲ್ಲದಿದ್ದರೂ ಅವುಗಳನ್ನು ವರದಿ ಮಾಡಬೇಕಾಗುತ್ತದೆ. ವರದಿ ಮಾಡದ ಅಥವಾ ಕಡಿಮೆ ವರದಿ ಮಾಡುವ ಆದಾಯವನ್ನು ಆದಾಯ ತೆರಿಗೆ ರಿಟರ್ನ್ಸ್ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಐಟಿ ರಿಟರ್ನ್ಸ್ ಅನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಸಲ್ಲಿಸಬಹುದು. ಆದರೆ ನಿಯಮಗಳನ್ನು ಅನುಸರಿಸಲು ಮತ್ತು ಮೇಲೆ ತಿಳಿಸಿದ ತಪ್ಪುಗಳನ್ನು ಅಥವಾ ಅಂಥ ಸಾಮಾನ್ಯ ತಪ್ಪುಗಳು ನಡೆಯದಂತೆ ಪ್ರತಿಯೊಬ್ಬ ನಾಗರಿಕರೂ ನೋಡಿಕೊಳ್ಳಬೇಕು.

ಇದನ್ನೂ ಓದಿ: ITR Filing: 2021-22ರ ಹಣಕಾಸು ವರ್ಷದ ವಿವಿಧ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಫಾರ್ಮ್ ಅಧಿಸೂಚನೆ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada