AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಗುಂಪು ಕಟ್ಟಿ ಮನೆಗಳ್ಳತನ ಮಾಡುತ್ತಿದ್ದ ನಟೋರಿಯಸ್ ರೌಡಿ ಅರೆಸ್ಟ್! ಬಂಧಿತರಿಂದ ಅರವತ್ತು ಲಕ್ಷ ಚಿನ್ನಾಭರಣ ವಶ

ಅರೋಪಿ ನರಸಿಂಹನ ವಿರುದ್ಧ ಎರಡು ಕೊಲೆ, ಕೊಲೆ ಯತ್ನ ಸೇರಿ ಒಟ್ಟು ಮೂವತ್ತೆಂಟು ಕೇಸ್ ದಾಖಲಾಗಿದೆ. ಈ ಹಿಂದೆ ಪೊಲೀಸರ ಮೇಲೆ ನರಸಿಂಹ ಅಟ್ಯಾಕ್ ಮಾಡಿದ್ದ. ಜನವರಿ 11ಕ್ಕೆ ಕಾನ್ಸ್​ಟೇಬಲ್ ಮೋಹನ್ ಮೇಲೆ ದಾಳಿ ಮಾಡಿದ್ದ.

ಬೆಂಗಳೂರಿನಲ್ಲಿ ಗುಂಪು ಕಟ್ಟಿ ಮನೆಗಳ್ಳತನ ಮಾಡುತ್ತಿದ್ದ ನಟೋರಿಯಸ್ ರೌಡಿ ಅರೆಸ್ಟ್! ಬಂಧಿತರಿಂದ ಅರವತ್ತು ಲಕ್ಷ ಚಿನ್ನಾಭರಣ ವಶ
ಬಂಧಿತ ಆರೋಪಿ ನರಸಿಂಹ
TV9 Web
| Updated By: sandhya thejappa|

Updated on:Feb 02, 2022 | 11:03 AM

Share

ಬೆಂಗಳೂರು: ಗಿರಿನಗರ ಪೊಲೀಸರು (Girinagar Police) ನಟೋರಿಯಸ್ ರೌಡಿಯನ್ನು ಅರೆಸ್ಟ್ ಮಾಡಿದ್ದಾರೆ. ನರಸಿಂಹ ಅಲಿಯಾಸ್ ರೆಡ್ಡಿ ಬಂಧಿತ ಆರೋಪಿ. ಈತ ಗ್ಯಾಂಗ್ ಕಟ್ಟಿಕೊಂಡು ಮನೆ ಕಳ್ಳತನ (Theft) ಮಾಡಿಸುತಿದ್ದ. ಕಳ್ಳತನಕ್ಕಾಗಿ ತಮಿಳುನಾಡಿನಿಂದ ಹುಡುಗರ ಕರೆಸುತ್ತಿದ್ದ. ಸದ್ಯ ಈತನನ್ನು ಪೊಲೀಸರು ಬಂಧಿಸಿ, ಗ್ಯಾಂಗ್​ನಲ್ಲಿದ್ದ ಬಾಗಲೂರು ನರಸಿಂಹ, ಕಾರ್ತಿಕ್, ವೆಂಕಟೇಶ್, ಶಿವ ಎಂಬುವರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳಿಂದ ಅರವತ್ತು ಲಕ್ಷದ ಚಿನ್ನದ ಅಭರಣ ಹಾಗು ಬೆಳ್ಳಿ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸುತಿದ್ದ ಮೂರು ಕಾರುಗಳನ್ನ ಜಪ್ತಿ ಮಾಡಲಾಗಿದೆ.

ಅರೋಪಿ ನರಸಿಂಹನ ವಿರುದ್ಧ ಎರಡು ಕೊಲೆ, ಕೊಲೆ ಯತ್ನ ಸೇರಿ ಒಟ್ಟು ಮೂವತ್ತೆಂಟು ಕೇಸ್ ದಾಖಲಾಗಿದೆ. ಈ ಹಿಂದೆ ಪೊಲೀಸರ ಮೇಲೆ ನರಸಿಂಹ ಅಟ್ಯಾಕ್ ಮಾಡಿದ್ದ. ಜನವರಿ 11ಕ್ಕೆ ಕಾನ್ಸ್​ಟೇಬಲ್ ಮೋಹನ್ ಮೇಲೆ ದಾಳಿ ಮಾಡಿದ್ದ. ಈ ವೇಳೆ ಪಿಎಸ್ಐ ಸುನಿಲ್ ಕಡ್ಡಿ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದರು. ವಿಚಾರಣೆ ವೇಳೆ ಗ್ಯಾಂಗ್ ಕಟ್ಟಿ ಮನೆಗಳ್ಳತನ ಮಾಡುತ್ತಿದ್ದ ವಿಚಾರ ಬಯಲಿಗೆ ಬಂದಿದೆ.

