ಆರ್​ಬಿಐಹೆಚ್​ನ ಮೊದಲ ಅಧ್ಯಕ್ಷರಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ಗೋಪಾಲಕೃಷ್ಣನ್ ನೇಮಕ | Infosys co-founder Gopalakrishnan appointed first chairperson of RBIH

ಆರ್​ಬಿಐಹೆಚ್​ನ ಮೊದಲ ಅಧ್ಯಕ್ಷರಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ಗೋಪಾಲಕೃಷ್ಣನ್ ನೇಮಕ |  Infosys co-founder Gopalakrishnan appointed first chairperson of RBIH

ಮುಂಬೈ: ರಿಸರ್ವ್ ಬ್ಯಾಂಕ್ ಸ್ಥಾಪಿಸುತ್ತಿರುವ ರಿಸರ್ವ್ ಬ್ಯಾಂಕ್ ಇನೋವೇಶನ್ ಹಬ್ (RBIH) ಗೆ ಇನ್ಫೋಸಿಸ್ ಸಹ–ಸಂಸ್ಥಾಪಕ ಹಾಗೂ ಮಾಜಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ರಿಸರ್ವ್ ಬ್ಯಾಂಕ್ ಇಂದು ಹೊರಡಿಸಿರುವ ಪ್ರಕಟಣೆಯಲ್ಲಿ ಗೋಪಾಲಕೃಷ್ಣನ್ ಅವರ ನೇಮಕಾತಿಯನ್ನು ದೃಢೀಕರಿಸಲಾಗಿದೆ. ಸದರಿ ಯೋಜನೆಯ ಬಗ್ಗೆ ಆರ್​ಬಿಐ ಆಗಸ್ಟ್ ತಿಂಗಳಿನಲ್ಲೇ ಘೋಷಣೆ ಮಾಡಿತ್ತು. ಬ್ಯಾಂಕ್​ಗಳಲ್ಲಿ ಬಳಸುವ ತಂತ್ರಜ್ಞಾನದ ಮೇಲೆ ಪ್ರಭಾವ ಬೀರುವ ಮತ್ತು ಉತ್ತಮ ವಾತಾವರಣ ಸೃಷ್ಟಿಸುವ ಮೂಲಕ ಹಣಕಾಸು ಕ್ಷೇತ್ರದಲ್ಲಿ ಹೊಸತನವನ್ನು ಉತ್ತೇಜಿಸಲು ರಿಸರ್ವ್ […]

Arun Belly

| Edited By: Ayesha Banu

Nov 23, 2020 | 11:41 AM

ಮುಂಬೈ: ರಿಸರ್ವ್ ಬ್ಯಾಂಕ್ ಸ್ಥಾಪಿಸುತ್ತಿರುವ ರಿಸರ್ವ್ ಬ್ಯಾಂಕ್ ಇನೋವೇಶನ್ ಹಬ್ (RBIH) ಗೆ ಇನ್ಫೋಸಿಸ್ ಸಹಸಂಸ್ಥಾಪಕ ಹಾಗೂ ಮಾಜಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ರಿಸರ್ವ್ ಬ್ಯಾಂಕ್ ಇಂದು ಹೊರಡಿಸಿರುವ ಪ್ರಕಟಣೆಯಲ್ಲಿ ಗೋಪಾಲಕೃಷ್ಣನ್ ಅವರ ನೇಮಕಾತಿಯನ್ನು ದೃಢೀಕರಿಸಲಾಗಿದೆ.

ಸದರಿ ಯೋಜನೆಯ ಬಗ್ಗೆ ಆರ್​ಬಿಐ ಆಗಸ್ಟ್ ತಿಂಗಳಿನಲ್ಲೇ ಘೋಷಣೆ ಮಾಡಿತ್ತು. ಬ್ಯಾಂಕ್​ಗಳಲ್ಲಿ ಬಳಸುವ ತಂತ್ರಜ್ಞಾನದ ಮೇಲೆ ಪ್ರಭಾವ ಬೀರುವ ಮತ್ತು ಉತ್ತಮ ವಾತಾವರಣ ಸೃಷ್ಟಿಸುವ ಮೂಲಕ ಹಣಕಾಸು ಕ್ಷೇತ್ರದಲ್ಲಿ ಹೊಸತನವನ್ನು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಇನೋವೇಶನ್ ಹಬ್ ಸ್ಥಾಪಿಸಲಾಗುತ್ತಿದೆ.

