ಕಸ-ಕಂಟಕ: ಹಳ್ಳಿ ಜನರ ಜೀವ ಹಿಂಡುತ್ತಿರುವ ಬೆಂಗಳೂರು ಕಸ, ಅವೈಜ್ಞಾನಿಕ ವಿಲೇವಾರಿಗೆ ಗ್ರಾಮೀಣ ಜನಜೀವನ ಅಸ್ತವ್ಯಸ್ತ

Garbage Dumping: ಹಲವು ವರ್ಷಗಳಿಂದ ಜನರು ಪ್ರತಿಭಟನೆಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ. ಕಸದ ಕಂಟಕ ಮಾತ್ರ ಕಳೆದ ಐದು ವರ್ಷಗಳಿಂದ ತಾರ್ಕಿಕ ಅಂತ್ಯಕಾಣದೆ ಮುಂದುವರಿಯುತ್ತಲೇ ಇದೆ.

ಕಸ-ಕಂಟಕ: ಹಳ್ಳಿ ಜನರ ಜೀವ ಹಿಂಡುತ್ತಿರುವ ಬೆಂಗಳೂರು ಕಸ, ಅವೈಜ್ಞಾನಿಕ ವಿಲೇವಾರಿಗೆ ಗ್ರಾಮೀಣ ಜನಜೀವನ ಅಸ್ತವ್ಯಸ್ತ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಚಿಗರೇನಹಳ್ಳಿ ಎಂಎಸ್​ಜಿಪಿ ಕಸ ವಿಲೇವಾರಿ ಘಟಕದ ಕಸದ ರಾಶಿ (ಎಡಚಿತ್ರ), ಕಲುಷಿತ ನೀರಿನಿಂದಾಗಿ ಕಾಣಿಸಿಕೊಂಡಿರುವ ಚರ್ಮದ ಸೋಂಕು
Follow us
TV9 Web
| Updated By: ಆಯೇಷಾ ಬಾನು

Updated on: Dec 13, 2021 | 10:53 AM

ದೊಡ್ಡಬಳ್ಳಾಪುರ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಹೊತ್ತು ತರುವ ಲಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿಯ ಎಂಎಸ್​ಜಿಪಿ ಕಸ ವಿಲೇವಾರಿ ಘಟಕದಲ್ಲಿ ಭಾರ ಇಳಿಸಿಕೊಳ್ಳುತ್ತವೆ. ಹಲವು ವರ್ಷಗಳಿಂದ ಜನರು ಪ್ರತಿಭಟನೆಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ. ಕಸದ ಕಂಟಕ ಮಾತ್ರ ಕಳೆದ ಐದು ವರ್ಷಗಳಿಂದ ತಾರ್ಕಿಕ ಅಂತ್ಯಕಾಣದೆ ಮುಂದುವರಿಯುತ್ತಲೇ ಇದೆ.

ತಾಲ್ಲೂಕಿನ ತಣ್ಣೀರನಹಳ್ಳಿ, ಮುಡ್ಲಕಾಳೇನಹಳ್ಳಿ ಹಾಗೂ ಕಾಡತಿಪ್ಪೂರು ಗ್ರಾಮಗಳ ಜನರು ಕಸ ವಿಲೇವಾರಿ ಘಟಕದಿಂದ ಅತಿಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರಿನಿಂದ ಬಂದು ಬೀಳುವ ಲಾರಿಗಟ್ಟಲೆ ಕಸದಿಂದ ಹರಿದುಬರುವ ಕೊಳಕುರಸ ತಣ್ಣೀರನಹಳ್ಳಿ ಗ್ರಾಮದ ಜನವಸತಿ ಪ್ರದೇಶದ ಹಳ್ಳಗಳ ಮೂಲಕವೇ ಹರಿದು ಮುಂದೆ ಸಾಗುತ್ತಿದೆ. ಸತತ ದುರ್ವಾಸನೆಯಿಂದ ಹೈರಾಣಾಗಿರುವ ಇಲ್ಲಿನ ಜನರು ಕುಡಿಯುವ ನೀರೂ ಕಳೆದುಕೊಂಡಿದ್ದಾರೆ.

ಮೊದಲೆಲ್ಲಾ ಹಳ್ಳಗಳಲ್ಲಿ ಶುದ್ಧ ನೀರು ಹರಿಯುತ್ತಿದ್ದಾಗ ಜನರೂ ಅದನ್ನೂ ಕುಡಿದು ದಣಿವಾರಿಸಿಕೊಳ್ಳುತ್ತಿದ್ದರು. ಆದರೆ ಈಗ ಊರಿನ ದನಕರು ಮತ್ತು ಇತರ ಪ್ರಾಣಿಗಳಿಗೂ ಶುದ್ಧ ಕುಡಿಯುವ ನೀರು ಘಟಕದಿಂದ ನೀರು ತುಂಬಿ ಕುಡಿಸಬೇಕಾದ ಪರಿಸ್ಥಿತಿ ಬಂದಿದೆ. ಒಂದು ನೀರು ಶುದ್ಧೀಕರಣ ಘಟಕ ಕೆಟ್ಟರೆ ನಮ್ಮ ಊರಿನ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಸಹ ನೀರಡಿಸಿ ಒದ್ದಾಡಬೇಕು ಎಂದು ತಮ್ಮ ಗ್ರಾಮದ ಪರಿಸ್ಥಿತಿ ವಿವರಿಸುತ್ತಾರೆ ತಣ್ಣೀರನಹಳ್ಳಿ ಗ್ರಾಮದ ಮಂಜುನಾಥ್.

