AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ ಕೆನರಾ ಬ್ಯಾಂಕ್​ನಲ್ಲಿದ್ದ 58 ಕೆಜಿ ಚಿನ್ನ ಕಳ್ಳತನ! ಪೊಲೀಸರ ದಿಕ್ಕು ತಪ್ಪಿಸಲು ವಾಮಾಚಾರ

ಬೀದರ್, ಮಂಗಳೂರಿನಲ್ಲಿ ನಡೆದ ಬ್ಯಾಂಕ್​ ಕಳ್ಳತನ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳೀಸಿದ್ದವು. ಈ ಪ್ರಕರಣ ಬೆನ್ನಲ್ಲೇ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಕೆನರಾ ಬ್ಯಾಂಕ್‌ನಲ್ಲಿ ಕಳ್ಳತನವಾಗಿತ್ತು. ಬ್ಯಾಂಕ್​ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಈ ಪ್ರಕರಣ ಪೊಲೀಸರಿಗೆ ಸವಾಲಾಗಿದೆ. ಪ್ರಕರಣದ ತನಿಖೆಗಾಗಿ 8 ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಶೀಘ್ರದಲ್ಲೇ ಕಳ್ಳರನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

ವಿಜಯಪುರ ಕೆನರಾ ಬ್ಯಾಂಕ್​ನಲ್ಲಿದ್ದ 58 ಕೆಜಿ ಚಿನ್ನ ಕಳ್ಳತನ! ಪೊಲೀಸರ ದಿಕ್ಕು ತಪ್ಪಿಸಲು ವಾಮಾಚಾರ
ಕೆನರಾ ಬ್ಯಾಂಕ್​
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on:Jun 02, 2025 | 3:58 PM

Share

ವಿಜಯಪುರು, ಜೂನ್​ 02: ಬಸವನಬಾಗೇವಾಡಿ (Basavan Bagewadi) ಪಟ್ಟಣದಲ್ಲಿ ನಡೆದಿದ್ದ ಕೆನರಾ ಬ್ಯಾಂಕ್ (Canara Bank) ಕಳ್ಳತನ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಸಿನಿಮೀಯ ರೀತಿಯಲ್ಲಿ, ಮಾಸ್ಟರ್ ಪ್ಲ್ಯಾನ್ ಮಾಡಿ ಕಳ್ಳರು ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಕದೀಮರ ಪತ್ತೆಗೆ ಪೊಲೀಸ್​ ಇಲಾಖೆ ಎಂಟು ವಿಶೇಷ ತಂಡಗಳು ರಚಿಸಿದೆ. ಬ್ಯಾಂಕ್​ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನವಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.

ಕಳೆದ ತಿಂಗಳು ಮೇ 25 ರಂದು ವಿಜಯಪುರ ಜಿಲ್ಲೆ ಬಸನವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್​ನಲ್ಲಿ ಕಳ್ಳತನವಾಗಿತ್ತು. ಬ್ಯಾಂಕ್​ನಲ್ಲಿ ಕಳ್ಳತನವಾದ ಸುದ್ದಿ ತಿಳಿದು ಮನಗೂಳಿ ಪೊಲೀಸರು ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಇತರೆ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ನಂತರ ಬ್ಯಾಂಕ್ ಹಿರಿಯ ಆಧಿಕಾರಿಗಳು ಸ್ಥಳಕ್ಕೆ ತೆರಳಿ ಕಳ್ಳತನವಾದ ನಗದು ಚಿನ್ನಾಭರಣಗಳ ಅಂಕಿ ಅಂಶಗಳ ಲೆಕ್ಕ ಹಾಕಿದರು. ಬ್ಯಾಂಕ್​ನಲ್ಲಿ ಅಡವಿಟ್ಟ ಹಾಗೂ ಸುರಕ್ಷಣೆಗೆ ಇಟ್ಟಿದ್ದ 58 ಕೆಜಿ 975.94 ಗ್ರಾಂ ಚಿನ್ನಾಭರಣಗಳು ಹಾಗೂ 5.20 ಲಕ್ಷ ನಗದು ಕಳ್ಳತನವಾಗಿರುವುದು ಗೊತ್ತಾಗಿದೆ. ಚಿನ್ನದ ಅಂದಾಜು ಮೌಲ್ಯ 53 ಕೋಟಿ 26ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳ್ಳರ ಪತ್ತೆಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ
Image
ಲೋಕಾ ಶಾಕ್​​: ಕರ್ನಾಟಕದಾದ್ಯಂತ 7 ಅಧಿಕಾರಿಗಳ ಮನೆಗಳ ಮೇಲೆ ದಾಳಿ
Image
ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್​ ಪರ ಪೋಸ್ಟ್​​: ದೂರು ದಾಖಲು
Image
ವೇಷ ಬದಲಿಸಿಕೊಂಡು ಬಂದು ಅತ್ತೆಯ ಕಣ್ಣಿಗೆ ಖಾರದಪುಡಿ ಎರಚಿ ಒಡವೆ ದೋಚಿದ ಅಳಿಯ
Image
ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ? ಪತಿಗೆ ಚಾಕುವಿನಿಂದ ಇರಿದ ಪತ್ನಿ

ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ನೀಡಿರುವ ಮಾಹಿತಿ ಪ್ರಕಾರ, “6 ರಿಂದ 8 ಜನ ಕದೀಮರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಲಾಕರ್ ಓಪನ್ ತೆರೆಯಲು ಮತ್ತು ಸೈರನ್ ಬಂದ್​ ಮಾಡಲು ನಕಲಿ ಕೀ ಬಳಕೆ ಮಾಡಿದ್ದಾರೆ. ಬ್ಯಾಂಕ್ ಆವರಣದಲ್ಲಿದ್ದ ಸಿಸಿ ಕೆಮೆರಾಗಳನ್ನು ತಿರುಗಿಸಿದ್ದು ಹಾಗೂ ಸಿಸಿ ಕೆಮೆರಾ (ಎನ್​ವಿಆರ್) ಹಾರ್ಡ್ ಡಿಸ್ಕ್ ಸಮೇತ ಪರಾರಿಯಾಗಿದ್ದಾರೆ . ಸತತ ಎರಡು ದಿನಗಳ ಕಾಲ ಸಂಚು ರೂಪಿಸಿ, ಪ್ಲ್ಯಾನ್ ಮಾಡಿ ಕೃತ್ಯವೆಸಲಾಗಿದೆ. ಕದೀಮರ ಪತ್ತೆಗೆ 8 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು ತನಿಖೆ ಮುಂದುವರೆದಿದೆ” ಎಂದು ತಿಳಿಸಿದ್ದಾರೆ.

ಕಳ್ಳತನ ಮಾಡಿದ ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸಲು, ಬ್ಯಾಂಕ್ ಪ್ರವೇಶ ದ್ವಾರದ ಕೀ ಮುರಿದು ಒಳಗೆ ಹೋಗಿ ಕಳ್ಳತನ ಮಾಡಿದ್ದಾರೆ. ನಂತರ ಬ್ಯಾಂಕ್ ಕಿಟಕಿಯ ಸರಳುಗಳನ್ನು ಒಳಗಿನಿಂದಲೇ ಕಟ್ ಮಾಡಿ ಕಿಟಕಿ ಸರಳು ಕಟ್ ಮಾಡಿ ಒಳಗೆ ನುಗ್ಗಿದ್ದಾರೆ ಎಂಬಂತೆ ಬಿಂಬಿಸಿದ್ದಾರೆ. ಅಲ್ಲದೆ, ಬ್ಯಾಂಕ್ ಒಳಗೆ ವಾಮಾಚಾರವಾಗಿದೆ ಎಂದು ಬಿಂಬಿಸಲು ಕಪ್ಪು ಬಟ್ಟೆಯ ಬೊಂಬೆ ಇಟ್ಟು ಪೂಜೆ ಮಾಡಿದ್ದಾರೆ ಎಂಬುವುದು ಕೂಡ ತನಿಖೆಯ ಗಮನ ಬೇರೆಡೆ ಸೆಳೆಯಲು ಎಂದು ಎಂಬುದು ತಿಳಿದುಬಂದಿದೆ.

ತನಿಖೆ ತೀವ್ರ ಗತಿಯಲ್ಲಿ ಸಾಗಿದ್ದು ಬೇಗನೇ ಕದೀಮರ ಹೆಡೆಮುರಿ ಕಟ್ಟೋದಾಗಿ ಎಸ್ಪಿ ಭರವಸೆ ನೀಡಿದ್ದಾರೆ. ಇತ್ತ ಗ್ರಾಹಕರು ಮಾತ್ರ ತೀವ್ರ ಆತಂಕಗೊಂಡಿದ್ದಾರೆ. ಅಪಾರ ಪ್ರಮಾಣದ ಚಿನ್ನ ಅಡವಿಟ್ಟವರು ಹಾಗೂ ಸಂರಕ್ಷಣೆಗಾಗಿ ಲಾಕರ್​ಗಳಲ್ಲಿ ಚಿನ್ನ ಅಡವಿಟ್ಟವರು ಭಯಗೊಂಡಿದ್ದಾರೆ.

ಇದನ್ನೂ ಓದಿ: ವಾಮಾಚಾರ ಮಾಡಿ ರಾಷ್ಟ್ರೀಕೃತ ಕೆನರಾ ಬ್ಯಾಂಕ್​ ಕಳ್ಳತನ

ಸದ್ಯ ಮನಗೂಳಿಯ ಕೆನರಾ ಬ್ಯಾಂಕ್​ನಲ್ಲಿ 58 ಕೆಜಿಗೂ ಆಧಿಕ ಚಿನ್ನಾಭರಣ ನಗದು ಕಳ್ಳತನವಾಗಿರುವುದು ಗ್ರಾಹಕರಲ್ಲಿ ಭಯ ಮೂಡಿಸಿದೆ. ಕಳ್ಳತನ ಮಾಡಿದ ಆರೋಪಿಗಳ ಜಾಡನ್ನು ಖಾಕಿ ಪಡೆ ಬೆನ್ನುಹತ್ತಿದೆ. ಶೀಘ್ರವೇ ಇಡೀ ಪ್ರಕರಣಕ್ಕೆ ತಿಲಾಂಜಲಿ ಹಾಡಲಾಗುತ್ತದೆ ಎಂದು ಪೊಲೀಸ್ ಆಧಿಕಾರಿಗಳು ಭರವಸೆ ನೀಡಿದ್ದಾರೆ. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Mon, 2 June 25

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