AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fiscal Deficit: 2021ರ ಏಪ್ರಿಲ್​ನಿಂದ ಆಗಸ್ಟ್​ ಅವಧಿಯಲ್ಲಿ ಕೇಂದ್ರದ ವಿತ್ತೀಯ ಕೊರತೆ 4.7 ಲಕ್ಷ ಕೋಟಿ ರೂಪಾಯಿ

ಕೇಂದ್ರ ಸರ್ಕಾರದ ಬಜೆಟ್​ ಅಂದಾಜಿನಲ್ಲಿ ಶೇ 31ರಷ್ಟು ವಿತ್ತೀಯ ಕೊರತೆ ಅಥವಾ ರೂ. 4.7 ಲಕ್ಷ ಕೋಟಿ ರೂಪಾಯಿ 2021ರ ಏಪ್ರಿಲ್​ನಿಂದ ಆಗಸ್ಟ್​ ಮಧ್ಯೆ ಲೆಕ್ಕ ತೋರಿಸುತ್ತಿದೆ.

Fiscal Deficit: 2021ರ ಏಪ್ರಿಲ್​ನಿಂದ ಆಗಸ್ಟ್​ ಅವಧಿಯಲ್ಲಿ ಕೇಂದ್ರದ ವಿತ್ತೀಯ ಕೊರತೆ 4.7 ಲಕ್ಷ ಕೋಟಿ ರೂಪಾಯಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Sep 30, 2021 | 7:03 PM

Share

2021ರ ಏಪ್ರಿಲ್​ನಿಂದ ಆಗಸ್ಟ್‌ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 4.7 ಲಕ್ಷ ಕೋಟಿ ರೂಪಾಯಿ ಅಥವಾ ಪೂರ್ಣ ವರ್ಷದ ಬಜೆಟ್ ಅಂದಾಜಿನ ಶೇ 31ರಷ್ಟು ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇಕಡಾ 109ರಷ್ಟಾಗಿತ್ತು ಎಂಬುದನ್ನು ಸೆಪ್ಟೆಂಬರ್ 30ರಂದು ಅಧಿಕೃತ ಮಾಹಿತಿಯು ತೋರಿಸಿದೆ. ಈ ಬೆಳವಣಿಗೆಯು ಪ್ರಾಥಮಿಕವಾಗಿ ನೇರ ಮತ್ತು ಪರೋಕ್ಷ ತೆರಿಗೆ ಆದಾಯ ಸಂಗ್ರಹ ಬೆಂಬಲದಿಂದ ಆಗಿರುವಂಥದ್ದು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2020ರ ಏಪ್ರಿಲ್​ನಿಂದ ಜೂನ್​ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ತೆರಿಗೆ ಸಂಗ್ರಹವು ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿತ್ತು. ಈ ವರ್ಷ ಇಲ್ಲಿಯವರೆಗೆ ವೆಚ್ಚ ಕೂಡ ಕಡಿಮೆ ಮಾಡಲಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಕಳೆದ ವರ್ಷ ಏಪ್ರಿಲ್​ನಿಂದ ಆಗಸ್ಟ್​ನಲ್ಲಿ ವಿತ್ತೀಯ ಕೊರತೆಯು ಬಜೆಟ್ ಗುರಿಯನ್ನು ದಾಟಿತ್ತು. ಅಂದಹಾಗೆ ವಿತ್ತೀಯ ಕೊರತೆ ಅಂದರೆ, ಕೇಂದ್ರ ಅಥವಾ ರಾಜ್ಯದ ಖರ್ಚು ಮತ್ತು ಆದಾಯದ ನಡುವಿನ ವ್ಯತ್ಯಾಸವಾಗಿದ್ದು, ಖರ್ಚಿನ ಪ್ರಮಾಣ ಹೆಚ್ಚಾಗಿದೆ ಎಂದರ್ಥ.

ವಿತ್ತೀಯ ಕೊರತೆ ನಾಮಿನಲ್ ಜಿಡಿಪಿಯ ಶೇ 6.8ರಷ್ಟು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿತ್ತೀಯ ಕೊರತೆಯ ಗುರಿಯನ್ನು 15.07 ಲಕ್ಷ ಕೋಟಿ ರೂಪಾಯಿ ಅಥವಾ ನಾಮಿನಲ್ ಜಿಡಿಪಿಯ ಒಟ್ಟು ಶೇ 6.8 ಎಂದು FY22ಕ್ಕೆ ಬಜೆಟ್ ಮಾಡಿದ್ದರು. FY21ಕ್ಕೆ ವಿತ್ತೀಯ ಕೊರತೆಯು 18.49 ಲಕ್ಷ ಕೋಟಿ ರೂಪಾಯಿ ಅಥವಾ ಜಿಡಿಪಿಯ ಶೇ 9.5ಕ್ಕೆ ಪರಿಷ್ಕರಿಸಲಾಯಿತು. ಅದಕ್ಕೂ ಮುನ್ನ ಬಜೆಟ್​ನಲ್ಲಿ 7.96 ಲಕ್ಷ ಕೋಟಿ ರೂಪಾಯಿಗಳ ಅಥವಾ ಜಿಡಿಪಿಯ ಶೇ 3.5 ಎಂದು ಗುರಿ ಇರಿಸಿಕೊಳ್ಳಲಾಗಿತ್ತು. 2021-22 ಏಪ್ರಿಲ್-ಆಗಸ್ಟ್ ಮಧ್ಯೆ ನಿವ್ವಳ ತೆರಿಗೆ ಆದಾಯವು 6.45 ಲಕ್ಷ ಕೋಟಿ ರೂಪಾಯಿ ಅಥವಾ ಬಜೆಟ್​ ಅಂದಾಜಿನ ಶೇಕಡಾ 41.7ರಷ್ಟು ಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಶೇಕಡಾ 17.4ರಷ್ಟು ಬಂದಿತ್ತು.

“ಸಾಮಾನ್ಯಗೊಳಿಸುವ ಮೂಲ ಬೆಳವಣಿಗೆಯ ವೇಗವನ್ನು ಕುಂಠಿತಗೊಳಿಸಿದರೂ ಕೇಂದ್ರದ ತೆರಿಗೆ ಆದಾಯದಲ್ಲಿ ಆರೋಗ್ಯಕರ ವಿಸ್ತರಣೆಯು ದ್ವಿತೀಯಾರ್ಧದಲ್ಲಿ ಏರಿಕೆಯನ್ನು ಉಳಿಸಿಕೊಳ್ಳುತ್ತದೆ. ಕೇಂದ್ರದ ಒಟ್ಟು ತೆರಿಗೆ ಆದಾಯವು ಬಜೆಟ್ ಅಂದಾಜನ್ನು​ ಮೀರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಬಜೆಟ್ ಅಂದಾಜಿಗಿಂತ ಕನಿಷ್ಠ 2 ಲಕ್ಷ ಕೋಟಿ ರೂಪಾಯಿ ಮೀರಬಹುದು ಎಂಬ ನಿರೀಕ್ಷೆಯಿದೆ”, ಎಂದು ಐಸಿಆರ್‌ಎ (ICRA) ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ. ಏಪ್ರಿಲ್​ನಿಂದ ಆಗಸ್ಟ್‌ ಮಧ್ಯೆ ತೆರಿಗೆಯೇತರ ಆದಾಯವು ರೂ. 1.49 ಲಕ್ಷ ಕೋಟಿ ಅಥವಾ ಬಜೆಟ್​ ಅಂದಾಜಿನ ಶೇ 61.2ರಷ್ಟು ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 22.4ರಷ್ಟು ಬಂದಿತ್ತು. ಇದು ಮುಖ್ಯವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ ತಿಂಗಳಲ್ಲಿ ಕೇಂದ್ರಕ್ಕೆ ವರ್ಗಾಯಿಸಿದ 99,122 ಕೋಟಿ ರೂಪಾಯಿಯಿಂದ ಬಂದಿದ್ದಾಗಿತ್ತು.