ಪ್ರಸ್ತುತ, ಗೋಪಾಲಕೃಷ್ಣನ್ ಸ್ಟಾರ್ಟ್ ಅಪ್ ವಿಲೇಜ್​ನ ಮುಖ್ಯ ಮಾರ್ಗದರ್ಶಕರಾಗಿದ್ದು, ಈ ಸಂಸ್ಥೆಯು ಸ್ಟಾರ್ಟ್ ಅಪ್​ಗಳ ಬೆಳವಣಿಗೆಗೆ ನೆರವಾಗುತ್ತಿದೆ.

ಆರ್​ಬಿಐಹೆಚ್ ಆಡಳಿತ ಮಂಡಳಿಯ ಇತರ ಸದಸ್ಯರ ಪಟ್ಟಿ ಹೀಗಿದೆ:

ಸಿಇಒ (ನೇಮಕಗೊಳ್ಳಲಿದ್ದಾರೆ), ಅಶೋಕ್ ಜುಂಜುನ್ವಾಲಾ (ಇನ್​ಸ್ಟಿಟ್ಯೂಟ್ ಪ್ರೊಫೆಸರ್, ಐಐಟಿ ಮದ್ರಾಸ್), ಎಚ್ ಕೃಷ್ಣಮೂರ್ತಿ(ಪ್ರಧಾನ ಸಂಶೋಧನಾ ವಿಜ್ಞಾನಿ, ಐಐಎಸ್ಸಿ, ಬೆಂಗಳೂರು), ಗೋಪಾಲ್ ಶ್ರೀನಿವಾಸನ್, (ಸಿಎಂಡಿ, ಟಿವಿಎಸ್ ಕ್ಯಾಪಿಟಲ್ ಫಂಡ್ಸ್), ಎಪಿ ಹೋಟಾ (ಮಾಜಿ ಸಿಇಒ, ಎನ್​ಪಿಸಿಐ), ಮೃತುಂಜಯ ಮಹಾಪಾತ್ರ, (ಸಿಂಡಿಕೇಟ್ ಬ್ಯಾಂಕ್ ಮಾಜಿ ಚೇರ್ಮನ್) ಟಿ ರಬಿ ಶಂಕರ್ (ಕಾರ್ಯನಿರ್ವಾಹಕ ನಿರ್ದೇಶಕ, ಆರ್​ಬಿಐ), ದೀಪಕ್ ಕುಮಾರ್, (ಸಿಜಿಎಂ, ಮಾಹಿತಿ ತಂತ್ರಜ್ಞಾನ ಇಲಾಖೆ), ಕೆ. ನಿಖಿಲಾ (ನಿರ್ದೇಶಕರು, ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ, ಬ್ಯಾಂಕಿಂಗ್ ತಂತ್ರಜ್ಞಾನ ಹೈದರಾಬಾದ್).

ಹಣಕಾಸು ಸೇವೆಗಳು ಮತ್ತು ಅವುಗಳ ಉತ್ಪನ್ನಗಳು ಜನರಿಗೆ ಲಭ್ಯವಾಗುವಂಥ ಹೊಸ ಪದ್ಧತಿಗಳನ್ನು ಉತ್ತೇಜಿಸುವೆಡೆ ಆರ್​ಬಿಐಹೆಚ್ ಗಮನಹರಿಸುತ್ತದೆ. ಒಟ್ಟಾರೆಯಾಗಿ, ‘ಹಣಕಾಸಿನ ಸೇವೆಗಳು ಎಲ್ಲರಿಗು ಲಭ್ಯವಾಗಲು ಇದು ಉತ್ತೇಜನ ನೀಡುತ್ತದೆ’ ಎಂದು ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಆರ್​ಬಿಐಹೆಚ್​ನ ಒದಗಿಸುವ ಇತರ ಸೌಲಭ್ಯಗಳು:

ಹಣಕಾಸು ವಲಯದ ಸಂಸ್ಥೆಗಳೊಂದಿಗೆ ಹೊಸ ವಿಚಾರ ವಿನಿಮಯ

ತಂತ್ರಜ್ಞಾನ ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಕರಿಸುವುದು

ವಿಚಾರ ವಿನಿಮಯ ಹಾಗೂ ಆರ್ಥಿಕ ಆವಿಷ್ಕಾರಗಳಿಗೆ ಸಂಬಂಧಿಸಿದ ಹೊಸ ಮಾದರಿಯ ಅಭಿವೃದ್ಧಿ

ಫಿನ್​ಟೆಕ್ ಸಂಶೋಧನೆಯನ್ನು ಉತ್ತೇಜಿಸಲು ಆಂತರಿಕ ಮೂಲ ಸೌಕರ್ಯ ಅಭಿವೃದ್ಧಿ

Follow us on

Related Stories

Most Read Stories

Click on your DTH Provider to Add TV9 Kannada