ITR Filing: 2021-22ರ ಹಣಕಾಸು ವರ್ಷದ ವಿವಿಧ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಫಾರ್ಮ್ ಅಧಿಸೂಚನೆ

ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ 2021-22ರ ಹಣಕಾಸು ವರ್ಷಕ್ಕೆ ಐಟಿಆರ್​ ಫೈಲಿಂಗ್​ ಬಗ್ಗೆ ವಿವಿಧ ಫಾರ್ಮ್​ಗಳ ಅಧಿಸೂಚನೆ ಹೊರಡಿಸಲಾಗಿದೆ.

ITR Filing: 2021-22ರ ಹಣಕಾಸು ವರ್ಷದ ವಿವಿಧ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಫಾರ್ಮ್ ಅಧಿಸೂಚನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 05, 2022 | 2:32 PM

ನವದೆಹಲಿ: ಮಾರ್ಚ್ 30, 2022ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹಣಕಾಸು ವರ್ಷ 2021-22ಕ್ಕಾಗಿ ಆದಾಯ ತೆರಿಗೆ ರಿಟರ್ನ್ (ITR) ಫಾರ್ಮ್‌ಗಳನ್ನು ಸೂಚಿಸಿದೆ. ಈ ಹಣಕಾಸು ವರ್ಷದಲ್ಲಿ ಸರ್ಕಾರವು ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಯಥಾಸ್ಥಿತಿಯಲ್ಲಿ ಇಟ್ಟಂತೆಯೇ ರಿಟರ್ನ್ ಫಾರ್ಮ್‌ಗಳನ್ನು ಸಹ ಬಹುತೇಕ ಬದಲಾಯಿಸದೆ ಇರಿಸಿದೆ.

ಐಟಿಆರ್-1 ಐಟಿಆರ್-1 ಅನ್ನು ಕಳೆದ ವರ್ಷದಂತೆ 50 ಲಕ್ಷ ರೂಪಾಯಿ ತನಕದ ಒಟ್ಟು ಆದಾಯ ಹೊಂದಿರುವ ವ್ಯಕ್ತಿಗಳು ಸಲ್ಲಿಸಬಹುದು. ಅಂತಹ ವ್ಯಕ್ತಿಗಳಿಗೆ ಆ ಆದಾಯದ ಮೂಲವು ಸಂಬಳ, ಮನೆಯ ಆಸ್ತಿಯಿಂದ ಮತ್ತು ಬಡ್ಡಿ, ಲಾಭಾಂಶ ಇತ್ಯಾದಿಗಳಂಥದ್ದು ಆಗಿರಬಹುದು ಮತ್ತು ರೂ 5,000 ವರೆಗಿನ ಕೃಷಿ ಆದಾಯವನ್ನು ಒಳಗೊಂಡಿರಬಹುದು. ಈ ಫಾರ್ಮ್ ಅನ್ನು ಆಯ್ಕೆ ಮಾಡುವ ವ್ಯಕ್ತಿಗಳು ತಮ್ಮ ಸಂಬಳದ ವಿವಿಧ ಅಂಶಗಳನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ಸಂಬಳ, ಸವಲತ್ತು, ಸೆಕ್ಷನ್ 10ರ ಅಡಿಯಲ್ಲಿ ವಿನಾಯಿತಿ ನೀಡಲಾದ ಭತ್ಯೆಗಳು (ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಂಡರೆ ಎಚ್​ಆರ್​ಎ, ಎಲ್​ಟಿಎ ಇಂಥವು) ಇತ್ಯಾದಿ.

ಈ ಫಾರ್ಮ್ ಅನ್ನು ಭರ್ತಿ ಮಾಡಲು ಅರ್ಹರಲ್ಲದವರು ಯಾರು ಅಂತ ನೋಡುವುದಾದರೆ, ಕಂಪೆನಿಯ ನಿರ್ದೇಶಕರಾಗಿರುವ ಅಥವಾ ಲಿಸ್ಟ್ ಮಾಡದ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿದ ವ್ಯಕ್ತಿಯನ್ನು ಒಳಗೊಂಡಿರುತ್ತದೆ ಅಥವಾ ESOP ಗಳ ಮೇಲಿನ ಆದಾಯ ತೆರಿಗೆಯನ್ನು ಮುಂದಕ್ಕೆ ಹಾಕಲಾಗಿದೆ ಅಥವಾ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 194N ಅಡಿಯಲ್ಲಿ ಟಿಡಿಎಸ್ ಕಡಿತಗೊಳಿಸಲಾಗಿದೆ.