ನರಸಿಂಹ ಈ ಹಿಂದೆ ಅಕ್ಟೋಬರ್​ನಲ್ಲಿ ಗಿರಿನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರು ಹಾಗು ಎರಡು ಬೈಕ್ ಗೆ ಬೆಂಕಿ ಹಾಕಿದ್ದ. ಇದೆಲ್ಲಾ ನನಗೆ ಸೇರಬೇಕು ಅಂತ ಸಾರ್ವಜನಿಕರಿಗೆ ಬೆದರಿಸಿ ಬೆಂಕಿ ಹಾಕಿದ್ದ.

ಕಳವಿಗೆ ತರಬೇತಿ ನೀಡುತ್ತಿದ್ದ ಆರೋಪಿ ಅರೆಸ್ಟ್: ಮನೆಗಳಲ್ಲಿ ಕಳವಿಗೆ ತರಬೇತಿ ನೀಡುತ್ತಿದ್ದ ಆರೋಪಿ ಇರ್ಫಾನ್ ಷರೀಫ್, ಬಿಲಾಲ್ ಖಾನ್​ನ ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇರ್ಫಾನ್ ಷರೀಫ್​ನ ಬರೋಬ್ಬರಿ 33 ಬಾರಿ ಬಂಧಿಸಲಾಗಿತ್ತು. ಪ್ರತಿಬಾರಿ ಜೈಲಿಗೆ ಹೋದಾಗ ಹೊಸ ಪರಿಚಯ ಮಾಡಿಕೊಳ್ಳುತ್ತಿದ್ದ. ಜೈಲಿನಿಂದ ಬಂದ ಬಳಿಕ ಪರಿಚಯವಾದವರಿಗೆ ಕಳ್ಳತನದ ಬಗ್ಗೆ ತರಬೇತಿ ನೀಡುತ್ತಿದ್ದ. ಸದ್ಯ ಬಂಧಿತನಿಂದ 35 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ಕೆಜಿ ಗಟ್ಟಲೆ ಗಾಂಜಾ ಜಪ್ತಿ: ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಠಾಣೆ ಪೊಲೀಸರು ಆಂಧ್ರ ಮೂಲದ ರಾಮ್ ಪ್ರಸಾದ್ ಹಾಗೂ ನೆಲಮಂಗಲದ ಉಮೇಶ್​ನ ಬಂಧಿಸಿ ಕೆಜಿ ಗಟ್ಟಲೆ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. 53 ಕೆ.ಜಿ ಗಾಂಜಾ ಸಹಿತ ಕೃತ್ಯಕ್ಕೆ ಬಳಸುತ್ತಿದ್ದ 2 ಮೊಬೈಲ್, ಮಾರುತಿ 800 ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ಗೋದಾವರಿಯಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಪ್ರಕರಣದ ಮತ್ತೊರ್ವ ಆರೋಪಿ ಸೈಯದ್​ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಕೋಡ್ ವರ್ಡ್ ಮೂಲಕ ಗಾಂಜಾ ಪೂರೈಕೆ: ಕೋಡ್ ವರ್ಡ್ ಮೂಲಕ ಗಾಂಜಾ ಪೂರೈಸುತ್ತಿದ್ದ ಗ್ಯಾಂಗ್​ನ ಮಾರತ್ತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಜಯ್, ರಾಜು, ರವಿ ಬಂಧಿತ ಆರೋಪಿಗಳು. ಬಂಧಿತರಿಂದ 40 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ

ಕರೆಂಟ್ ಬಿಲ್ ಜೊತೆಗೆ ಬರಲಿದೆ ಗಾರ್ಬೆಜ್ ಬಿಲ್! ತಿಂಗಳಿಗೊಮ್ಮೆ ಗಾರ್ಬೆಜ್ ಟ್ಯಾಕ್ಸ್ ವಸೂಲಿಗೆ ಮುಂದಾದ ಬಿಬಿಎಂಪಿ

ಮಧುಗಿರಿ ಶಾಸಕ ಹೋಪ್​ಲೆಸ್ ಫೆಲೋ ಎಂದು ಜಾಡಿಸಿದ ರಾಮಕೃಷ್ಣ ಆಶ್ರಮದ ಸ್ವಾಮೀಜಿ

Published On - 10:56 am, Wed, 2 February 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!