Fiscal Deficit: ವಿತ್ತೀಯ ಕೊರತೆ ಸೆಪ್ಟೆಂಬರ್ ತಿಂಗಳ ತನಕ ರೂ. 5.26 ಲಕ್ಷ ಕೋಟಿ ಅಥವಾ ಅಂದಾಜಿನ ಶೇ 35ರಷ್ಟು
ಕೇಂದ್ರ ಸರ್ಕಾರದಿಂದ 2021ರ ಸೆಪ್ಟೆಂಬರ್ ತನಕ ವಿತ್ತೀಯ ಕೊರತೆ ಮೊತ್ತವು ರೂ. 5.26 ಲಕ್ಷ ಕೋಟಿ ಅಥವಾ ಅಂದಾಜಿನ ಶೇ 35ರಷ್ಟಿದೆ. ಆ ಬಗೆಗಿನ ಮಾಹಿತಿ ಇಲ್ಲಿದೆ.
ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಅಕೌಂಟ್ಸ್ (CGA) ಶುಕ್ರವಾರ ಬಿಡುಗಡೆ ಮಾಡಿದ ಅಂಕಿ- ಅಂಶಗಳ ಪ್ರಕಾರ, ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2021ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ರೂ. 5.26 ಲಕ್ಷ ಕೋಟಿ ಅಥವಾ ಬಜೆಟ್ ಅಂದಾಜಿನ ಶೇಕಡಾ 35ರಷ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊರತೆಯ ಅಂಕಿ- ಅಂಶಗಳು ಹಿಂದಿನ ಹಣಕಾಸು ವರ್ಷಕ್ಕಿಂತ ಉತ್ತಮವಾಗಿದೆ. ಇದು ಮುಖ್ಯವಾಗಿ ಕೊವಿಡ್-19 ಎದುರಿಸಲು ವೆಚ್ಚದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಅಂದಾಜಿನ ಶೇ 114.8ಕ್ಕೆ ಏರಿತ್ತು. ವಿತ್ತೀಯ ಕೊರತೆ ಅಥವಾ ಖರ್ಚು ಮತ್ತು ಆದಾಯದ ಮಧ್ಯದ ಅಂತರವು ಆಗಸ್ಟ್ ಅಂತ್ಯದ ವೇಳೆಗೆ ಸಂಪೂರ್ಣ ಪರಿಭಾಷೆಯಲ್ಲಿ ಹೇಳುವುದಾದರೆ, 5,26,851 ಕೋಟಿ ರೂಪಾಯಿಗಳಾಗಿದೆ ಎಂದು ಸಿಜಿಎ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ 6.8ರಷ್ಟು ಅಥವಾ 15,06,812 ಕೋಟಿ ರೂಪಾಯಿ ಕೊರತೆಯನ್ನು ಸರ್ಕಾರ ನಿರೀಕ್ಷಿಸುತ್ತದೆ.
ದತ್ತಾಂಶದ ಪ್ರಕಾರ, ಕೇಂದ್ರ ಸರ್ಕಾರದ ಒಟ್ಟು ಸ್ವೀಕೃತಿಗಳು 2021-22ರ ಸೆಪ್ಟೆಂಬರ್ 2021ರ ವರೆಗಿನ ಅನುಗುಣವಾದ ಬಜೆಟ್ ಅಂದಾಜುಗಳ (BE) 10.99 ಲಕ್ಷ ಕೋಟಿ ರೂಪಾಯಿ ಅಥವಾ ಶೇ 55.6ರಷ್ಟಿದೆ. ಕಳೆದ ಹಣಕಾಸು ವರ್ಷದ ಅನುಗುಣವಾದ ಅವಧಿಯಲ್ಲಿ 2020-21ರ ಬಜೆಟ್ ಅಂದಾಜಿನ ಒಟ್ಟು ಸ್ವೀಕೃತಿಗಳು ಶೇ 25.2 ಆಗಿತ್ತು.
