Sign In

By signing in or creating an account, you agree with Associated Broadcasting Company's Terms & Conditions and Privacy Policy.

Top 10 Richest Indian 2021: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!

IIFL Wealth-Hurun India Report 2021: ಭಾರತದ 119 ನಗರಗಳ 1,007 ವ್ಯಕ್ತಿಗಳ ಸಂಪತ್ತು ಒಂದು ಸಾವಿರ ಕೋಟಿ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಾಗಿದೆ.

Top 10 Richest Indian 2021: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!
ಗೌತಮ್ ಅದಾನಿ
Follow us
S Chandramohan
| Updated By: guruganesh bhat

Updated on:Sep 30, 2021 | 6:13 PM

ಭಾರತದಲ್ಲಿರುವ ಶ್ರೀಮಂತ ವ್ಯಕ್ತಿಗಳು, ಕುಟುಂಬಗಳ ಸಂಪತ್ತಿನಲ್ಲಿ ಬಾರಿ ಏರಿಕೆಯಾಗಿದೆ. ಕೊರೊನಾದ ಮಧ್ಯೆಯೂ ಶ್ರೀಮಂತರ ಸಂಪತ್ತಿನಲ್ಲಿ ಏರಿಕೆಯಾಗಿರುವುದು ವಿಶೇಷ. ಯಾವ್ಯಾವ ಕಂಪನಿಗಳು ಪ್ರತಿ ನಿತ್ಯ ಎಷ್ಟೆಷ್ಟು ಕೋಟಿ ರೂಪಾಯಿ ಹಣ ಗಳಿಸುತ್ತಿವೆ ಎಂದು ಕೇಳಿದರೇ ನಿಮಗೆ ಶಾಕ್ ಆಗಬಹುದು. ಗೌತಮ್ ಅದಾನಿಯ ಪ್ರತಿ ನಿತ್ಯದ ಆದಾಯ ಬರೋಬ್ಬರಿ 1,002 ಕೋಟಿ ರೂಪಾಯಿ. ಇದೇ ರೀತಿ ಬೇರೆ ಬೇರೆ ಶ್ರೀಮಂತ ವ್ಯಕ್ತಿಗಳ ಒಂದು ದಿನದ ಆದಾಯ ಎಷ್ಟು ಕೋಟಿ ರೂಪಾಯಿ ಎನ್ನುವುದರ ಡೀಟೈಲ್ಸ್ ಇಲ್ಲಿದೆ ಓದಿ.

ಭಾರತದಲ್ಲಿ ಬಡವರು-ಶ್ರೀಮಂತರ ನಡುವೆ ಅಂತರ ಮೊದಲಿನಿಂದಲೂ ಇದ್ದೇ ಇದೆ. ಈಗ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ಅಂತ ಟೀಕೆ ಮಾಡುವುದನ್ನು ಕೇಳುತ್ತಿದ್ದೇವೆ. ಆದರೇ, ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತ ಉದ್ಯಮಿಯಾಗಿರುವ ಗೌತಮ್ ಅದಾನಿ ಮತ್ತಷ್ಟು ಶ್ರೀಮಂತರಾಗಿರುವುದು ಐಐಎಫ್ಎಲ್‌ ವೆಲ್ತ್-ಹೂರನ್ ಶ್ರೀಮಂತರ ಪಟ್ಟಿ 2021ರಿಂದ ಸ್ಪಷ್ಟವಾಗಿದೆ. ಅದಾನಿ ಪ್ರತಿನಿತ್ಯ ಎಷ್ಟು ಸಾವಿರ ಕೋಟಿ ರೂಪಾಯಿ ಶ್ರೀಮಂತರಾಗಿದ್ದಾರೆ ಎನ್ನುವುದನ್ನು ಈಗ ನಿಮ್ಮ ಮುಂದೆ ಇಡುತ್ತೇವೆ.

ಭಾರತದ 119 ನಗರಗಳ 1007 ವ್ಯಕ್ತಿಗಳ ಸಂಪತ್ತು ಒಂದು ಸಾವಿರ ಕೋಟಿ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಾಗಿದೆ. ಆದರೇ, ಕಳೆದ ವರ್ಷಕ್ಕೆ ಹೋಲಿಸಿದರೇ, 1007 ವ್ಯಕ್ತಿಗಳ ಸಂಪತ್ತಿನಲ್ಲಿ ಶೇ.51 ರಷ್ಟು ಹೆಚ್ಚಳವಾಗಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಏರಿಕೆ, ಜಾಗತಿಕ ನಗದು ಪರಿಸ್ಥಿತಿ ಉತ್ತಮವಾಗಿರುವುದು ಸೇರಿದಂತೆ ಇನ್ನೂ ಕೆಲ ಕಾರಣಗಳಿಂದ 58 ಮಂದಿ ಹೊಸ ಬಿಲಿಯನೇರ್ ಗಳು ಸೃಷ್ಟಿಯಾಗಿದ್ದಾರೆ. ಇದರಿಂದಾಗಿ ಭಾರತದಲ್ಲಿ 2020-21 ರಲ್ಲಿ ಬಿಲಿಯನೇರ್ ಗಳ ಸಂಖ್ಯೆ 258ಕ್ಕೆೇರಿಕೆಯಾಗಿದೆ. ಇವರುಗಳ ಪೈಕಿ ಅತ್ಯಂತ ಕಿರಿಯ ಬಿಲಿಯನೇರ್ ಅಂದರೇ, 23ವರ್ಷದ ಭಾರತ್ ಪೇ ಸಂಸ್ಥಾಪಕ ಶಾಶ್ವಂತ್ ನಕರಾನಿ.

