AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax Return: ಹಣಕಾಸು ವರ್ಷ 2020-21ಕ್ಕಾಗಿ ಐಟಿಆರ್ ಸಲ್ಲಿಸಿಲ್ಲವೇ? ಏಪ್ರಿಲ್ 1ರಿಂದ ಹೆಚ್ಚಿನ ಟಿಡಿಎಸ್, ಟಿಸಿಎಸ್​

ಹಣಕಾಸು ವರ್ಷ 2020-21ರಲ್ಲಿ ಐಟಿಆರ್ ಫೈಲಿಂಗ್ ಮಾಡದಿದ್ದಲ್ಲಿ ಹೆಚ್ಚಿನ ದರದ ಟಿಡಿಎಸ್​, ಟಿಸಿಎಸ್ ಪಾವತಿ ಮಾಡಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.

Income Tax Return: ಹಣಕಾಸು ವರ್ಷ 2020-21ಕ್ಕಾಗಿ ಐಟಿಆರ್ ಸಲ್ಲಿಸಿಲ್ಲವೇ? ಏಪ್ರಿಲ್ 1ರಿಂದ ಹೆಚ್ಚಿನ ಟಿಡಿಎಸ್, ಟಿಸಿಎಸ್​
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 29, 2022 | 11:47 AM

Share

ಹಣಕಾಸು ವರ್ಷ (FY) 2020-21ಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಇನ್ನೂ ಫೈಲ್ ಮಾಡಿಲ್ಲವಾ? ಹಣಕಾಸು ವರ್ಷ 2020-21ಕ್ಕೆ ನಿಮ್ಮ ಟಿಡಿಎಸ್, ಟಿಸಿಎಸ್ 50 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಏಪ್ರಿಲ್ 1, 2022ರಿಂದ ಹೆಚ್ಚಿನ ಟಿಡಿಎಸ್, ಟಿಸಿಎಸ್​ ಪಾವತಿಸಬೇಕಾಗುತ್ತದೆ. ಇದು ಏಕೆಂದರೆ, ಸರ್ಕಾರವು ಕಾನೂನಿಗೆ ತಿದ್ದುಪಡಿ ತಂದಿದೆ. ಅದರ ಪ್ರಕಾರ ಒಂದು ವರ್ಷ ಐಟಿಆರ್ ಫೈಲ್ ಮಾಡದಿದ್ದಲ್ಲಿ ಮತ್ತು ಹಿಂದಿನ ಹಣಕಾಸು ವರ್ಷದಲ್ಲಿ ಟಿಡಿಎಸ್ 50 ಸಾವಿರ ರೂಪಾಯಿ ದಾಟಿದ್ದಲ್ಲಿ ಮುಂದಿನ ಹಣಕಾಸು ವರ್ಷಕ್ಕೆ ಹೆಚ್ಚಿನ ದರದಲ್ಲಿ ಟಿಡಿಎಸ್, ಟಿಸಿಎಸ್ ಕಡಿತಕ್ಕೆ ಕಾರಣ ಆಗುತ್ತದೆ. ಈ ರೀತಿ ಹೆಚ್ಚಿನ ದರಗಳು ನಿರ್ದಿಷ್ಟ ಆದಾಯ ಮೂಲಗಳಾದ ಆರ್​ಡಿ (ರೆಕರಿಂಗ್ ಡೆಪಾಸಿಟ್) ಮೇಲಿನ ಬಡ್ಡಿ, ಎಫ್​ಡಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ, ಡಿವಿಡೆಂಡ್​ ಆದಾಯ, ವರ್ಷಾಶನ (ಆನ್ಯುಯಿಟಿ) ಪಾವತಿ ಮುಂತಾದವುಗಳಿಗೆ ಅನ್ವಯ ಆಗುತ್ತದೆ.

ಹೆಚ್ಚಿನ ಟಿಡಿಎಸ್, ಟಿಸಿಎಸ್​ಗೆ ಸಂಬಂಧಿಸಿದಂತೆ ಏನಿದು ಹೊಸ ನಿಯಮ? 2021ರ ಬಜೆಟ್​ನಲ್ಲಿ ಹೆಚ್ಚಿನ ಟಿಡಿಎಸ್, ಟಿಸಿಎಸ್​ಗೆ ಸಂಬಂಧಿಸಿದ ಕಾನೂನು ಘೋಷಣೆ ಮಾಡಲಾಯಿತು. 2021-22ರ ಹನಕಾಸು ವರ್ಷಕ್ಕೆ ಯಾರಾದರೂ ವೈಯಕ್ತಿಕವಾಗಿ ಹಣಕಾಸು ವರ್ಷ 2018-19 ಮತ್ತು 2019-20ಕ್ಕೆ ಐಟಿಆರ್​ ಫೈಲ್ ಮಾಡದಿದ್ದಲ್ಲಿ ಹಾಗೂ ಪ್ರತಿ ವರ್ಷ ಟಿಡಿಎಸ್​ ಮತ್ತು ಟಿಸಿಎಸ್ ಕಡಿತ ಮಾಡಬೇಕಾದದ್ದು 50 ಸಾವಿರ ರೂಪಾಯಿ ದಾಟಿದ್ದಲ್ಲಿ ಆಗ ತೆರಿಗೆದಾರರ ಬಡ್ಡಿ ಆದಾಯ, ಡಿವಿಡೆಂಡ್ ಆದಾಯ, ವರ್ಷಾಶನ ಪಾವತಿ ಮುಂತಾದವುಗಳಿಂದ ಹೆಚ್ಚಿನ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ.

ಬಜೆಟ್​ 2022ರಲ್ಲಿ ಈ ಮೇಲ್ಕಂಡ ಕಾನೂನನ್ನು ತಿದ್ದುಪಡಿ ಮಾಡಿದ್ದೇ ಹೆಚ್ಚು ಕಠಿಣ ಮಾಡುವ ಉದ್ದೇಶದಿಂದ. ತಿದ್ದುಪಡಿ ಆದ ಕಾನೂನಿನ ಪ್ರಕಾರ, ಹಣಕಾಸು ವರ್ಷ 2022-23ರಿಂದ ವೈಯಕ್ತಿಕವಾಗಿ 2019-20ರ ಹಣಕಾಸು ವರ್ಷಕ್ಕೆ ಐಟಿಆರ್​ ಫೈಲ್ ಮಾಡಿ, 2020-21ರ ಸಾಲಿಗೆ ಮಾಡಿಲ್ಲ ಹಾಗೂ ಒಟ್ಟಾರೆಯಾಗಿ 2020-21ರ ಹಣಕಾಸು ವರ್ಷಕ್ಕೆ ಒಟ್ಟು ಟಿಡಿಎಸ್ 50 ಸಾವಿರ ರೂಪಾಯಿ ದಾಟಿದಲ್ಲಿ ಏಪ್ರಿಲ್ 1, 2022ರಿಂದ ಅಂಥವರಿಂದ ಹೆಚ್ಚಿನ ಟಿಡಿಎಸ್ಮ ಟಿಸಿಎಸ್ ಕಡಿತ ಮಾಡಲಾಗುವುದು.

ಈ ಬಗ್ಗೆ ವಿಷಯ ತಜ್ಞರು ವಿವರಿಸುವುದು ಹೀಗೆ, ಐಟಿಆರ್ ಫೈಲಿಂಗ್ ವೆಬ್​ಸೈಟ್ ಹೇಳುವಂತೆ, ಸೆಕ್ಷನ್ 206-AB ಉದ್ದೇಶಕ್ಕಾಗಿ, ತಿದ್ದುಪಡಿಯಾದ ನಿಯಮಾವಳಿಯ ಪ್ರಕಾರ, ಹಣಕಾಸು ವರ್ಷ 2020-21ಕ್ಕೆ ಐಟಿಆರ್ ಫೈಲ್ ಮಾಡದಿದ್ದಲ್ಲಿ ಮತ್ತು ಆ ವರ್ಷಕ್ಕೆ ಟಿಡಿಎಸ್, ಟಿಸಿಎಸ್ 50 ಸಾವಿರ ರೂಪಾಯಿ ದಾಟಿದ್ದಲ್ಲಿ ಹಣಕಾಸು ವರ್ಷ 2022-23ಕ್ಕೆ ವಹಿವಾಟಿನ ಮೇಲೆ ಹೆಚ್ಚಿನ ದರದ ಟಿಡಿಎಸ್ ಅನ್ವಯ ಆಗುತ್ತದೆ. ಆದಾಯ ತೆರಿಗೆ ಇಲಾಖೆ ಸಹ ಇದನ್ನೇ ತಮ್ಮ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಿಂದ ಟ್ವೀಟ್ ಮಾಡಿದೆ. ಅದರ ಪ್ರಕಾರ, ಐಟಿಆರ್​ ಫೈಲಿಂಗ್ ಮಾಡಲಿಲ್ಲ ಅಂದರೆ ಅದರ ಪರಿಣಾಮವಾಗಿ ಹೆಚ್ಚಿನ ಟಿಡಿಎಸ್ ಮುಂದಿನ ವರ್ಷ ಆಗುತ್ತದೆ. ಅಸೆಸ್​ಮೆಂಟ್​ ವರ್ಷ 2021-22ಕ್ಕೆ ಐಟಿಆರ್ ಫೈಲ್ ಮಾಡುವುದಕ್ಕೆ ಮಾರ್ಚ್ 31, 2022 ಕೊನೆ ದಿನ. ಆ ದಿನದ ತನಕ ಕಾಯುವುದು ಬೇಡ.

