AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold and Silver Price: ಬೆಂಗಳೂರಿನಲ್ಲಿ ಚಿನ್ನ ದರ ಸ್ಥಿರ, ಬೆಳ್ಳಿ ಬೆಲೆ ಬಾರಿ ಇಳಿಕೆ

Gold Rate Today: ಜನರಿಗೆ ಆಭರಣ ಎಂದರೆ ಹೆಚ್ಚು ಬಯಕೆ. ಚಿನ್ನ ಬೆಳ್ಳಿಗೆ ಸೆಡ್ಡು ಹೊಡೆಯುವ ಆರ್ಟಿಫಿಶಿಯಲ್ ಆಭರಣ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಚಿನ್ನ, ಬೆಳ್ಳಿಗೆ ಇರುವ ಮೌಲ್ಯ ಇದ್ದೇ ಇರುತ್ತದೆ.

Gold and Silver Price: ಬೆಂಗಳೂರಿನಲ್ಲಿ ಚಿನ್ನ ದರ ಸ್ಥಿರ, ಬೆಳ್ಳಿ ಬೆಲೆ ಬಾರಿ ಇಳಿಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Feb 03, 2022 | 9:20 AM

Share

Gold and Silver Price Today| ಆಭರಣ ಕೇವಲ ಸೌಂದರ್ಯವನ್ನು ಮಾತ್ರ ಹೆಚ್ಚಿಸಲ್ಲ. ಕಷ್ಟದ ಸಮಯದಲ್ಲೂ ಕೈ ಹಿಡಿಯುತ್ತದೆ. ಕಷ್ಟ ಕಾಲದಲ್ಲಿ ದಿಕ್ಕು ತೋಚದಿದ್ದಾಗ ಆಭರಣ ಧೈರ್ಯ ತುಂಬುತ್ತದೆ. ಹೀಗಾಗಿ ಜನರಿಗೆ ಆಭರಣ ಎಂದರೆ ಹೆಚ್ಚು ಬಯಕೆ. ಚಿನ್ನ ಬೆಳ್ಳಿಗೆ ಸೆಡ್ಡು ಹೊಡೆಯುವ ಆರ್ಟಿಫಿಶಿಯಲ್ ಆಭರಣ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಚಿನ್ನ, ಬೆಳ್ಳಿಗೆ ಇರುವ ಮೌಲ್ಯ ಇದ್ದೇ ಇರುತ್ತದೆ. ಇದೇನೇ ಇರಲಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ಮೇಲೆ ಆಭರಣದ ಬೆಲೆ ಎಷ್ಟಿದೆ ಅಂತ ತಿಳಿಯಲು ಜನರಿಗೆ ಕುತೂಹಲ. ಇಂದು ಆಭರಣ ಖರೀದಿಸುವವರಿಗೆ ಇಂದಿದ (ಫೆ.03) ಚಿನ್ನ (Gold Price), ಬೆಳ್ಳಿ ದರ (Sliver Price) ಎಷ್ಟಿದೆ ಅಂತ ಇಲ್ಲಿ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price): ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,900 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,49,000 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಗೆ 48,980 ರೂ. ಇದ್ದು, 100 ಗ್ರಾಂಗೆ 4,89,800 ರೂಪಾಯಿ ನಿಗದಿಯಾಗಿದೆ. ನಿನ್ನೆ ಕೂಡಾ ಚಿನ್ನದ ಬೆಲೆ ಇಷ್ಟೇ ಇತ್ತು. ಇಂದಿನ ದರ ಗಮನಿಸಿದಾಗ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಒಂದು ಕೆಜಿ ಬೆಳ್ಳಿಗೆ 61,500 ರೂಪಾಯಿ ಇದೆ. ನಿನ್ನೆ 65,600 ರೂ. ಇತ್ತು. ನಿನ್ನೆಗಿಂತ 4,100 ರೂಪಾಯಿ ಇಳಿದಿದೆ.

ಮುಂಬೈನಲ್ಲಿ ಆಭರಣದ ಬೆಲೆ ಎಷ್ಟಿದೆ? (Mumbai Gold price): ಮುಂಬೈನಲ್ಲಿ 22 ಕ್ಯಾರೆಟೆ 10 ಗ್ರಾಂ ಚಿನ್ನಕ್ಕೆ 44,900 ರೂ. ಇದ್ದರೆ, ಇದೇ ಚಿನ್ನ 100 ಗ್ರಾಂಗೆ 4,49,000 ರೂಪಾಯಿ ಇದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,980 ರೂ. ಇದೆ. 100 ಗ್ರಾಂಗೆ 4,89,800 ರೂ. ಇದೆ. ನಗರದಲ್ಲಿ ಇಂದು ಒಂದು ಕೆಜಿ ಬೆಳ್ಳಿಗೆ 61,500 ರೂಪಾಯಿ ಇದೆ. ನಿನ್ನೆ 62,000 ರೂ. ಇತ್ತು. ಇಂದು 500 ರೂ. ಇಳಿದಿದೆ.

ದೆಹಲಿಯಲ್ಲಿ ಆಭರಣದ ಬೆಲೆ ಹೀಗಿದೆ (Delhi Gold Price): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,900 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,49,000 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,980 ರೂ. ಇದ್ದರೆ, 100 ಗ್ರಾಂಗೆ 4,89,800 ರೂ. ಇದೆ. ಒಂದು ಕೆಜಿ ಬೆಳ್ಳಿಗೆ 61,500 ರೂ. ಇದೆ. ನಿನ್ನೆ 62,000 ಇತ್ತು. ದರ ಗಮನಿಸಿದಾಗ ನಿನ್ನೆಗಿಂತ 500 ರೂಪಾಯಿ ಇಳಿಕೆಯಾಗಿದೆ.

ಹೈದರಾಬಾದ್ನಲ್ಲಿ ಆಭರಣದ ಬೆಲೆ (Hyderabad Gold Price): 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,900 ರೂ. ಇದ್ದರೆ, 100 ಗ್ರಾಂಗೆ 4,49,000 ರೂ. ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,980 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,89,800 ರೂ. ಇದೆ. ಒಂದು ಕೆಜಿ ಬೆಳ್ಳಿಗೆ 65,600 ರೂ. ಇದೆ. ನಿನ್ನೆಯೂ ಬೆಳ್ಳಿ ದರ ಇಷ್ಟೇ ಇತ್ತು.

ಇದನ್ನೂ ಓದಿ

Cervical Cancer: ಗರ್ಭಕಂಠದ ಕ್ಯಾನ್ಸರ್ ಎಂದರೇನು? ಪ್ರತಿಯೊಬ್ಬ ಮಹಿಳೆಯು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು

U19 World Cup: ಆಸ್ಟ್ರೇಲಿಯಾ ಎದುರು ಬ್ಯಾಟಿಂಗ್-ಬೌಲಿಂಗ್​ನಲ್ಲಿ ಧೂಳೆಬ್ಬಿಸಿದ ಯಶ್ ಪಡೆ: ಫೈನಲ್​ಗೇರಿದ ಭಾರತ ತಂಡ

Published On - 8:57 am, Thu, 3 February 22

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