ರೈತರ ಬದುಕಿನ ಮೇಲೆ, ನೆಲಮೂಲ ಸಂಸ್ಕೃತಿಯ ನಂಬಿಕೆಗಳ ಮೇಲೆಯೂ ಕಸವಿಲೇವಾರಿ ಘಟಕ ದುಷ್ಪರಿಣಾಮ ಬೀರಿದೆ. ಸಾಮಾನ್ಯವಾಗಿ ಹೊಲಗಳಲ್ಲಿ ಚಪ್ಪಲಿ ಮೆಟ್ಟಿ ನಡೆಯುವುದಿಲ್ಲ. ವೃದ್ಧರೂ ಸೇರಿದಂತೆ ಬಹುತೇಕರ ಕಾಲುಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಾಲುಗಳು ಕಪ್ಪಾಗುತ್ತಿದ್ದು, ರಕ್ತ ಸೋರುತ್ತಿವೆ. ನಾವು ಎಷ್ಟು ಬೇಡ ಎಂದರೂ ಕೇಳುತ್ತಿಲ್ಲ. ಹಣಬಲ ಇರುವ ಬೆಂಗಳೂರು ಗುತ್ತಿಗೆದಾರರು ಒಂದೇ ಸಮ ಕಸದ ಲಾರಿಗಳನ್ನು ಇಲ್ಲಿಗೆ ತರುತ್ತಲೇ ಇದ್ದಾರೆ. ಏನು ಮಾಡೋದು ಸ್ವಾಮಿ. ಬೆಂಗಳೂರು ವಿಧಾನಸಭೆಯ ಪ್ರತಿ ಅಧಿವೇಶನದಲ್ಲಿಯೂ ನಾವು ರೈತಪರ, ಗ್ರಾಮೀಣ ಬದುಕು ಸುಧಾರಿಸಬೇಕು ಎಂದೆಲ್ಲಾ ನಮ್ಮ ನಾಯಕರು ಉದ್ದುದ್ದ ಭಾಷಣ ಮಾಡುತ್ತಲೇ ಇರುತ್ತಾರೆ. ಅದೇ ವಿಧಾನಸೌಧದ ಕಸ ನಮ್ಮೂರನ್ನು ಹಾಳುತ್ತಿದೆ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ ಇಲ್ಲಿನ ಜನ.

BBMP Garbage Dumping

ಕಸದಿಂದಾಗಿ ಚಿಗರೇನಹಳ್ಳಿ ಸುತ್ತಮುತ್ತಲ ನೀರಿನ ಹೊಂಡಗಳು ಕಲುಷಿತಗೊಂಡಿವೆ (ಎಡಚಿತ್ರ), ಜನರು ಕುಡಿಯುವ ನೀರಿರೂ ಪರದಾಡುತ್ತಿದ್ದಾರೆ.

‘ಹೇಗಾದರು ಮಾಡಿ ನಮ್ಮನ್ನು ಈ ನರಕಯಾತನೆಯಿಂದ ಪಾರುಮಾಡಿ. ನಾವೆಷ್ಟು ಕೇಳಿಕೊಂಡರೂ ಯಾರೊಬ್ಬರೂ ನಮ್ಮನ್ನು ಗಮನಿಸುತ್ತಿಲ್ಲ. ಬೆಂಗಳೂರಿನಲ್ಲಿ ಕಸದರಾಶಿ ಹೆಚ್ಚಾದರೆ ಅಲ್ಲಿನ ಜನರಿಗೆ ಸಮಸ್ಯೆ ಆಗುತ್ತಂತೆ. ಅವರ ಊರಿನ ಕಸ ನಮ್ಮೂರಿಗೆ ತಂದು ನಮ್ಮ ಬದುಕು ನರಕ ಮಾಡೋದು ಯಾವ ನ್ಯಾಯ? ನಾವು ಜೀವ, ಭಾವನೆ ಇರೋ ಮನುಷ್ಯರೇ ಅಲ್ವಾ’ ಎಂಬ ಕಾಡತಿಪ್ಪೂರು ಗ್ರಾಮದ ನರಸಮ್ಮನ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ: ಕ್ರೀಡಾಂಗಣದ ಕನಸು ಕಂಡಿದ್ದ ಜನರಿಗೆ ಕಸ ವಿಲೇವಾರಿ ಘಟಕ ಶಾಕ್.. ಮೈಸೂರು ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ ಇದನ್ನೂ ಓದಿ: ತ್ಯಾಜ್ಯ ವಿಲೇವಾರಿ ಮಾಡದಿದ್ದಕ್ಕೆ ಆಕ್ರೋಶ; ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮಹಾನಗರ ಪಾಲಿಕೆ ಆಯುಕ್ತರ ಮನೆ ಮುಂದೆ ಸುರಿದ ಬಿಜೆಪಿ ಶಾಸಕ ಅಭಯ್ ಪಾಟೀಲ್

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