ಕಸ ನಿರ್ವಹಣೆ ನಷ್ಟ ಭರಿಸಲು BBMP ಮಾಸ್ಟರ್​ ಪ್ಲಾನ್​, ಜನರ ಜೇಬಿಗೆ ಕತ್ತರಿ ಬೀಳಲಿದೆಯಾ?

ಕಸ ನಿರ್ವಹಣೆ ನಷ್ಟ ಭರಿಸಲು BBMP ಮಾಸ್ಟರ್​ ಪ್ಲಾನ್​, ಜನರ ಜೇಬಿಗೆ ಕತ್ತರಿ ಬೀಳಲಿದೆಯಾ?
ಬಿಬಿಎಂಪಿ ಮುಖ್ಯ ಕಚೇರಿ

ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ನಷ್ಟದಲ್ಲಿ ನೆಡೆಯುತ್ತಿರುವ ಬಿಬಿಎಂಪಿ ಕಸ ವಿಲೇವಾರಿಯಲ್ಲಾಗುತ್ತಿರುವ ನಷ್ಟ ಬರಿಸಲು ಭರ್ಜರಿ ಪ್ಲಾನ್ ಮಾಡಿದೆ. ಗಾರ್ಬೆಜ್ ಸೆಸ್ ಕೇವಲ 50-54 ಕೋಟಿ ಬರುತ್ತಿದೆ.. ಹೌದು, ಕಸ ವಿಲೇವಾರಿಯಲ್ಲಾಗುತ್ತಿರುವ ನಷ್ಟ ಬರಿಸಲು ಭರ್ಜರಿ ಪ್ಲಾನ್ ಮಾಡಿರುವ ಬಿಬಿಎಂಪಿ ನಗರದ ಪ್ರತಿ ಮನೆಯಿಂದ ಗಾರ್ಬೆಜ್ ಸೆಸ್ ಜೊತೆಗೆ ಕಸ ನಿರ್ವಹಣೆಗೆ ಹೆಚ್ಚುವರಿಯಾಗಿ 200 ರೂ. ಪಡೆಯಲು ಯೋಚನೆ ನೆಡೆಸಿದೆ. ನಗರದಲ್ಲಿ ಕಸ ನಿರ್ವಹಣೆಗೆ ಪ್ರತಿ ವರ್ಷ 1 […]

pruthvi Shankar

|

Nov 18, 2020 | 8:18 AM

ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ನಷ್ಟದಲ್ಲಿ ನೆಡೆಯುತ್ತಿರುವ ಬಿಬಿಎಂಪಿ ಕಸ ವಿಲೇವಾರಿಯಲ್ಲಾಗುತ್ತಿರುವ ನಷ್ಟ ಬರಿಸಲು ಭರ್ಜರಿ ಪ್ಲಾನ್ ಮಾಡಿದೆ.

ಗಾರ್ಬೆಜ್ ಸೆಸ್ ಕೇವಲ 50-54 ಕೋಟಿ ಬರುತ್ತಿದೆ.. ಹೌದು, ಕಸ ವಿಲೇವಾರಿಯಲ್ಲಾಗುತ್ತಿರುವ ನಷ್ಟ ಬರಿಸಲು ಭರ್ಜರಿ ಪ್ಲಾನ್ ಮಾಡಿರುವ ಬಿಬಿಎಂಪಿ ನಗರದ ಪ್ರತಿ ಮನೆಯಿಂದ ಗಾರ್ಬೆಜ್ ಸೆಸ್ ಜೊತೆಗೆ ಕಸ ನಿರ್ವಹಣೆಗೆ ಹೆಚ್ಚುವರಿಯಾಗಿ 200 ರೂ. ಪಡೆಯಲು ಯೋಚನೆ ನೆಡೆಸಿದೆ. ನಗರದಲ್ಲಿ ಕಸ ನಿರ್ವಹಣೆಗೆ ಪ್ರತಿ ವರ್ಷ 1 ಸಾವಿರ ಕೋಟಿ ವೆಚ್ಚವಾಗುತ್ತಿದ್ದು, ಗಾರ್ಬೆಜ್ ಸೆಸ್ ಕೇವಲ 50-54 ಕೋಟಿ ಬರುತ್ತಿದೆ. ಹೀಗಾಗಿ ನಗರದಲ್ಲಿರುವ ಮನೆಗಳ ಆಧಾರದ ಮೇಲೆ, ಬಾಡಿಗೆದಾರರಿಂದಲೂ 200 ರೂ. ಪಡೆಯಲು ಪ್ಲಾನ್ ಮಾಡಿದೆ.

ಬೆಸ್ಕಾಂ ಸಹಾಯ ಪಡೆಯಲು ಮುಂದಾಗಿರುವ ಬಿಬಿಎಂಪಿ. ಎಷ್ಟು ವಿದ್ಯುತ್ ಸಂಪರ್ಕ ನೀಡಲಾಗಿದೆ. ಮೀಟರ್​ಗಳ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಪಡೆದು ಕಸ ನಿರ್ವಹಣೆಗೆ ಅನುದಾನ ಕೃಢಿಕರಣಕ್ಕೆ ಬಿಬಿಎಂಪಿ ಚಿಂತನೆ ಮಾಡಿತ್ತಿದೆ. ಸಧ್ಯ 200 ರೂ. ವಸೂಲಿ ಪ್ಲಾನ್ ಚರ್ಚಾ ಹಂತದಲ್ಲಿದೆ.

Follow us on

Related Stories

Most Read Stories

Click on your DTH Provider to Add TV9 Kannada