ಐಐಎಫ್ಎಲ್ ವೆಲ್ತ್ ಹೂರನ್ ಭಾರತದ ಶ್ರೀಮಂತರ ಪಟ್ಟಿ 2021ರ ಪ್ರಕಾರ, ಭಾರತದಲ್ಲಿ ಕೆಮಿಕಲ್ ಮತ್ತು ಸಾಫ್ಟವೇರ್ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊಸಬರು ಬಿಲಿಯನೇರ್ ಗಳಾಗಿದ್ದಾರೆ. ಫಾರ್ಮಾಸೂಟಿಕಲ್ಸ್ ಕ್ಷೇತ್ರದಿಂದ 130 ಮಂದಿ ಪಟ್ಟಿಯಲ್ಲಿದ್ದಾರೆ. ಹೂರನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನಾಸ್ ರಹಮಾನ್ ಜುನೈದ್ ಹೇಳುವ ಪ್ರಕಾರ, ಹತ್ತು ವರ್ಷಗಳಲ್ಲಿ ಹತ್ತು ಪಟ್ಟು ಬಿಲಿಯನೇರ್ಗಳ ಸಂಖ್ಯೆ ಹೆಚ್ಚಾಗಿದೆ. ಹತ್ತು ವರ್ಷಗಳ ಹಿಂದೆ ವೆಲ್ತ್ ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 100 ಮಂದಿ ಮಾತ್ರ ಇದ್ದರು. ಆದರೇ, ಈಗ 1007ಮಂದಿ ಇದ್ದಾರೆ. ಇದೇ ವೇಗದಲ್ಲಿ ಬೆಳವಣಿಗೆಯಾದರೇ, ಮುಂದಿನ ಐದು ವರ್ಷಗಳಲ್ಲಿ ಬಿಲಿಯನೇರ್ ಗಳ ಸಂಖ್ಯೆ 3000 ದಾಟಬಹುದು. ಐಐಎಫ್ಎಲ್ ವೆಲ್ತ್ ಹೂರನ್ ಭಾರತದ ಶ್ರೀಮಂತರ ಪಟ್ಟಿಯು ಭಾರತದ ಆರ್ಥಿಕತೆಯ ಬೆಳವಣಿಗೆಯ ಸ್ಟೋರಿಯಾಗಿದೆ ಎಂದು ಹೇಳುತ್ತಾರೆ.

ಭಾರತದಲ್ಲಿ ಸಂಪತ್ತು ಸೃಷ್ಟಿಯು ಕ್ರಿಕೆಟ್ ಟೆಸ್ಟ್ ಮ್ಯಾಚ್​​ನಿಂದ ವೇಗದ ಟಿ-20 ಪಂದ್ಯದಂತೆ ಇದೆ. ಭಾರತದಲ್ಲಿ ವೇಗವಾಗಿ ಸಂಪತ್ತು ಸೃಷ್ಟಿಯಾಗುತ್ತಿದೆ. ಐಐಎಫ್ಎಲ್ ವೆಲ್ತ್ ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿರುವವರು ಕಳೆದ 10 ವರ್ಷಗಳಲ್ಲಿ ನಿತ್ಯ 2,020 ಕೋಟಿ ರೂಪಾಯಿಯನ್ನು ಗಳಿಸುತ್ತಿದ್ದಾರೆ. ಇದೇ ವೇಗದಲ್ಲಿ ಬೆಳವಣಿಗೆಯಾದರೇ, ಮುಂದಿನ 10 ವರ್ಷಗಳಲ್ಲಿ ಬಿಲಿಯನೇರ್ ಗಳ ಸಂಖ್ಯೆಯಲ್ಲಿ ಭಾರತವು ಆಮೆರಿಕಾಕ್ಕೆ ಪೈಪೋಟಿ ನೀಡಬಹುದು.

2020-21 ರಲ್ಲಿ ಭಾರತದ ಶ್ರೀಮಂತ ಕುಟುಂಬಗಳ್ಯಾವುವು? ಅದಾನಿ ಗ್ರೂಪ್​ನ ಗೌತಮ್ ಅದಾನಿ ಹಾಗೂ ಕುಟುಂಬದ ಸಂಪತ್ತು 5.06 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರ ಹಿಂದಿನ ವರ್ಷ ಅದಾನಿ ಗ್ರೂಪ್ ಸಂಪತ್ತು 1.4 ಲಕ್ಷ ಕೋಟಿ ರೂಪಾಯಿ ಇತ್ತು. ಅದಾನಿ ಗ್ರೂಪ್ ಪ್ರತಿ ನಿತ್ಯದ ಆದಾಯ ಕೇಳಿದರೇ, ನಿಮಗೆ ಶಾಕ್ ಆಗಬಹುದು. ಆದರೇ, ಅದಾನಿ ಪ್ರತಿನಿತ್ಯ ಬರೋಬ್ಬರಿ 1,002 ಕೋಟಿ ರೂಪಾಯಿ ಸಂಪತ್ತುನ್ನು ಗಳಿಸುತ್ತಿದ್ದಾರೆ. ಗೌತಮ್ ಅದಾನಿ ಸಂಪತ್ತಿನ ಖಾತೆಗೆ ಪ್ರತಿ ನಿತ್ಯ 1,002 ಕೋಟಿ ರೂಪಾಯಿ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಅದಾನಿ ಕುಟುಂಬ ಭಾರತದಲ್ಲಿ ಎರಡನೇ ಅತಿ ದೊಡ್ಡ ಶ್ರೀಮಂತ ಕುಟುಂಬವಾಗಿದೆ.

ಗೌತಮ್ ಅದಾನಿ ಚೀನಾದ ಬಾಟಲ್ ವಾಟರ್ ಉತ್ಪಾದಿಸುವ ಜುವಾಂಗ್ ಶಾನಶಾನ್​ರನ್ನು ಹಿಂದಕ್ಕಿ ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಗೌತಮ್ ಅದಾನಿ ಜೊತೆಗೆ ದುಬೈನಲ್ಲಿರುವ ಅವರ ಸೋದರ ವಿನೋದ್ ಶಾಂತಿಲಾಲ್ ಅದಾನಿ ಕೂಡ ಐಎಎಫ್ಎಲ್ ಹೂರನ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ಗೌತಮ ಅದಾನಿ ಎರಡು ಸ್ಥಾನ ಮೇಲೆಕ್ಕೇರಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಸೋದರ ವಿನೋದ್ ಮತ್ತು ಕುಟುಂಬವು ಶ್ರೀಮಂತಿಕೆಯಲ್ಲಿ 12 ಱಂಕ್ ಜಿಗಿತವಾಗಿದ್ದು, 8ನೇ ಱಂಕ್ ನಲ್ಲಿದ್ದಾರೆ. ವಿನೋದ್ ಅದಾನಿ ಕುಟುಂಬದ ಸಂಪತ್ತು 1,31,600 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 2020-21 ರಲ್ಲಿ ಶೇ.21 ರಷ್ಟು ಸಂಪತ್ತಿನಲ್ಲಿ ಏರಿಕೆಯಾಗಿದೆ.

ಇನ್ನೂ ಮುಖೇಶ್ ಅಂಬಾನಿಯ 2020-21 ರಲ್ಲಿ ಶೇ.9 ರಷ್ಟು ಏರಿಕೆಯಾಗಿದ್ದು, 7,18,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮುಖೇಶ್ ಅಂಬಾನಿ ಪ್ರತಿನಿತ್ಯ 169 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಆದರೇ, ಮುಖೇಶ್ ಅಂಬಾನಿಗಿಂತ ಹೆಚ್ಚಿನ ಸಂಪತ್ತುನ್ನು ಪ್ರತಿ ನಿತ್ಯ ಗೌತಮ್ ಅದಾನಿ ಗಳಿಸುತ್ತಿದ್ದಾರೆ.

ಎಚ್‌ಸಿಎಲ್ ಕಂಪನಿಯ ಶಿವನಾಡರ್ ಸಂಪತ್ತು ಶೇ.67 ರಷ್ಟು ಏರಿಕೆಯಾಗಿದೆ. ಶಿವನಾಡರ್ 2,36,600 ಕೋಟಿ ರೂಪಾಯಿ ಸಂಪತ್ತು ಹೊಂದಿದ್ದಾರೆ. ಶಿವನಾಡರ್ ಱಂಕಿಂಗ್ ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಶಿವನಾಡರ್ 2020-21 ರಲ್ಲಿ ಪ್ರತಿ ನಿತ್ಯ 260 ಕೋಟಿ ರೂಪಾಯಿ ಗಳಿಸಿದ್ದಾರೆ.

ಅರ್ಸೇಲರ್ ಮಿತ್ತಲ್ ಕಂಪನಿಯ ಮಿತ್ತಲ್ ಗಳ ಸಂಪತ್ತು ಶೇ.187 ರಷ್ಟು ಏರಿಕೆಯಾಗಿದ್ದು, 1,74,400 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಲಕ್ಷ್ಮಿ ಎನ್ ಮಿತ್ತಲ್ ಕುಟುಂಬವು ಪ್ರತಿ ನಿತ್ಯ 312 ಕೋಟಿ ರೂಪಾಯಿಯನ್ನು 2020-21 ರಲ್ಲಿ ಗಳಿಸಿದ್ದಾರೆ. ಇನ್ನೂ ಪುಣೆಯ ಕೊರೊನಾ ಲಸಿಕೆಯನ್ನು ಉತ್ಪಾದಿಸುವ ಸೈರಸ್ ಪೂನಾವಾಲಾ ಕುಟುಂಬವು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯನ್ನು ಹೊಂದಿದೆ. ಈ ಕುಟುಂಬವು ಪ್ರತಿ ನಿತ್ಯ 190 ಕೋಟಿ ರೂಪಾಯಿ ಗಳಿಸಿದೆ. ಈ ಕುಟುಂಬದ ಸಂಪತ್ತು ಶೇ.74 ರಷ್ಟು ಏರಿಕೆಯಾಗಿದ್ದು, 1,63,700 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಇನ್ನೂ ಸೂಪರ್ ಮಾರ್ಟ್ ಬ್ಯುಸಿನೆಸ್ ಹೊಂದಿರುವ ರಾಧಾಕೃಷ್ಣನ್ ಧಾಮನಿ ಕುಟುಂಬವು ಭಾರತದ ಏಳನೇ ಅತಿ ದೊಡ್ಡ ಶ್ರೀಮಂತ ಕುಟುಂಬವಾಗಿದೆ. ಇವರ ಸಂಪತ್ತಿನ ಮೌಲ್ಯ 1,54,300 ಕೋಟಿ ರೂಪಾಯಿ ಆಗಿದೆ. ರಾಧಾಕೃಷ್ಣನ್ ಧಾಮನಿ ಕುಟುಂಬ ಪ್ರತಿ ನಿತ್ಯ 184 ಕೋಟಿ ರೂಪಾಯಿ ಗಳಿಸಿದೆ.

ಇನ್ನೂ ಕುಮಾರ ಮಂಗಳಂ ಬಿರ್ಲಾ ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಐಐಎಫ್ಎಲ್ ಹೂರನ್ ಶ್ರೀಮಂತರ ಪಟ್ಟಿಯಲ್ಲಿ 10ನೇ ಱಂಕ್ ಪಡೆದಿದ್ದಾರೆ. ಇವರ ನಿವ್ವಳ ಸಂಪತ್ತು 1,22,200 ಕೋಟಿ ರೂಪಾಯಿ ಆಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಸಂಪತ್ತು ಕಳೆದ ವರ್ಷ ಶೇ.84 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಬಿರ್ಲಾ ಗ್ರೂಪ್ ಹೆಚ್ಚು ಸಂಪತ್ತಿನ ಕಂಪನಿಗಳ ಪಟ್ಟಿಯಲ್ಲಿ 9ನೇ ಱಂಕ್ ನಲ್ಲಿತ್ತು. ಬಿರ್ಲಾ ಗ್ರೂಪ್ ಸಂಪತ್ತುನಲ್ಲಿ ವರ್ಷದಿಂದ ವರ್ಷಕ್ಕೆ ಶೇ.230 ರಷ್ಟು ಏರಿಕೆಯಾಗಿದೆ. ಬಿರ್ಲಾ ಗ್ರೂಪ್ ಪ್ರತಿ ನಿತ್ಯ 230 ಕೋಟಿ ರೂಪಾಯಿ ಗಳಿಸಿದೆ.

ಇದನ್ನೂ ಓದಿ: 

Piramal Group: ಡಿಎಚ್​​ಎಫ್​ಎಲ್​ ಸ್ವಾಧೀನ ಪೂರ್ಣಗೊಳಿಸಿದ ಪಿರಮಲ್; ಏನಿದು ಭಾರತದ ಅತಿದೊಡ್ಡ ವಹಿವಾಟು?

Rich: ಭಾರತದ ಟಾಪ್ ಶೇ 10ರಷ್ಟು ಶ್ರೀಮಂತರ ಬಳಿ ಶೇ 50ಕ್ಕೂ ಹೆಚ್ಚು ಸಂಪತ್ತು ಸಂಗ್ರಹ ಎಂದಿದೆ ಈ ಸಮೀಕ್ಷೆ

Published On - 4:19 pm, Thu, 30 September 21

ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