Fiscal deficit: 2021ರ ಏಪ್ರಿಲ್​ನಿಂದ ನವೆಂಬರ್​ ಮಧ್ಯೆ ಕೇಂದ್ರದ ವಿತ್ತೀಯ ಕೊರತೆ 6.96 ಲಕ್ಷ ಕೋಟಿ ರೂ.

2021 ಏಪ್ರಿಲ್​ನಿಂದ ನವೆಂಬರ್​ ಮಧ್ಯೆ ಕೇಂದ್ರದ ವಿತ್ತೀಯ ಕೊರತೆ 6.96 ಲಕ್ಷ ಕೋಟಿ ರೂಪಾಯಿಯಷ್ಟಿದೆ. ಅಂದರೆ ಅಂದಾಜು ಮಾಡಿದ್ದಕ್ಕಿಂತ ಯಾವ ಪ್ರಮಾಣ, ಕಳೆದ ವರ್ಷಕ್ಕೆ ಹೋಲಿಸಿದರೆ ಪರಿಸ್ಥಿತಿ ಹೇಗೆ ಇತ್ಯಾದಿ ವಿವರ ಇಲ್ಲಿದೆ.

Fiscal deficit: 2021ರ ಏಪ್ರಿಲ್​ನಿಂದ ನವೆಂಬರ್​ ಮಧ್ಯೆ ಕೇಂದ್ರದ ವಿತ್ತೀಯ ಕೊರತೆ 6.96 ಲಕ್ಷ ಕೋಟಿ ರೂ.
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 31, 2021 | 7:01 PM

ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2021ರ ಏಪ್ರಿಲ್​ನಿಂದ ನವೆಂಬರ್​ನಲ್ಲಿ ಶೇ 35.3ರಷ್ಟಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಸಿ ನೋಡುವುದಾದರೆ 6.96 ಲಕ್ಷ ಕೋಟಿ ರೂಪಾಯಿಗೆ ಕಡಿಮೆಯಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಅಂದಾಜಿನ ಶೇ 46.2ರಷ್ಟಿದೆ. ಏಕೆಂದರೆ ತೆರಿಗೆ ಸಂಗ್ರಹಗಳು ದೃಢವಾಗಿ ಉಳಿದಿವೆ ಮತ್ತು ಖರ್ಚು ಸ್ಥಿರವಾಗಿವೆ. FY22ರ ಬಜೆಟ್ ಪೂರ್ಣ ವರ್ಷದ ವಿತ್ತೀಯ ಕೊರತೆಯನ್ನು ರೂ. 15.07 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇ 6.8ರಷ್ಟು ಎಂದು ನಿಗದಿಪಡಿಸಿದೆ. FY21ರ ಮೊದಲ ಎಂಟು ತಿಂಗಳಲ್ಲಿ ವಿತ್ತೀಯ ಕೊರತೆಯು ಬಜೆಟ್ ಗುರಿಯ ಶೇಕಡಾ 135.1ರಷ್ಟಿತ್ತು. ಡಿಸೆಂಬರ್ 31ರಂದು ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಬಿಡುಗಡೆ ಮಾಡಿದ ಡೇಟಾದಂತೆ, ಏಪ್ರಿಲ್-ನವೆಂಬರ್‌ನಲ್ಲಿ ದೃಢವಾದ ತೆರಿಗೆ ಸಂಗ್ರಹದ ಹಿನ್ನೆಲೆಯಲ್ಲಿ ಒಟ್ಟು ರಶೀದಿಗಳು ಶೇ 66ರಷ್ಟು ಹೆಚ್ಚಾಗಿದೆ.