ಈ ಮಧ್ಯೆ, ವಿದೇಶಗಳಲ್ಲಿ ಹೊಂದಿರುವ ಖಾತೆಗಳಿಂದ ಪೆನ್ಷನ್ ಪಡೆಯುವ ಮತ್ತು ಭಾರತದಲ್ಲಿ ಐಟಿಆರ್1 ಅನ್ನು ಸಲ್ಲಿಸುವ ಜನರು ಹೆಚ್ಚುವರಿ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಇವುಗಳಲ್ಲಿ ಸೆಕ್ಷನ್ 89A ಅಡಿಯಲ್ಲಿ ಅಧಿಸೂಚಿತ ದೇಶದಲ್ಲಿ ನಿರ್ವಹಿಸಲಾದ ನಿವೃತ್ತಿ ಪ್ರಯೋಜನ ಖಾತೆ ವಿವರಗಳು ಮತ್ತು ಅಧಿಸೂಚಿತ ಅಲ್ಲದ ದೇಶಗಳೊಂದಿಗೆ ನಿರ್ವಹಿಸಲಾದ ನಿವೃತ್ತಿ ಖಾತೆಯ ವಿವರಗಳು ಸೇರಿವೆ.

ಐಟಿಆರ್-2 ಮ್ಯೂಚುವಲ್ ಫಂಡ್‌ಗಳು, ಸ್ಟಾಕ್‌ಗಳು ಇತ್ಯಾದಿ ಆಸ್ತಿಗಳ ಮಾರಾಟದಿಂದ ಬಂಡವಾಳ ಲಾಭವನ್ನು ಹೊಂದಿರುವ ವ್ಯಕ್ತಿಗಳು ಅಥವಾ ಒಂದಕ್ಕಿಂತ ಹೆಚ್ಚು ಮನೆ ಆಸ್ತಿಯನ್ನು ಹೊಂದಿರುವವರು ಐಟಿಆರ್-2 ಅನ್ನು ಆರಿಸಬೇಕಾಗುತ್ತದೆ. ಆದರೆ ಅವರು ವ್ಯಾಪಾರ ಅಥವಾ ವೃತ್ತಿಯಿಂದ ಲಾಭ ಮತ್ತು ಗಳಿಕೆಯನ್ನು ಕಂಡಿದ್ದರೆ ಅಂಥವರಿಗೆ ಐಟಿಆರ್-2 ಆಗುವುದಿಲ್ಲ. ಮತ್ತೆ ತಮ್ಮ ಉದ್ಯೋಗದಾತರ ಹೆಚ್ಚುವರಿ ವಿವರಗಳನ್ನು ಒದಗಿಸಬೇಕಾಗುತ್ತದೆ.

“ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ಐಟಿಆರ್ 2 ಫಾರ್ಮ್ ಅನ್ನು ಮಾರ್ಪಡಿಸಲಾಗಿದೆ. ಅರ್ಹ ಸ್ಟಾರ್ಟ್‌ಅಪ್‌ಗಳು ಒದಗಿಸಿದ ಸ್ಟಾಕ್ ಆಪ್ಷನ್ ಪ್ರಯೋಜನಗಳಿಗೆ ಸಂಬಂಧಿಸಿದಂತೆ ತೆರಿಗೆಯ ಟ್ರಿಗರ್ ಅನ್ನು ಮಾರಾಟದ ಹಂತಕ್ಕೆ ಮುಂದೂಡಲಾಗಿದೆ. ಅಂತಹ ಮುಂದೂಡುವಿಕೆ ವಿವರಗಳನ್ನು ಸಮಗ್ರಹಿಸಲು ಪ್ರತ್ಯೇಕ ವೇಳಾಪಟ್ಟಿಯನ್ನು ಈಗ ಪರಿಚಯಿಸಲಾಗಿದೆ. ನಿಗದಿತ ಮಿತಿಗಳನ್ನು ಮೀರಿದ ಪಿಎಫ್ ಕೊಡುಗೆಗಳ ಮೇಲಿನ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. ತೆರಿಗೆ ಮರುರಚನೆಯ ಫಾರ್ಮಾಟ್​ಗಳು ಅಂತಹ ಬಡ್ಡಿಯ ವಿವರಗಳನ್ನು ಸಂಗ್ರಹಿಸಲು ಬಯಸುತ್ತವೆ,” ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರರಾದ ಸರಸ್ವತಿ ಕಸ್ತೂರಿರಂಗನ್ ಎಕನಾಮಿಕ್ ಟೈಮ್ಸ್‌ಗೆ ತಿಳಿಸಿರುವುದಾಗಿ ವರದಿ ಆಗಿದೆ.