ದ್ವಿತೀಯಾರ್ಧದಲ್ಲಿ ಖರ್ಚು ಹೆಚ್ಚಾಗಬಹುದು ಸರಿಯಾದ ಪರಿಭಾಷೆಯಲ್ಲಿ ಹೇಳುವುದಾದರೆ, 2021ರ ಏಪ್ರಿಲ್​ನಿಂದ ಆಗಸ್ಟ್‌ನ ಮಧ್ಯದ ಒಟ್ಟು ವೆಚ್ಚವು ರೂ. 12.76 ಲಕ್ಷ ಕೋಟಿಯಾಗಿದ್ದು, ಕಳೆದ ವರ್ಷದ ಇದೇ ಅವಧಿಯ ರೂ. 12.47 ಲಕ್ಷ ಕೋಟಿಗೆ ಹೋಲಿಸಿದರೆ ಬಜೆಟ್​ ಅಂದಾಜು ಶೇ 40ಕ್ಕೆ ಹೋಲಿಸಿದರೆ, ಈ ಬಾರಿ ಶೇಕಡಾ 36.7ರಷ್ಟಿದೆ. 11.13 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ ಆದಾಯ ವೆಚ್ಚ 11.05 ಲಕ್ಷ ಕೋಟಿ ರೂಪಾಯಿ, ಬಂಡವಾಳ ವೆಚ್ಚ 1.72 ಲಕ್ಷ ಕೋಟಿ ರೂಪಾಯಿ ಇತ್ತು. ಈಗ 1.34 ಲಕ್ಷ ಕೋಟಿ ರೂಪಾಯಿ ಇದೆ. “ಒಟ್ಟಾರೆ ಆದಾಯ ವೆಚ್ಚವು ಬಜೆಟ್ ಮೊತ್ತದ ಕೇವಲ ಶೇ 37ರಷ್ಟು ಮಾತ್ರ. ಮುಖ್ಯವಾಗಿ ಸರ್ಕಾರವು ಹಾಕಿರುವ ನಿರ್ಬಂಧಗಳಿಂದಾಗಿ ಹೀಗಾಗಿದೆ. ಸಚಿವಾಲಯಗಳು ತಮ್ಮ ಬಜೆಟ್ ಅನ್ನು ಖರ್ಚು ಮಾಡಲು ಸರ್ಕಾರವು ಕೇಳಿದ್ದರಿಂದ ಇದು ದ್ವಿತೀಯಾರ್ಧದಲ್ಲಿ ಹೆಚ್ಚಾಗಬಹುದು ಎಂಬುದನ್ನು ನಾವು ನಿರೀಕ್ಷಿಸಬಹುದು,” ಕೇರ್​ ರೇಟಿಂಗ್​ನ ಪ್ರಮುಖ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

FY2022 Q2ರಲ್ಲಿ GDP ಬೆಳವಣಿಗೆಯ ಮೇಲೆ ಸರ್ಕಾರದ ಅಂತಿಮ ಬಳಕೆಯ ವೆಚ್ಚವು ತೂಗುತ್ತದೆ ಎಂದು ಖರ್ಚು ಕಡಿಮೆ ಆಗಿರುವುದು ಸೂಚಿಸುತ್ತದೆ ಎನ್ನಲಾಗುತ್ತಿದೆ. “ಎಲ್ಲ ಸಚಿವಾಲಯಗಳು ತಮ್ಮ ಸ್ವಂತ ಅನುಮೋದಿತ ಬಜೆಟ್ ಪ್ರಕಾರ ಖರ್ಚು ಮಾಡಲು ಈಗ ಅನುಮತಿ ನೀಡಿರುವುದರಿಂದ ಈ ವರ್ಷದ ದ್ವಿತೀಯಾರ್ಧದಲ್ಲಿ ಖರ್ಚು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ವಿಶ್ಲೇಷಕರು ಹೇಳುತ್ತಾರೆ. FY2022ರಲ್ಲಿ ಕೇಂದ್ರದ ಹಣಕಾಸಿನ ಕೊರತೆಯು ಬಜೆಟ್‌ಗಿಂತ ಕಡಿಮೆ ಇರುವ ಸಾಧ್ಯತೆಯಿದೆ. ಇದರ ಪ್ರಮಾಣವು ಅಂತಿಮವಾಗಿ ಹೂಡಿಕೆಯ ಒಳಹರಿವಿನ ಪ್ರಮಾಣದಿಂದಲೂ ನಿರ್ಧಾರ ಆಗುತ್ತದೆ,” ಅಂತಲೂ ಹೇಳುತ್ತಾರೆ.

ಇದನ್ನೂ ಓದಿ: Fiscal Deficit: ಏಪ್ರಿಲ್​ನಿಂದ ಜುಲೈ ಮಧ್ಯೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 3.2 ಲಕ್ಷ ಕೋಟಿ ರೂಪಾಯಿ