AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR filing: ಆಧಾರ್ ಒಟಿಪಿ ಬಳಸಿ ಐಟಿಆರ್ ಫೈಲಿಂಗ್ ಇ-ವೆರಿಫೈ ಮಾಡುವುದು ಹೇಗೆ?

ಐಟಿಆರ್​ ಫೈಲಿಂಗ್ ಅನ್ನು ಆಧಾರ್ ಒಟಿಪಿ ಬಳಸಿ ಇ- ವೆರಿಫೈ ಮಾಡುವುದು ಹೇಗೆ ಎಂಬುದರ ಹಂತಹಂತವಾದ ವಿವರಣೆ ಈ ಲೇಖನದಲ್ಲಿ ಇದೆ.

ITR filing: ಆಧಾರ್ ಒಟಿಪಿ ಬಳಸಿ ಐಟಿಆರ್ ಫೈಲಿಂಗ್ ಇ-ವೆರಿಫೈ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Dec 31, 2021 | 6:06 PM

Share

ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವಾಗ ಇ-ವೆರಿಫೈ (ಪರಿಶೀಲನೆ) ಮಾಡುವುದು ಅತ್ಯಗತ್ಯ. ವಾಸ್ತವವಾಗಿ ಐಟಿಆರ್​ ಅನ್ನು ಪರಿಶೀಲಿಸದ ಹೊರತು ಅದನ್ನು ಮಾನ್ಯ ಎಂದು ಪರಿಗಣಿಸಲಾಗುವುದಿಲ್ಲ. ಮತ್ತು ಐಟಿಆರ್ ಅನ್ನು ಇ-ವೆರಿಫೈ ಮಾಡುವ ಸುಲಭವಾದ ಮಾರ್ಗವೆಂದರೆ ಆಧಾರ್ ಒಟಿಪಿ. ಆಧಾರ್ ಒಟಿಪಿ ಮೂಲಕ ಐಟಿಆರ್ ಅನ್ನು ಇ-ವೆರಿಫೈ ಮಾಡುವುದು ಹೇಗೆ ಎಂಬುದು ಇಲ್ಲಿದೆ:

– ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿದಾಗ, ಕ್ವಿಕ್ ಲಿಂಕ್‌ಗಳ ಅಡಿಯಲ್ಲಿ (ಪುಟದ ಎಡಭಾಗದಲ್ಲಿ) ಇ-ವೆರಿಫೈ ರಿಟರ್ನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. – ಮುಂದೆ, – ನಾನು ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಲ್ಲಿನ OTP ಬಳಸಿಕೊಂಡು ಪರಿಶೀಲಿಸಲು ಬಯಸುತ್ತೇನೆ ಎಂಬ ಆಯ್ಕೆಯನ್ನು ಆರಿಸಿ. ಆ ನಂತರ ಇ-ವೆರಿಫೈ ಪರದೆಯಲ್ಲಿ ಮುಂದುವರಿಸಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. – ಆಧಾರ್ OTP ಪರದೆಯಲ್ಲಿ ಪರಿಶೀಲಿಸಲಾದ ಆಧಾರ್ ವಿವರಗಳನ್ನು ವ್ಯಾಲಿಡೇಟ್ ಮಾಡುವುದಕ್ಕೆ ನಾನು ಒಪ್ಪುತ್ತೇನೆ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. – ಆಧಾರ್ OTP ಪರದೆಯಲ್ಲಿ ನನ್ನ ಆಧಾರ್ ವಿವರಗಳನ್ನು ವ್ಯಾಲಿಡೇಟ್​ ಮಾಡಲು ನಾನು ಒಪ್ಪುತ್ತೇನೆ ಎಂಬುದನ್ನು ಆಯ್ಕೆ ಮಾಡಬೇಕು. – Generate Aadhaar OTP ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. – ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ 6-ಅಂಕಿಯ OTP ಅನ್ನು ನಮೂದಿಸಿ. – OTP ಕೇವಲ 15 ನಿಮಿಷಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಬಳಕೆದಾರರು OTP ಅನ್ನು ಸರಿಯಾದ ರೀತಿಯಲ್ಲಿ ನಮೂದಿಸಲು ಕೇವಲ 3 ಅವಕಾಶಗಳನ್ನು ಪಡೆಯುತ್ತಾರೆ. – ಒಮ್ಮೆ ಸರಿಯಾಗಿ ಮಾಡಿದ ನಂತರ ಒಂದು ವಹಿವಾಟು ID ಅನ್ನು ಕಳುಹಿಸಲಾಗುತ್ತದೆ, ಅದನ್ನು ಸರಿಯಾಗಿ ಸೇವ್ ಮಾಡಬೇಕು. – ದೃಢೀಕರಣ ಸಂದೇಶವನ್ನು ಸ್ವೀಕರಿಸಲು ಇಮೇಲ್ ಮತ್ತು ನೋಂದಾಯಿತ ಫೋನ್ ಅನ್ನು ಪರಿಶೀಲಿಸಬೇಕು.

ಇದನ್ನೂ ಓದಿ: ITR Filing: ಐಟಿಆರ್ ಫೈಲಿಂಗ್ ದಿನಾಂಕ ವಿಸ್ತರಣೆ ಪ್ರಸ್ತಾವ ಇಲ್ಲ ಎಂದ ಕೇಂದ್ರ ಸರ್ಕಾರ

Published On - 6:05 pm, Fri, 31 December 21

ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ
ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ
ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