Sign In

By signing in or creating an account, you agree with Associated Broadcasting Company's Terms & Conditions and Privacy Policy.

Life certificate: ಪಿಂಚಣಿದಾರರ ಜೀವಿತ ಪ್ರಮಾಣ ಪತ್ರ ಸಲ್ಲಿಕೆಗೆ ಫೆ. 28ರವರೆಗೆ ಗಡುವು ವಿಸ್ತರಣೆ

ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸುವುದಕ್ಕೆ ಪಿಂಚಣಿದಾರರಿಗೆ ಇದ್ದ ಗಡುವನ್ನು ಫೆಬ್ರುವರಿ 28, 2022ಕ್ಕೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

Life certificate: ಪಿಂಚಣಿದಾರರ ಜೀವಿತ ಪ್ರಮಾಣ ಪತ್ರ ಸಲ್ಲಿಕೆಗೆ ಫೆ. 28ರವರೆಗೆ ಗಡುವು ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 31, 2021 | 6:33 PM

ಕೊವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸುವ ಅವಧಿಯನ್ನು ಫೆಬ್ರವರಿ 28, 2022ರ ವರೆಗೆ ಸರ್ಕಾರ ಶುಕ್ರವಾರದಂದು ವಿಸ್ತರಣೆ ಮಾಡಿದೆ. “ವಿವಿಧ ರಾಜ್ಯಗಳಲ್ಲಿ ಹಬ್ಬುತ್ತಿರುವ ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಮತ್ತು ವಯಸ್ಸಾದವರು ಕೊರೊನಾ ವೈರಸ್‌ಗೆ ದುರ್ಬಲತೆಯನ್ನು ಗಮನದಲ್ಲಿಟ್ಟುಕೊಂಡು, ಪಿಂಚಣಿದಾರರು ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಲು ಈಗ ಇರುವ 31.12.2021ರ ಸಮಯವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ,” ಎಂದು ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಿದೆ.

ಈಗ ಕೇಂದ್ರ ಸರ್ಕಾರದ ಪಿಂಚಣಿದಾರರು 28.02.2022ರವರೆಗೆ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ. “ಈ ವಿಸ್ತೃತ ಅವಧಿಯಲ್ಲಿ, ಪಿಂಚಣಿ ವಿತರಣೆ ಅಧಿಕಾರಿಗಳು (ಪಿಡಿಎ) ತಡೆರಹಿತವಾಗಿ ಪಿಂಚಣಿ ಪಾವತಿಸುವುದನ್ನು ಮುಂದುವರಿಸಲಾಗುತ್ತದೆ,” ಎಂದು ಅದು ಹೇಳಿದೆ.

ಜೀವಿತ ಪ್ರಮಾಣ ಪತ್ರಗಳನ್ನು ಪಡೆಯುವಾಗ “ಶಾಖೆಗಳಲ್ಲಿ ವಿಪರೀತ ನೂಕುನುಗ್ಗಲನ್ನು ತಪ್ಪಿಸಲು ಮತ್ತು ಕೊವಿಡ್ -19 ಸೂಕ್ತ ನಡವಳಿಕೆಯನ್ನು ಕಾಪಾಡಿಕೊಳ್ಳಲು” ಈ ಕ್ರಮಗಳು ನಿರೀಕ್ಷಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. “ಪಿಂಚಣಿ ವಿತರಿಸುವ ಅಧಿಕಾರಿಗಳು ಶಾಖೆಗಳಲ್ಲಿ ಸರಿಯಾದ ವ್ಯವಸ್ಥೆಗಳು ಮತ್ತು ಸಾಮಾಜಿಕ ಅಂತರದ ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಜನದಟ್ಟಣೆಯನ್ನು ತಡೆಯಬೇಕು,” ಎಂದು ಹೇಳಲಾಗಿದೆ.

ಇದನ್ನೂ ಓದಿ: ITR Filing: ಐಟಿಆರ್ ಫೈಲಿಂಗ್ ದಿನಾಂಕ ವಿಸ್ತರಣೆ ಪ್ರಸ್ತಾವ ಇಲ್ಲ ಎಂದ ಕೇಂದ್ರ ಸರ್ಕಾರ