ಅಸೆಸ್​ಮೆಂಟ್ ವರ್ಷ 2021-22 ಅಂದರೆ, ಹಣಕಾಸು ವರ್ಷ 2020-21.

ಹೆಚ್ಚಿನ ಟಿಡಿಎಸ್/ಟಿಸಿಎಸ್ ದರ ಆದಾಯ ತೆರಿಗೆ ಕಾಯ್ದೆ, 1961, ಟಿಡಿಎಸ್, ಟಿಸಿಎಸ್​ ಅನ್ನು ಈ ಕೆಳಗಿನವುಗಳಲ್ಲಿ ಯಾವುದು ಹೆಚ್ಚೋ ಆ ದರದಲ್ಲಿ ಕಡಿತ ಮಾಡಲಾಗುತ್ತದೆ. 1) ಸಂಬಂಧಪಟ್ಟ ಕಾಯ್ದೆಯಲ್ಲಿ ಇರುವ ನಿಯಮಾವಳಿಯಂತೆ ನಿರ್ದಿಷ್ಟವಾಗಿ ಹೇಳಿರುವ ದರದ ದುಪ್ಪಟ್ಟು ಅಥವಾ 2) ಈಗಾಗಲೇ ಇರುವ ದರದ ಅಥವಾ ದರಗಳ ದುಪ್ಪಟ್ಟು; ಅಥವಾ 3) ಶೇ 5ರ ದರ

ಹೆಚ್ಚಿನ ಟಿಡಿಎಸ್, ಟಿಸಿಎಸ್ ಹೇಗೆ ಕಡಿತ ಮಾಡಲಾಗುತ್ತದೆ? ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಸುತ್ತೋಲೆಯೊಂದನ್ನು 2021ರ ಜೂನ್​ನಲ್ಲಿ ಬಿಡುಗಡೆ ಮಾಡಿದ್ದು, ಯಾವ ವ್ಯಕ್ತಿಗಳ ಮೇಲೆ ಹೆಚ್ಚಿನ ದರದ ಟಿಡಿಎಸ್, ಟಿಸಿಎಸ್ ಅನ್ವಯಿಸಬೇಕು ಎಂಬುದರ ನಿರ್ದಿಷ್ಟ ಕ್ರಮಗಳ ಬಗ್ಗೆ ಪಟ್ಟಿಯನ್ನು ನೀಡಲಾಗಿದೆ. ಹಣಕಾಸು ಸಂಸ್ಥೆಗಳಾದ ಬ್ಯಾಂಕ್​ಗಳು, ಕಂಪೆನಿಗಳು ಹೀಗೆ ಟಿಡಿಎಸ್​ ಕಡಿತ ಮಾಡಿಕೊಳ್ಳಬೇಕಾದಂಥವು ಆ ವ್ಯಕ್ತಿಯ PAN (ಪರ್ಮನೆಂಟ್ ಅಕೌಂಟ್ ನಂಬರ್) ಅನ್ನು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್​ನ ನಿರ್ದಿಷ್ಟ ಸ್ಥಳದಲ್ಲಿ ನಮೂದಿಸಬೇಕು. ಆಗ ಹೆಚ್ಚಿನ ಟಿಡಿಎಸ್, ಟಿಸಿಎಸ್ ಅನ್ವಯಿಸಬಹುದಾ ಎಂಬುದನ್ನು ಪರಿಶೀಲಿಸಬಹುದು.

