AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ಲವರ್​ನ ಮದುವೆಯಾಗಲು ಮುಂದಾಗಿದ್ದ ಯುವಕನ ಕೊಲೆ, ಮಾತುಕತೆಗೆ ಕರೆದು 21 ಬಾರಿ ಇರಿದ ಮಾಜಿ ಪ್ರೇಮಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಗೊಲ್ಲಹಳ್ಳಿಯಲ್ಲಿ ತ್ರಿಕೋನ ಪ್ರೇಮ ಪ್ರಕರಣದಲ್ಲಿ ಮಾಜಿ ಲವರ್​ನಿಂದ​ ಯುವಕನನ್ನು 21 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಕೊಲೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟುವಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಶುಕ್ರವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನೆಲಮಂಗಲ: ಲವರ್​ನ ಮದುವೆಯಾಗಲು ಮುಂದಾಗಿದ್ದ ಯುವಕನ ಕೊಲೆ, ಮಾತುಕತೆಗೆ ಕರೆದು 21 ಬಾರಿ ಇರಿದ ಮಾಜಿ ಪ್ರೇಮಿ
ಮೃತ ದರ್ಶನ್​, ಆರೋಪಿ ವೇಣುಗೊಪಾಲ
ಗಂಗಾಧರ​ ಬ. ಸಾಬೋಜಿ
|

Updated on:Jun 13, 2025 | 10:07 AM

Share

ನೆಲಮಂಗಲ, ಜೂನ್​ 13: ಒಂದು ಹುಡುಗಿಗಾಗಿ (girl) ಇಬ್ಬರ ನಡುವೆ ಶುರುವಾದ ಜಗಳ ಕೊನೆಗೆ ಕೊಲೆಯಲ್ಲಿ (kill) ಅಂತ್ಯವಾಗಿರುವಂತಹ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ನಡೆದಿದೆ. ಮಾತುಕತೆಗೆ ಎಂದು ಕರೆದವನು 21 ಬಾರಿ ಇರಿದು ಹತ್ಯೆಗೈಯಲಾಗಿದೆ. ಲವರ್​ನ ಮದುವೆಯಾಗಲು ಮುಂದಾಗಿದ್ದ ಸ್ನೇಹಿತನನ್ನೆ ಆರೋಪಿ ಕೊಲೆ ಮಾಡಿದ್ದು, ಇದೀಗ ಜೈಲುಪಾಲಾಗಿದ್ದಾನೆ.

ಕಳೆದ ಶುಕ್ರವಾರ ರಾತ್ರಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ನಡೆದ ಅದೊಂದು ಕೊಲೆ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಒಂದು ಹುಡುಗಿಗಾಗಿ ಇಬ್ಬರ ನಡುವೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿತ್ತು. ಸದ್ಯ ಈ ಪ್ರಕರಣದ ಆರೋಪಿ ವೇಣುಗೋಪಾಲ (30) ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: 50 ಕೋಟಿ ರೂ.ಸಾಲ ಕೊಡಿಸುವುದಾಗಿ ಮಹಿಳೆಗೆ ಕೋಟಾ ನೋಟು ಕೊಟ್ಟ ಮಹಮ್ಮದ್

ಇದನ್ನೂ ಓದಿ
Image
ವಿಜಯಪುರ ಕೆನರಾ ಬ್ಯಾಂಕ್​ನಲ್ಲಿದ್ದ 58 ಕೆಜಿ ಚಿನ್ನ ಕಳ್ಳತನ!
Image
ವಿಜಯಪುರ: ವಾಮಾಚಾರ ಮಾಡಿ ರಾಷ್ಟ್ರೀಕೃತ ಕೆನರಾ ಬ್ಯಾಂಕ್​ ಕಳ್ಳತನ
Image
ವೇಷ ಬದಲಿಸಿಕೊಂಡು ಬಂದು ಅತ್ತೆಯ ಕಣ್ಣಿಗೆ ಖಾರದಪುಡಿ ಎರಚಿ ಒಡವೆ ದೋಚಿದ ಅಳಿಯ
Image
ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ? ಪತಿಗೆ ಚಾಕುವಿನಿಂದ ಇರಿದ ಪತ್ನಿ

ವೇಣುಗೊಪಾಲ ರೈಲಿನಲ್ಲಿ ಚಿರುಮುರಿ ಮಾರಾಟ ಮಾಡಿಕೊಂಡಿದ್ದ. ಕೊಲೆ ನಂತರ ಕುಣಿಗಲ್​ನಿಂದ ರೈಲಿನಲ್ಲೇ ತಿರುಪತಿಗೆ ತೆರಳಿದ್ದ. ತಿರುಪತಿಗೆ ತೆರಳಿ ಮುಖ ಚಹರೆ ಗೊತ್ತಾಗದಂತೆ ಗುಂಡು ಹೊಡೆಸಿಕೊಂಡಿದ್ದ. ನಂತರ ತಿರುಪತಿಯಿಂದ ಮಂಡ್ಯಗೆ ತೆರಳಿದ್ದ ವೇಣು, ತನ್ನ ಸಂಬಂಧಿಕ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಪ್ಲ್ಯಾನ್​ ಮಾಡಿದ್ದಾನೆ. ಅಷ್ಟರಲ್ಲಿ ಮಾಹಿತಿ ಕಲೆಹಾಕಿದ್ದ ಪೊಲೀಸರು ಆರೋಪಿಯನ್ನು ಅರೆಸ್ಟ್​ ಮಾಡಿದ್ದಾರೆ.

ಇನ್ನೂ 8 ವರ್ಷದ ಹಿಂದೆ ಗೊಲ್ಲಹಳ್ಳಿಯ ನಿವಾಸಿಯ ಓರ್ವ ಯುವತಿಯನ್ನ ವೇಣುಗೊಪಾಲ ಪ್ರೀತಿಸಿದ್ದ. ಕಳೆದ ಮೂರು ತಿಂಗಳ ಹಿಂದೆ ಪೊಷಕರ ಗೊತ್ತಾಗಿ ಇಬ್ಬರನ್ನ ದೂರ ಮಾಡಿದ್ದರು. ನಂತರ ಇದೇ ಯುವತಿಗೆ ಮನೆಯವರೆಲ್ಲಾ ಸೇರಿ ದರ್ಶನ್ ಜೊತೆ ಮದುವೆ ಫಿಕ್ಸ್ ಮಾಡಿದ್ದರು. ಈ ವಿಚಾರ ತಿಳಿದಿದ್ದ ವೇಣುಗೊಪಾಲ ಕೋಪಗೊಂಡಿದ್ದ.

21 ಬಾರಿ ಇರಿದು ಕೊಲೆ

ಕಳೆದ ಶುಕ್ರವಾರ ಕುಡಿದ ಮತ್ತಿನಲ್ಲಿದ್ದ ವೇಣು, ದರ್ಶನ್​ಗೆ ಫೊನ್ ಮಾಡಿ ಮಾತಡಬೇಕು ಬಾ ಎಂದಿದ್ದ. ಈ ವೇಳೆ ದರ್ಶನ್ ಯುವತಿಗೆ ಕರೆ ಮಾಡಿ ವೇಣು ಕರೆಯುತ್ತಿದ್ದಾನೆ ಎಂದಿದ್ದಾನೆ. ಯುವತಿ ಹೋಗಬೇಡ ಅಂತ ಹೇಳಿದರೂ ದರ್ಶನ್ ಕೇಳಿಲ್ಲ. ದರ್ಶನ್​​, ವೇಣುವನ್ನು ತನ್ನ ಜಮೀನಿಗೆ ಕರೆಸಿಕೊಂಡಿದ್ದಾನೆ. ಈ ಮಧ್ಯೆ ವೇಣು ಹಾಗೂ ದರ್ಶನ್ ಇಬ್ಬರ ನಡುವೆ ಜಗಳ ಶುರುವಾಗಿದೆ. ನಂತರ ತನ್ನ ಬಳಿಯಿದ್ದ ಚಾಕುವಿನಿಂದ ದರ್ಶನ್​ಗೆ 21 ಬಾರಿ ಇರಿದಿದ್ದಾನೆ. ಕೊನೆಯ ಬಾರಿ ಇರಿಯುವ ವೇಳೆಯಲ್ಲಿ ದರ್ಶನ್ ಯುವತಿಗೆ ಫೋನ್ ಮಾಡಿ ವೇಣು ಚಾಕುವಿನಿಂದ ಇರಿಯುತ್ತಿದ್ದಾನೆ ಎಂದು ಹೇಳಿ ಪ್ರಾಣಬಿಟ್ಟಿದ್ದಾನೆ.

ಇದನ್ನೂ ಓದಿ: ತನ್ನ ಜೊತೆ ಮಾತನಾಡದಿದ್ದಕ್ಕೆ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಸಿಬ್ಬಂದಿಯನ್ನ ಇರಿದು ಕೊಂದ ಯುವಕ

ಇನ್ನು ಆರೋಪಿ ವೇಣುಗೊಪಾಲ ಪೊಲೀಸರ ಮುಂದೆ ನಡೆದಿರುವ ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಅದೇನೆ ಆದರೂ ಒಂದು ಹುಡುಗಿಗೋಸ್ಕರ ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ದುರಂತವೇ ಸರಿ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:06 am, Fri, 13 June 25