ಕರೆಂಟ್ ಬಿಲ್ ಜೊತೆಗೆ ಬರಲಿದೆ ಗಾರ್ಬೆಜ್ ಬಿಲ್! ತಿಂಗಳಿಗೊಮ್ಮೆ ಗಾರ್ಬೆಜ್ ಟ್ಯಾಕ್ಸ್ ವಸೂಲಿಗೆ ಮುಂದಾದ ಬಿಬಿಎಂಪಿ
ಕರೆಂಟ್ ಬಿಲ್ ಆಧಾರದ ಮೇಲೆ ಗಾರ್ಬೆಜ್ ಬಿಲ್ ನಿಗದಿ ಮಾಡಲಾಗುತ್ತೆ. ಬೆಂಗಳೂರಿನಲ್ಲಿರುವ ನಿವಾಸಿಗಳು ಕರೆಂಟ್ ಬಿಲ್ ಜೊತೆಗೆ ಗಾರ್ಬೆಜ್ ಟ್ಯಾಕ್ಸ್ ಕೂಡಾ ಕಟ್ಟಬೇಕು. ಈ ಬಗ್ಗೆ ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿಗೆ ಕರೆಂಟ್ ಬಿಲ್ ಜೊತೆ ಗಾರ್ಬೆಜ್ ಯೂಸರ್ ಬಿಲ್(Garbage Bill) ಕೂಡ ಕೊಡಬೇಕಾಗುವಂತಹ ದಿನಗಳು ಬರಲಿವೆ. ಗಾರ್ಬೆಜ್ ಸೆಸ್ ಜೊತೆ ಜೊತೆಗೆ ಗಾರ್ಬೆಜ್ ಯೂಸರ್ ಫೀ ಕೂಡಾ ಶೀಘ್ರದಲ್ಲೇ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ತಿಂಗಳು ಕರೆಂಟ್ ಬಿಲ್ ಜೊತೆಗೆ ಗಾರ್ಬೆಜ್ ಬಿಲ್ ಕೂಡ ಬರಲಿದೆ. ಹಾಗೇ ವರ್ಷಕ್ಕೊಮ್ಮೆ ಗಾರ್ಬೆಜ್ ಸೆಸ್ ಕಟ್ಟಬೇಕು. ಪ್ರತಿ ತಿಂಗಳಿಗೊಮ್ಮೆ ಗಾರ್ಬೆಜ್ ಟ್ಯಾಕ್ಸ್ ಕಟ್ಟಲು ಹೊಸ ನಿಯಮ ಜಾರಿಗೆ ಇಲಾಖೆ ಮುಂದಾಗಿದೆ.
ಗಾರ್ಬೆಜ್ ಬಿಲ್ ಹೇಗೆ ನಿಗದಿಯಾಗುತ್ತೆ? ಕರೆಂಟ್ ಬಿಲ್ ಆಧಾರದ ಮೇಲೆ ಗಾರ್ಬೆಜ್ ಬಿಲ್ ನಿಗದಿ ಮಾಡಲಾಗುತ್ತೆ. ಬೆಂಗಳೂರಿನಲ್ಲಿರುವ ನಿವಾಸಿಗಳು ಕರೆಂಟ್ ಬಿಲ್ ಜೊತೆಗೆ ಗಾರ್ಬೆಜ್ ಟ್ಯಾಕ್ಸ್ ಕೂಡಾ ಕಟ್ಟಬೇಕು. ಈ ಬಗ್ಗೆ ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಬಿಬಿಎಂಪಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಸಿಕ್ಕರೆ ಬೆಂಗಳೂರಿನ ಮಂದಿ ಮತ್ತೊಂದು ಬಿಲ್ ಕಟ್ಟಬೇಕಾಗುತ್ತೆ. ಬಿಬಿಎಂಪಿ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿದೆ. ಕಸ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತಿದ್ದು, ನಿರ್ವಹಣೆ ಆದಾಯ ಕ್ರೂಢೀಕರಣಕ್ಕೆ ಪ್ಲಾನ್ ಮಾಡಿದೆ. ಬೆಂಗಳೂರು ಮಂದಿ ಸಧ್ಯ ವರ್ಷಕ್ಕೊಮ್ಮೆ ಪ್ರಾರ್ಪಟಿ ಟ್ಯಾಕ್ಸ್ ಕಟ್ಟುತ್ತಿದ್ದು ಪ್ರಾರ್ಪಟಿ ಟ್ಯಾಕ್ಸ್ ಕಟ್ಟುವ ವೇಳೆ ಗಾರ್ಬೆಜ್ ಸೆಸ್ ಕಟ್ಟುತ್ತಿದ್ದಾರೆ. ಸೆಸ್ ಹಣ ಕಸ ನಿರ್ವಹಣೆಗೆ ಸಾಕಾಗುತ್ತಿಲ್ಲವೆಂದು ಬಿಬಿಎಂಪಿ ಇನ್ನು ಮುಂದೆ ಪ್ರತಿ ತಿಂಗಳು ಮನೆ ಮನೆಗಳಿಂದ ಗಾರ್ಬೆಜ್ ಟ್ಯಾಕ್ಸ್ ವಸೂಲಿ ಮಾಡಲು ಮುಂದಾಗಿದೆ. ಪ್ರತಿ ತಿಂಗಳು 40 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಿಂದ ಕಸದ ಗುತ್ತಿಗೆದಾರರಿಗೆ ಬಿಲ್, ಪೌರಕಾರ್ಮಿಕರಿಗೆ ಸಂಬಳ ನೀಡಲು ಅನುಕೂಲವಾಗಲಿದೆ.
ಗಾರ್ಬೇಜ್ ಸೆಸ್ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಇನ್ನು ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿದ್ದು ಕಸ ಶುಲ್ಕ ವಿಚಾರವಾಗಿ ಹಳೇ ನಿಯಮಗಳೇ ಇರುತ್ತೆ. ಯಾವುದೇ ರೀತಿಯ ಬದಲಾವಣೆ ಸದ್ಯಕ್ಕೆ ಮಾಡಿಲ್ಲ. ಗಾರ್ಬೇಜ್ ಸೆಸ್ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಸದ ಶುಲ್ಕಕ್ಕೆ ಸಂಭಂದಪಟ್ಟಂತೆ ಈಗಿರುವ ನಿಯಮವಳಿಗಳೆ ಮುಂದುವರೆಯಲಿವೆ. ಅದ್ರಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಜನರ ಅಭಿಪ್ರಾಯ ಸಂಗ್ರಹಸಿ ಅಭಿವೃದ್ಧಿ ಮಾಡಲು ಹೊರಟಿದ್ದೇವೆ. ಆ ದಿಕ್ಕಿನಲ್ಲೊ ಸರ್ಕಾರವು ಕ್ರಮಗಳನ್ನ ತೆಗೆದುಕೊಂಡಿದೆ. ಅದಕ್ಕೆ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಗಾರ್ಬೆಜ್ ಸೆಸ್ ಬಗೆಗೆ ಯಾವುದು ಚರ್ಚೆಯಾಗಿಲ್ಲ ಎಂದರು.
ಇದನ್ನೂ ಓದಿ: ಕಸ ನಿರ್ವಹಣೆ ನಷ್ಟ ಭರಿಸಲು BBMP ಮಾಸ್ಟರ್ ಪ್ಲಾನ್, ಜನರ ಜೇಬಿಗೆ ಕತ್ತರಿ ಬೀಳಲಿದೆಯಾ?
Published On - 9:36 am, Wed, 2 February 22