AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New ITR filing rules : ಅಪ್​ಡೇಟೆಡ್ ಹೊಸ ಐಟಿಆರ್​ ಫೈಲಿಂಗ್​ ಮಾಡಲು ಎಷ್ಟು ಪಾವತಿಸಬೇಕು?

ಕೇಂದ್ರ ಬಜೆಟ್​ 2022ರಲ್ಲಿ ಪರಿಷ್ಕೃತ ಐಟಿಆರ್ ಫೈಲಿಂಗ್ ಮಾಡುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಎಷ್ಟು ಪಾವತಿ ಮಾಡಬೇಕು ಎಂಬ ವಿವರ ಇಲ್ಲಿದೆ.

New ITR filing rules : ಅಪ್​ಡೇಟೆಡ್ ಹೊಸ ಐಟಿಆರ್​ ಫೈಲಿಂಗ್​ ಮಾಡಲು ಎಷ್ಟು ಪಾವತಿಸಬೇಕು?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Feb 02, 2022 | 6:36 PM

Share

ಕೇಂದ್ರ ಬಜೆಟ್ 2022 (Union Budget 2022) ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಸ್ಲ್ಯಾಬ್ ದರಗಳಲ್ಲಿ ಯಾವುದೇ ಬದಲಾವಣೆ ಘೋಷಣೆ ಮಾಡಿಲ್ಲ. ಆದರೆ ತಮ್ಮ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವವರಿಗೆ ಹಣಕಾಸು ಸಚಿವರು ಸ್ವಲ್ಪ ನಿರಾಳ ನೀಡಿದ್ದಾರೆ. ಒಂದು ವೇಳೆ ಯಾವುದಾದರೂ ವರ್ಷಕ್ಕೆ ಕಡಿಮೆ ತೆರಿಗೆ ಪಾವತಿಸಿದ ಸಂದರ್ಭದಲ್ಲಿ ಪರಿಷ್ಕೃತ ತೆರಿಗೆ ಸಲ್ಲಿಕೆಗೆ ಅಸೆಸ್​ಮೆಂಟ್​ ವರ್ಷದಿಂದ ಎರಡು ವರ್ಷಗಳವರೆಗೆ ಅವಕಾಶ ಇರುತ್ತದೆ ಎಂದು ಹಣಕಾಸು ಸಚಿವೆ ಪ್ರಕಟಿಸಿದ್ದಾರೆ. “ಅಂತಹ ದೋಷಗಳನ್ನು ಸರಿಪಡಿಸುವುದಕ್ಕೆ ಅವಕಾಶವನ್ನು ಒದಗಿಸಲು, ಹೆಚ್ಚುವರಿ ತೆರಿಗೆ ಪಾವತಿಗೆ ಅಪ್​ಡೇಟೆಡ್​ ರಿಟರ್ನ್ ಸಲ್ಲಿಸಲು ತೆರಿಗೆದಾರರಿಗೆ ಅನುಮತಿ ನೀಡುವ ಹೊಸ ನಿಯಮಾವಳಿಯನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ. ಈ ಅಪ್​ಡೇಟೆಡ್ ರಿಟರ್ನ್ ಅನ್ನು ಸಂಬಂಧಿತ ಅಸೆಸ್​ಮೆಂಟ್​​ ವರ್ಷದ ಅಂತ್ಯದಿಂದ ಎರಡು ವರ್ಷಗಳೊಳಗೆ ಸಲ್ಲಿಸಬಹುದು,” ಎಂದು ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್​ ಭಾಷಣದಲ್ಲಿ ಹೇಳಿದ್ದಾರೆ.

ಅಪ್​ಡೇಟೆಡ್ ಐಟಿಆರ್​ ಸಲ್ಲಿಕೆಗೆ ನೀವು ಎಷ್ಟು ಪಾವತಿಸಬೇಕು? “ತೆರಿಗೆಯ ಮೇಲಿನ ಹೆಚ್ಚುವರಿ ತೆರಿಗೆಯಾಗಿ ಶೇಕಡಾ 25 ಅಥವಾ ಶೇಕಡಾ 50ಕ್ಕೆ ಸಮಾನವಾದ ಮೊತ್ತ ಮತ್ತು ಹೆಚ್ಚುವರಿ ಆದಾಯದ ಮೇಲಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ,” ಎಂದು ಬಜೆಟ್ ಸುತ್ತೋಲೆಯಲ್ಲಿ ಹೇಳಲಾಗಿದೆ. ಅಂತಹ ಹೆಚ್ಚುವರಿ ಆದಾಯವನ್ನು ವರದಿ ಮಾಡುವಾಗ ತೆರಿಗೆದಾರರು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. “ಈ ಕೊಡುಗೆ ಅಗ್ಗವಾಗಿ ಬರುವುದಿಲ್ಲ. 12 ತಿಂಗಳೊಳಗೆ (ಶೇ 25) ಅಪ್​ಡೇಟೆಡ್ ಐಟಿಆರ್​ ಸಲ್ಲಿಸಿದರೆ ಅಥವಾ 12 ತಿಂಗಳ ನಂತರ ಆದರೆ 24 ತಿಂಗಳೊಳಗೆ (ಶೇ 50) ಐಟಿಆರ್ ಒದಗಿಸುವ ಸಮಯದಲ್ಲಿ ಪಾವತಿಸಬೇಕಾದ ತೆರಿಗೆ ಮತ್ತು ಬಡ್ಡಿಯ ಶೇಕಡಾವಾರು ನಿಯಮಗಳಲ್ಲಿ ಪ್ರಸ್ತಾಪಿಸಿದ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕು,” ಎಂದು ತೆರಿಗೆ ತಜ್ಞರು ಹೇಳುತ್ತಾರೆ.