ಆ ಸುತ್ತೋಲೆಯ ಪ್ರಕಾರ, ಒಬ್ಬ ವ್ಯಕ್ತಿಯು ಒಮ್ಮೆ ITR ಅನ್ನು ಫೈಲ್ ಮಾಡಿದರೆ ಆ ನಂತರ ಹೆಚ್ಚಿನ ಟಿಡಿಎಸ್, ಟಿಸಿಎಸ್ ಅನ್ವಯವಾಗುವ ವ್ಯಕ್ತಿಗಳ ಪಟ್ಟಿಯಿಂದ ಹೆಸರನ್ನು ತೆಗೆಯಲಾಗುತ್ತದೆ. ಹೀಗಾಗಿ, ಒಬ್ಬ ವ್ಯಕ್ತಿಯು ಹಣಕಾಸು ವರ್ಷ 2020-21ರ ಸಾಲಿಗೆ ಐಟಿಆರ್ ಫೈಲಿಂಗ್ ತಪ್ಪಿಸಿಕೊಂಡರೂ ಹಣಕಾಸು ವರ್ಷ 2021-22ಕ್ಕೆ ಐಟಿಆರ್ ಅನ್ನು ಸಲ್ಲಿಸಿದರೂ (ಕೊನೆಯ ದಿನಾಂಕ ಜುಲೈ 31 ಆಗಿದೆ, ಸರ್ಕಾರವು ವಿಸ್ತರಿಸದ ಹೊರತು), ಹೆಚ್ಚಿನ ಟಿಡಿಎಸ್, ಟಿಸಿಎಸ್ ಅನ್ವಯವಾಗುವ ವ್ಯಕ್ತಿಗಳ ಪಟ್ಟಿಯಿಂದ ಅಂಥ ವ್ಯಕ್ತಿಯ ಹೆಸರನ್ನು ತೆಗೆಯಲಾಗುತ್ತದೆ. ಆದರೆ ಐಟಿಆರ್ ಅನ್ನು ಸಲ್ಲಿಸುವ ಅಂತಿಮ ದಿನಾಂಕದ ಮುಕ್ತಾಯ ನಂತರ ಅಥವಾ ಐಟಿಆರ್ ಅನ್ನು ಸಲ್ಲಿಸಿ, ಪರಿಶೀಲಿಸಿದ ನಂತರ ಮಾತ್ರ ಹೆಸರನ್ನು ತೆಗೆಯಲಾಗುತ್ತದೆ.

ಪಟ್ಟಿಯಿಂದ ಒಬ್ಬರ ಹೆಸರನ್ನು ತೆಗೆಯುವವರೆಗೆ ಹೆಚ್ಚಿನ ಟಿಡಿಎಸ್, ಟಿಸಿಎಸ್ ವಿಧಿಸುವುದನ್ನು ಮುಂದುವರಿಸಲಾಗುತ್ತದೆ. ಆದ್ದರಿಂದ ಹಣಕಾಸು ವರ್ಷ 2022-23ರ ಆರಂಭದಿಂದ ಹೆಚ್ಚಿನ ಟಿಡಿಎಸ್, ಟಿಸಿಎಸ್ ಅನ್ನು ತಪ್ಪಿಸಲು ಹಣಕಾಸು ವರ್ಷ 2020-21ಕ್ಕೆ ಐಟಿಆರ್ ಅನ್ನು ಸಲ್ಲಿಸುವುದು ಉತ್ತಮ.

ಇದನ್ನೂ ಓದಿ: Budget 2022: ಬಜೆಟ್​ನಲ್ಲಿ ಕ್ರಿಪ್ಟೋ ವಹಿವಾಟಿನ ಮೇಲೆ ಟಿಡಿಎಸ್/ಟಿಸಿಎಸ್ ವಿಧಿಸಲು ಸರ್ಕಾರ ಚಿಂತನೆ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್