ಐಟಿಆರ್-3 ಐಟಿಆರ್-4ಗೆ ಅರ್ಹತೆಯನ್ನು ಹೊರತುಪಡಿಸಿ, ವ್ಯಾಪಾರ ಅಥವಾ ವ್ಯವಹಾರದ ಲಾಭಗಳು ಮತ್ತು ವೃತ್ತಿಯಿಂದ ಪಡೆದ ಆದಾಯವನ್ನು ಹೊಂದಿರುವ ವ್ಯಕ್ತಿಗಳು ಹಾಗೂ ಹಿಂದೂ ಅವಿಭಕ್ತ ಕುಟುಂಬಗಳಿಗೆ ಐಟಿಆರ್-3 ಅನ್ವಯಿಸುತ್ತದೆ.

ಐಟಿಆರ್-4 ಐಟಿಆರ್-4 (SUGAM) ವ್ಯಕ್ತಿಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ (LLP ಹೊರತುಪಡಿಸಿ) ರೂ. 50 ಲಕ್ಷದವರೆಗಿನ ಒಟ್ಟು ಆದಾಯವನ್ನು ಹೊಂದಿರುವ ಮತ್ತು ವ್ಯಾಪಾರ ಹಾಗೂ ವೃತ್ತಿಯಿಂದ ಆದಾಯವನ್ನು ಹೊಂದಿದವರಿಗಾಗಿ ಆಗಿದೆ. ಎರಡನೆಯದನ್ನು ಸೆಕ್ಷನ್​ 44AD, 44ADA ಅಥವಾ 44AE ಅಡಿಯಲ್ಲಿ ಲೆಕ್ಕ ಹಾಕಲಾಗುತ್ತದೆ.

ಐಟಿಆರ್-4 ಅನ್ನು ಸಲ್ಲಿಸುವ ವ್ಯಕ್ತಿಯು ಕಂಪೆನಿಯಲ್ಲಿ ನಿರ್ದೇಶಕರಾಗಿ ಇರುವಂತಿಲ್ಲ ಅಥವಾ ಲಿಸ್ಟಿಂಗ್ ಮಾಡದ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿರುವುದಿಲ್ಲ ಅಥವಾ ESOPನಲ್ಲಿ ಆದಾಯ ತೆರಿಗೆಯನ್ನು ಮುಂದೂಡಿದ್ದರೆ ಅಥವಾ 5,000 ರೂಪಾಯಿಗಿಂತ ಹೆಚ್ಚಿನ ಕೃಷಿ ಆದಾಯವನ್ನು ಹೊಂದಿರುವುದಿಲ್ಲ.

ಐಟಿಆರ್-5 ಇದು ವ್ಯಕ್ತಿಗಳು, ಹಿಂದೂ ಅವಿಭಕ್ತ ಕುಟುಂಬಗಳು, ಕಂಪೆನಿಗಳು ಅಥವಾ ಐಟಿಆರ್-7 ಅನ್ನು ಸಲ್ಲಿಸುವ ವ್ಯಕ್ತಿಗಳನ್ನು ಹೊರತುಪಡಿಸಿ ಇತರ ವ್ಯಕ್ತಿಗಳಿಗೆ ಅನ್ವಯಿಸುತ್ತದೆ.

ಐಟಿಆರ್-6 ಐಟಿಆರ್-6 ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ವಿನಾಯಿತಿ ಪಡೆಯುವ ಕಂಪೆನಿಗಳನ್ನು ಹೊರತುಪಡಿಸಿ ಇತರ ಕಂಪೆನಿಗಳಿಗೆ ಅನ್ವಯ ಆಗುತ್ತದೆ.

ಐಟಿಆರ್-7 ಈ ಫಾರ್ಮ್ ಅನ್ನು ಏಪ್ರಿಲ್ 1, 2022ರಂದು ಸರ್ಕಾರವು ಸೂಚಿಸಿದೆ. ಸೆಕ್ಷನ್ 139(4A), 139(4B), 139(4C) ಅಥವಾ 139(4D) ಅಡಿಯಲ್ಲಿ ರಿಟರ್ನ್ ಸಲ್ಲಿಸಲು ಅಗತ್ಯವಿರುವ ಕಂಪೆನಿಗಳು ಸೇರಿದಂತೆ ವ್ಯಕ್ತಿಗಳಿಗೆ ಇದು ಅನ್ವಯಿಸುತ್ತದೆ.

ಇದನ್ನೂ ಓದಿ: ITR filing: ಆಧಾರ್ ಒಟಿಪಿ ಬಳಸಿ ಐಟಿಆರ್ ಫೈಲಿಂಗ್ ಇ-ವೆರಿಫೈ ಮಾಡುವುದು ಹೇಗೆ?

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