ಈ ಮಧ್ಯೆ, ಒಟ್ಟು ವೆಚ್ಚವು ಅದೇ ಅವಧಿಯಲ್ಲಿ ಕೇವಲ ಶೇ 8.8ರಷ್ಟು ಹೆಚ್ಚಾಗಿದೆ. ಆದರೂ 2021ರ ನವೆಂಬರ್​ನಲ್ಲಿ ಕೇಂದ್ರ ಸರ್ಕಾರದ ಹಣಕಾಸಿನಲ್ಲಿ ಕೆಲವು ಕ್ಷೀಣತೆ ಕಂಡುಬಂದಿದೆ, ಒಟ್ಟು ರಶೀದಿಗಳು ವರ್ಷದಿಂದ ವರ್ಷಕ್ಕೆ ಶೇ 19ರಷ್ಟು ಕಡಿಮೆಯಾಗಿದ್ದು, ವೆಚ್ಚವು ಶೇ 1.2ರಷ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ, ತಿಂಗಳ ವಿತ್ತೀಯ ಕೊರತೆಯು 2020ರ ನವೆಂಬರ್​ಗೆ ಹೋಲಿಸಿದರೆ ಶೇ 21.4 ರಷ್ಟು ಹೆಚ್ಚಾಗಿ, 1.49 ಲಕ್ಷ ಕೋಟಿ ರೂಪಾಯಿ ಆಗಿದೆ. ಆರ್ಥಿಕತೆಯನ್ನು ಹೆಚ್ಚಿಸಲು ಕೇಂದ್ರವು ವೆಚ್ಚವನ್ನು ಮುಂದುವರಿಸಲು ನೋಡುತ್ತಿರುವಾಗ, ಸಾಂಕ್ರಾಮಿಕದ ಕಾರಣಕ್ಕೆ ಜಾರಿಗೊಳಿಸಿದ ನಿರ್ಬಂಧಗಳ ಸಡಿಲಿಕೆಯ ನಂತರ ಆರ್ಥಿಕ ಚಟುವಟಿಕೆಯ ಪುನರಾರಂಭವು ತೆರಿಗೆ ಆದಾಯವನ್ನು ಉತ್ತೇಜಿಸಿದೆ. ಸರ್ಕಾರದ ಬೊಕ್ಕಸವನ್ನು ತುಂಬಲು ಸಹಾಯ ಮಾಡಿದೆ.

2021ರ ಏಪ್ರಿಲ್-ನವೆಂಬರ್​ನಲ್ಲಿ ಒಟ್ಟು ತೆರಿಗೆ ಆದಾಯವು ಕಳೆದ ವರ್ಷದ ಇದೇ ಅವಧಿಗಿಂತ ಶೇ 50.3ರಷ್ಟು ಹೆಚ್ಚಾಗಿದೆ. 2021ರ ನವೆಂಬರ್​ನಲ್ಲಿ ಶೇ 18.2ರಷ್ಟು ಏರಿಕೆ ಕಂಡು 1.78 ಲಕ್ಷ ಕೋಟಿ ರೂಪಾಯಿ ಆಗಿದೆ. 2021ರ ನವೆಂಬರ್ ಆರಂಭದಲ್ಲಿ ಘೋಷಿಸಲಾದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದ ಕಡಿತವು ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ ಕೇಂದ್ರದ ಅಬಕಾರಿ ಸುಂಕ ಸಂಗ್ರಹವು 2021ರ ಅಕ್ಟೋಬರ್​ನಲ್ಲಿ 32,379 ಕೋಟಿ ರೂಪಾಯಿಗಳಿಂದ 37,867 ಕೋಟಿ ರೂಪಾಯಿ ತಲುಪಿತು. ಆತಂಕಕಾರಿ ಸಂಗತಿ ಏನೆಂದರೆ, 2021ರ ನವೆಂಬರ್​ನಲ್ಲಿ ಮತ್ತೊಂದು ಕೊರತೆಯಿಲ್ಲದ ತಿಂಗಳು ಎಂದು ಸಾಬೀತು ಆಗುವುದರೊಂದಿಗೆ ಬಂಡವಾಳ ವೆಚ್ಚವು ಹಿಂದುಳಿಯುತ್ತಲೇ ಇತ್ತು.

2021ರ ನವೆಂಬರ್​ನಲ್ಲಿ ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು ನಾಲ್ಕು ತಿಂಗಳ ಕನಿಷ್ಠ 20,360 ಕೋಟಿ ರೂಪಾಯಿಗೆ ತಲುಪಿದೆ. ಹಿಂದಿನ ತಿಂಗಳಲ್ಲಿ 23,919 ಕೋಟಿ ರೂಪಾಯಿ ಇತ್ತು. ಇದು 2021ರ ಏಪ್ರಿಲ್-ನವೆಂಬರ್​ನಲ್ಲಿ ಒಟ್ಟು ಮೊತ್ತವನ್ನು ರೂ. 2.74 ಲಕ್ಷ ಕೋಟಿಗೆ ಒಯ್ದಿತು. ಇದು ಕಳೆದ ವರ್ಷಕ್ಕಿಂತ ಶೇ 13.5ರಷ್ಟು ಹೆಚ್ಚಾಗಿದೆ. FY22ರ ಬಂಡವಾಳ ವೆಚ್ಚಕ್ಕಾಗಿ ಕೇಂದ್ರದ ಗುರಿ 5.54 ಲಕ್ಷ ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: Fiscal Deficit: ವಿತ್ತೀಯ ಕೊರತೆ ಸೆಪ್ಟೆಂಬರ್​ ತಿಂಗಳ ತನಕ ರೂ. 5.26 ಲಕ್ಷ ಕೋಟಿ ಅಥವಾ ಅಂದಾಜಿನ ಶೇ 35ರಷ್ಟು

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM