AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR Filing: ಐಟಿಆರ್ ಫೈಲಿಂಗ್ ದಿನಾಂಕ ವಿಸ್ತರಣೆ ಪ್ರಸ್ತಾವ ಇಲ್ಲ ಎಂದ ಕೇಂದ್ರ ಸರ್ಕಾರ

ಆದಾಯ ತೆರಿಗೆ ಫೈಲಿಂಗ್ ಗಡುವನ್ನು ವಿಸ್ತರಿಸುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಡಿಸೆಂಬರ್ 31ನೇ ತಾರೀಕಿನ ಶುಕ್ರವಾರ ಮಾಹಿತಿ ನೀಡಲಾಗಿದೆ.

ITR Filing: ಐಟಿಆರ್ ಫೈಲಿಂಗ್ ದಿನಾಂಕ ವಿಸ್ತರಣೆ ಪ್ರಸ್ತಾವ ಇಲ್ಲ ಎಂದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 31, 2021 | 5:22 PM

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನ 31 ಡಿಸೆಂಬರ್ 2021, ಶುಕ್ರವಾರ ಆಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಮಾತನಾಡಿ, ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಸರಾಗವಾಗಿ ನಡೆಯುತ್ತಿದೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಒಟ್ಟು 5.62 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ. ಇಂದು 20 ಲಕ್ಷಕ್ಕೂ ಹೆಚ್ಚು ರಿಟರ್ನ್ಸ್ ಸಲ್ಲಿಕೆಯಾಗಿದೆ. ಈ ವರ್ಷ 60 ಲಕ್ಷ ಹೆಚ್ಚು ರಿಟರ್ನ್ಸ್ ಸಲ್ಲಿಸಲಾಗಿದೆ ಎಂದು ಬಜಾಜ್ ಹೇಳಿದ್ದಾರೆ.

ಕಾನ್ಪುರದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸುಗಂಧ ದ್ರವ್ಯ ಉದ್ಯಮಿಗಳು ಮತ್ತು ಎಸ್‌ಪಿ ಎಂಎಲ್‌ಸಿ ಪುಷ್ಪರಾಜ್ ಜೈನ್ ಮತ್ತು ಇತರರ ಆಸ್ತಿಗಳಲ್ಲಿ ಇಂದಿನ ಶೋಧ ಕಾರ್ಯಾಚರಣೆಯು ಕ್ರಿಯಾಶೀಲ ಗುಪ್ತಚರವನ್ನು ಆಧರಿಸಿದೆ ಎಂದು ಹೇಳಿದ್ದಾರೆ. “ಇಂದಿನ ಐಟಿ ದಾಳಿಗಳಲ್ಲಿ ಸಂಪರ್ಕ ಇಲ್ಲದ ವಸ್ತುಗಳು ಹೊರಹೊಮ್ಮುತ್ತಿವೆ,” ಎಂದು ಅವರು ಹೇಳಿದ್ದಾರೆ. ಕನೌಜ್‌ನ ಸಮಾಜವಾದಿ ಪಕ್ಷದ ಎಂಎಲ್‌ಸಿ ಸೇರಿದಂತೆ ಉತ್ತರ ಪ್ರದೇಶದ ಕೆಲವು ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ವರದಿಗಳ ಪ್ರಕಾರ, ಕನೌಜ್, ಕಾನ್ಪುರ್, ಎನ್‌ಸಿಆರ್, ಸೂರತ್, ಮುಂಬೈ ಮತ್ತು ಇತರ ಕೆಲವು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಸುಮಾರು 30-40 ಸ್ಥಳಗಳನ್ನು ಒಳಗೊಂಡಿದೆ. ಜಿಎಸ್​ಟಿ ಗುಪ್ತಚರ ನಿರ್ದೇಶನಾಲಯ (DGGI) ಇತ್ತೀಚೆಗೆ ಕಾನ್ಪುರ ಮತ್ತು ಕನೌಜ್‌ನಲ್ಲಿ ಶಿಖರ್ ಬ್ರಾಂಡ್ ಪಾನ್ ಮಸಾಲ, ಸಾಗಣೆದಾರ ಮತ್ತು ಇತರರ ವಿರುದ್ಧ ದಾಳಿಗಳನ್ನು ನಡೆಸಿತು. ಆ ನಂತರ ಸುಗಂಧ ದ್ರವ್ಯ ವ್ಯಾಪಾರಿ ಪೀಯೂಶ್ ಜೈನ್ ಅವರನ್ನು ಬಂಧಿಸಿತ್ತು. ಕಾರ್ಯಾಚರಣೆ ವೇಳೆ 26 ಕೇಜಿ ಚಿನ್ನ ಮತ್ತು ಅಪಾರ ಪ್ರಮಾಣದ ಶ್ರೀಗಂಧದ ಎಣ್ಣೆಯನ್ನು ಹೊರತುಪಡಿಸಿ ರೂ. 197 ಕೋಟಿಗೂ ಹೆಚ್ಚು ಹಣವನ್ನು ಸಂಸ್ಥೆ ವಶಪಡಿಸಿಕೊಂಡಿದೆ.

ಇದನ್ನೂ ಓದಿ: Income Tax: ಈ ಐದರಲ್ಲಿ ಹೆಚ್ಚಿನ ಮೌಲ್ಯದ ನಗದು ವಹಿವಾಟಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬಹುದು

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