ಹಣಕಾಸು ವರ್ಷದಲ್ಲಿ ಒಟ್ಟು ವೆಚ್ಚ 9.2 ಲಕ್ಷ ಕೋಟಿ ರೂಪಾಯಿ ವರ್ಷದ ಹಿಂದಿನ ಅವಧಿಯಲ್ಲಿ 2020-21ರ ಬಜೆಟ್ ಅಂದಾಜಿನ ತೆರಿಗೆ ಆದಾಯವು ಕೇವಲ ಶೇ 28ರಷ್ಟು ಆಗಿತ್ತು. ಇದು ಒಟ್ಟು ಸ್ವೀಕೃತಿಗಳಲ್ಲಿ 9.2 ಲಕ್ಷ ಕೋಟಿ ರೂಪಾಯಿ. ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚವು ರೂ 16.26 ಲಕ್ಷ ಕೋಟಿ ಅಥವಾ ಪ್ರಸಕ್ತ ಹಣಕಾಸು ವರ್ಷದ ಅಂದಾಜು ವೆಚ್ಚದ ಶೇ 46.7 ರಷ್ಟಿದೆ ಎಂದು CGA ದತ್ತಾಂಶವು ತಿಳಿಸಿದೆ. ಒಟ್ಟು ವೆಚ್ಚದಲ್ಲಿ 13,96,666 ಕೋಟಿ ರೂಪಾಯಿಗಳಲ್ಲಿ ರಾಜಸ್ವ ಖಾತೆಯಲ್ಲಿ ಮತ್ತು ರೂ.2,29,351 ಕೋಟಿ ಬಂಡವಾಳ ಖಾತೆಯಲ್ಲಿದೆ. ಒಟ್ಟು ರಾಜಸ್ವ ವೆಚ್ಚದಲ್ಲಿ 3,63,757 ಕೋಟಿ ರೂ. ಬಡ್ಡಿ ಪಾವತಿ ಮತ್ತು 1,80,959 ಕೋಟಿ ಪ್ರಮುಖ ಸಬ್ಸಿಡಿಗಳ ಖಾತೆಯಲ್ಲಿದೆ.
ಒಟ್ಟು ವೆಚ್ಚದಲ್ಲಿ 13,96,666 ಕೋಟಿ ರೂಪಾಯಿ ಆದಾಯ ಖಾತೆಯಲ್ಲಿ ಮತ್ತು 2,29,351 ಕೋಟಿ ಬಂಡವಾಳ ಖಾತೆಯಲ್ಲಿದೆ. ಒಟ್ಟು ಆದಾಯ ವೆಚ್ಚದಿಂದ, 3,63,757 ಕೋಟಿ ರೂ. ಬಡ್ಡಿ ಪಾವತಿಯ ಖಾತೆಯಲ್ಲಿ ಮತ್ತು ರೂ. 1,80,959 ಕೋಟಿ ಪ್ರಮುಖ ಸಬ್ಸಿಡಿಗಳ ಖಾತೆಯಲ್ಲಿದೆ. ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪಾದಕರ (ಜಿಡಿಪಿ) ಶೇ 9.3ರಷ್ಟಿತ್ತು. ಇದು ಫೆಬ್ರವರಿ ಬಜೆಟ್‌ನಲ್ಲಿ ಪರಿಷ್ಕೃತ ಅಂದಾಜಿನಲ್ಲಿ ಯೋಜಿತ ಶೇ 9.5ಕ್ಕಿಂತ ಉತ್ತಮವಾಗಿದೆ.
ಇದನ್ನೂ ಓದಿ: Fiscal Deficit: 2021ರ ಏಪ್ರಿಲ್ನಿಂದ ಆಗಸ್ಟ್ ಅವಧಿಯಲ್ಲಿ ಕೇಂದ್ರದ ವಿತ್ತೀಯ ಕೊರತೆ 4.7 ಲಕ್ಷ ಕೋಟಿ ರೂಪಾಯಿ