GST rate hike: ಜವಳಿ, ಉಡುಪಿನ ಮೇಲೆ ಜಿಎಸ್​ಟಿ ದರ ಹೆಚ್ಚಳ ಇಲ್ಲ; ಪಾದರಕ್ಷೆಗಳು ಆಗಲಿವೆ ದುಬಾರಿ

ಡಿಸೆಂಬರ್ 31ನೇ ತಾರೀಕಿನ ಶುಕ್ರವಾರದಂದು ನಡೆದ ಜಿಎಸ್​ಟಿ ಸಮಿತಿ ಸಭೆಯಲ್ಲಿ 1000 ರೂಪಾಯಿಯೊಳಗಿನ ಪಾದರಕ್ಷೆಗಳ ಮೇಲೆ ತೆರಿಗೆಯನ್ನು ಶೇ 5ರಿಂದ 12ಕ್ಕೆ ಏರಿಕೆ ಮಾಡಿದ್ದು, ಜನವರಿ 1ರಿಂದ ಬೆಲೆ ಹೆಚ್ಚಳ ಆಗಿದೆ.

GST rate hike: ಜವಳಿ, ಉಡುಪಿನ ಮೇಲೆ ಜಿಎಸ್​ಟಿ ದರ ಹೆಚ್ಚಳ ಇಲ್ಲ; ಪಾದರಕ್ಷೆಗಳು ಆಗಲಿವೆ ದುಬಾರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 31, 2021 | 4:43 PM

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಮಿತಿಯು ಉದ್ಯಮದ ಒತ್ತಡದ ಮಧ್ಯೆ ಜವಳಿ ಮತ್ತು ಉಡುಪು ಉದ್ಯಮದಲ್ಲಿನ ಹಲವಾರು ವಸ್ತುಗಳ ಮೇಲಿನ ತೆರಿಗೆ ದರಗಳನ್ನು ಹೆಚ್ಚಿಸುವ ನಿರ್ಧಾರವನ್ನು ಶುಕ್ರವಾರ ತಡೆಹಿಡಿದಿದೆ. ಆದರೆ ರೂ. 1,000 ವರೆಗಿನ ಪಾದರಕ್ಷೆಗಳ ಮೇಲಿನ ತೆರಿಗೆ ದರವು ಶೇ 5ರಿಂದ ಶೇ 12ಕ್ಕೆ ಏರಿಕೆ ಆಗುತ್ತದೆ. ಇದು ಶನಿವಾರದಿಂದ ಜಾರಿಗೆ ಬರಲಿದೆ.

ಜವಳಿ ವಲಯದ ತೆರಿಗೆಯ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಜಿಎಸ್​ಟಿ ಸಮಿತಿ ನಿರ್ಧರಿಸಿದೆ ಮತ್ತು ಸುಂಕ ತಿದ್ದುಪಡಿ ಅಗತ್ಯವಿರುವ ವಸ್ತುಗಳ ಮೇಲಿನ ತೆರಿಗೆ ದರವನ್ನು ಶೇ 5ರಿಂದ ಶೇ 12ಕ್ಕೆ ಬದಲಾಯಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಚರ್ಚೆಗೆ ಮುಂದಾದ ಏಕೈಕ ವಿಷಯವಾಗಿರುವ ಜವಳಿ ಮೇಲಿನ ತೆರಿಗೆಯನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಮಿತಿ ಪರಿಶೀಲಿಸಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

“ಇಂದು ಜಿಎಸ್​ಟಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು, ಜವಳಿಯನ್ನು ಇತರ ವಸ್ತುಗಳ ಜೊತೆಗೆ ಪರಿಗಣಿಸಲು ಸಮಿತಿಯ ಮುಂದೆ ಇಡಲಾಗುವುದು,” ಎಂದು ಸಚಿವರು ಹೇಳಿದ್ದಾರೆ. ಈ ಸಮಿತಿಯು ಈಗ ತೆರಿಗೆ ದರಗಳು ಮತ್ತು ಸ್ಲ್ಯಾಬ್‌ಗಳ ಸಮರ್ಥನೀಯ ಅಂಶಗಳನ್ನು ಪರಿಶೀಲಿಸುತ್ತಿದೆ.

ಇದನ್ನೂ ಓದಿ: GST Council Meet: ಜವಳಿ ಮೇಲಿನ ಜಿಎಸ್​ಟಿ ದರ ಏರಿಕೆ ನಿರ್ಧಾರ ಸರ್ವಾನುಮತದಿಂದ ಮುಂದೂಡಿಕೆ