ವಾರ್ಷಿಕ ಮಾಹಿತಿ ರಿಟರ್ನ್ (ಎಐಎಸ್) ಪರಿಚಯವು ಸಂಪೂರ್ಣ ತೆರಿಗೆ ಪಾವತಿಸದೆ ವಂಚಿಸುವ ತೆರಿಗೆದಾರರ ಮನಸ್ಸಿನಲ್ಲಿ ಭಯದ ಭಾವನೆಯನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ. “ತಮ್ಮ ಆದಾಯವನ್ನು ಸಂಪೂರ್ಣವಾಗಿ ಘೋಷಿಸದ ಅಥವಾ ತೆರಿಗೆ ಪ್ರಭಾವವು ಹೆಚ್ಚು ಮಹತ್ವದ್ದಾಗಿರದ ಐಟಿಆರ್ ಅನ್ನು ಸಲ್ಲಿಸದ ತೆರಿಗೆದಾರರನ್ನು ಪತ್ತೆ ಹಚ್ಚಲು ಮತ್ತು ಬೆನ್ನಟ್ಟಲು ಅಗತ್ಯವಾದ ವ್ಯವಸ್ಥೆಯನ್ನು ಸರ್ಕಾರ ಹೊಂದಿಲ್ಲದ ಕಾರಣ ತೆರಿಗೆದಾರರಿಗೆ ನೀಡಲು ಹೊಸ ಆಲೋಚನೆಯನ್ನು ಹೊರತಂದಿದೆ. ಆದಾಯ ತೆರಿಗೆ ಇಲಾಖೆಗಳು ಅದನ್ನು ಕಂಡುಹಿಡಿಯುವ ಮೊದಲು ಅಸೆಸ್​ಮೆಂಟ್​ ವರ್ಷದ ಅಂತ್ಯದಿಂದ ಎರಡು ವರ್ಷಗಳೊಳಗೆ ತೆರಿಗೆಯನ್ನು ಪಾವತಿಸುವ ಮೂಲಕ ಅಪ್​ಡೇಟೆಡ್​ ಐಟಿಆರ್​ ಅಪ್‌ಲೋಡ್ ಮಾಡುವ ಮೂಲಕ ಕೆಲವು ಹೆಚ್ಚುವರಿ ವೆಚ್ಚದೊಂದಿಗೆ ಸ್ವಂತವಾಗಿ ಶುದ್ಧ ಆಗಲು ಅವಕಾಶವಿದೆ,” ಎಂದು ಅವರು ಹೇಳಿದ್ದಾರೆ.

ಎಲ್ಲ ತೆರಿಗೆದಾರರು ತಮ್ಮ ತೆರಿಗೆ ರಿಟರ್ನ್‌ಗಳನ್ನು ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವ ದಿನಾಂಕದಿಂದ ಐದು ತಿಂಗಳ ಸೀಮಿತ ವಿಂಡೋದಲ್ಲಿ ಪರಿಷ್ಕರಿಸುವ ಮಾರ್ಗವನ್ನು ಹೊಂದಿದ್ದರೂ ಈಗ ಅಪ್​ಡೇಟೆಡ್ ರಿಟರ್ನ್ ಅನ್ನು ಸಂಬಂಧಿತ ಅಸೆಸ್​ಮೆಂಟ್ ವರ್ಷದ ಅಂತ್ಯದಿಂದ ಎರಡು ವರ್ಷಗಳ ಅವಧಿಯಲ್ಲಿ ಸಲ್ಲಿಸಬಹುದು. ಹೆಚ್ಚುವರಿ ನಷ್ಟ ಅಥವಾ ತೆರಿಗೆ ಹೊಣೆಗಾರಿಕೆಯಲ್ಲಿ ಇಳಿಕೆಯನ್ನು ವರದಿ ಮಾಡಲು ಅಪ್​ಡೇಟೆಡ್ ರಿಟರ್ನ್ ಸಲ್ಲಿಸಲು ಆಗುವುದಿಲ್ಲ. ಅಪ್​ಡೇಟೆಡ್​ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಮತ್ತು ಅಪ್​ಡೇಟೆಡ್ ರಿಟರ್ನ್ ಸಲ್ಲಿಸುವಾಗ ಆ ಮಟ್ಟಿಗೆ ಪುರಾವೆಗಳನ್ನು ಲಗತ್ತಿಸಬೇಕಾಗುತ್ತದೆ.

ಬಜೆಟ್ ಸುತ್ತೋಲೆ ಪ್ರಕಾರ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139ರಲ್ಲಿ ಹೊಸ ನಿಯಮಾವಳಿ ಪರಿಚಯಿಸಲಾಗಿದೆ. ಯಾವುದೇ ವ್ಯಕ್ತಿಯು ಈ ಹಿಂದೆ ಸಂಬಂಧಿತ ಅಸೆಸ್​ಮೆಂಟ್​ ವರ್ಷಕ್ಕೆ ರಿಟರ್ನ್ ಸಲ್ಲಿಸಿದ್ದರೂ ಅಥವಾ ಇಲ್ಲದಿದ್ದರೂ ಅಪ್​ಡೇಟೆಡ್​ ಆದಾಯ ರಿಟರ್ನ್​ ಸಲ್ಲಿಸಬಹುದು.

ಇದನ್ನೂ ಓದಿ: ITR filing: ಆಧಾರ್ ಒಟಿಪಿ ಬಳಸಿ ಐಟಿಆರ್ ಫೈಲಿಂಗ್ ಇ-ವೆರಿಫೈ ಮಾಡುವುದು ಹೇಗೆ?

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು