Cervical Cancer: ಗರ್ಭಕಂಠದ ಕ್ಯಾನ್ಸರ್ ಎಂದರೇನು? ಪ್ರತಿಯೊಬ್ಬ ಮಹಿಳೆಯು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು

ಗರ್ಭಕಂಠದ ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಆದರೆ ಈ ಬಗ್ಗೆ ಮಹಿಳೆಯರಿಗೆ ಮಾಹಿತಿ ಕೊರತೆ ಇದೆ. ಇದರಿಂದಾಗಿ ಅವರು ಈ ಕ್ಯಾನ್ಸರ್ ನಿರ್ಲಕ್ಷ್ಯ ಮಾಡಿ ದೊಡ್ಡ ಅಪಾಯಕ್ಕೆ ಮುನ್ನುಡಿಯಾಗುತ್ತಾರೆ. ಹೀಗಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ತಪ್ಪಿಸಲು, ಅದರ ವ್ಯಾಕ್ಸಿನೇಷನ್ ಮತ್ತು ನಿಯಮಿತ ಸ್ಕ್ರೀನಿಂಗ್ ಬಗ್ಗೆ ಜನಜಾಗೃತಿ ತರುವ ಅವಶ್ಯಕತೆಯಿದೆ.

Cervical Cancer: ಗರ್ಭಕಂಠದ ಕ್ಯಾನ್ಸರ್ ಎಂದರೇನು? ಪ್ರತಿಯೊಬ್ಬ ಮಹಿಳೆಯು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on: Feb 03, 2022 | 7:32 AM

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಇದು ವಿವಿಧ ರೂಪಗಳಲ್ಲಿ ಜನರಲ್ಲಿ ಕಂಡುಬರುತ್ತದೆ. ಆದಾಗ್ಯೂ, ಸಮಯಕ್ಕೆ ಕ್ಯಾನ್ಸರ್ ಪತ್ತೆಯಾದರೆ, ಕ್ಯಾನ್ಸರ್(Cancer) ಚಿಕಿತ್ಸೆಯು ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ ಎಂಬುದು ಹಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಇಷ್ಟು ಮಾತ್ರವಲ್ಲದೆ ಗರ್ಭಕಂಠದ ಕ್ಯಾನ್ಸರ್(Cervical Cancer) ರೂಪವು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗರ್ಭಕಂಠದ ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಆದರೆ ಈ ಬಗ್ಗೆ ಮಹಿಳೆಯರಿಗೆ(Women) ಮಾಹಿತಿ ಕೊರತೆ ಇದೆ. ಇದರಿಂದಾಗಿ ಅವರು ಈ ಕ್ಯಾನ್ಸರ್ ನಿರ್ಲಕ್ಷ್ಯ ಮಾಡಿ ದೊಡ್ಡ ಅಪಾಯಕ್ಕೆ ಮುನ್ನುಡಿಯಾಗುತ್ತಾರೆ. ಹೀಗಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ತಪ್ಪಿಸಲು, ಅದರ ವ್ಯಾಕ್ಸಿನೇಷನ್ ಮತ್ತು ನಿಯಮಿತ ಸ್ಕ್ರೀನಿಂಗ್ ಬಗ್ಗೆ ಜನಜಾಗೃತಿ ತರುವ ಅವಶ್ಯಕತೆಯಿದೆ.

ಗರ್ಭಕಂಠದ ಕ್ಯಾನ್ಸರ್ ಎಂದರೇನು ?

ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಕ್ಯಾನ್ಸರ್ ಗರ್ಭಕಂಠದ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಈ ಗರ್ಭಕಂಠವು ಗರ್ಭಾಶಯದ ಕೆಳಗಿನ ಭಾಗವಾಗಿದ್ದು, ಅದು ಯೋನಿಯೊಂದಿಗೆ ಸಂಪರ್ಕ ಹೊಂದಿದೆ. ಗರ್ಭಕಂಠದ ಕ್ಯಾನ್ಸರ್ ಮಹಿಳೆಯರ ಗರ್ಭದಲ್ಲಿ ಜೀವಕೋಶಗಳನ್ನು ಹಾನಿಗೊಳಿಸುತ್ತದೆ. ಆದಾಗ್ಯೂ, ಅನೇಕ ವರದಿಗಳಲ್ಲಿ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV)ನ ವಿವಿಧ ರೀತಿಯ ತಳಿಗಳಿಂದ ಈ ಕ್ಯಾನ್ಸರ್​ ರೂಪವು ಹೆಚ್ಚಾಗಿ ಉಂಟಾಗುತ್ತದೆ ಎಂದು ತಿಳಿಸಲಾಗಿದೆ.

ಆರಂಭಿಕ ಹಂತದಲ್ಲಿ ಈ ಕ್ಯಾನ್ಸರ್​ ಪತ್ತೆಹಚ್ಚಲು ಸಾಧ್ಯವಿದೆ

ವರದಿಯ ಪ್ರಕಾರ ಗರ್ಭಕಂಠದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಬಹುದು. ಈ ಕ್ಯಾನ್ಸರ್‌ನ ಪೂರ್ವ ಹಂತವು 10 ರಿಂದ 15 ವರ್ಷಗಳವರೆಗೆ ಇರುತ್ತದೆ. ಇದನ್ನು ಪ್ಯಾಪ್ ಸ್ಮೀಯರ್‌ನಂತಹ ಸರಳ ಪರೀಕ್ಷೆಗಳಿಂದ ಸುಲಭವಾಗಿ ಪತ್ತೆ ಮಾಡಬಹುದು. ವರದಿಯ ಪ್ರಕಾರ ಮಹಿಳೆಯರು 30 ವರ್ಷಗಳ ನಂತರ ಎಚ್‌ಐವಿ ಪರೀಕ್ಷೆಯನ್ನು ಸಹ ಮಾಡಿಸಿಕೊಳ್ಳಬೇಕು. ಇದರಿಂದ ಈ ಕ್ಯಾನ್ಸರ್​ನ ಅಪಾಯ ಇದ್ದರೂ ಪ್ರಾರಂಭದಲ್ಲೇ ತಿಳಿಯಬಹುದು.

ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವೇನು?

ಗರ್ಭಕಂಠದ ಕ್ಯಾನ್ಸರ್​ನ ಹೆಚ್ಚಿನ ಅಪಾಯವು ಮಾನವ ಪ್ಯಾಪಿಲೋಮ ವೈರಸ್​ನ ಒಂದು ರೂಪಾಂತರವಾಗಿದೆ. ಮಹಿಳೆ ಹೆಚ್​ಪಿವಿಯೊಂದಿಗೆ ಸಂಪರ್ಕಕ್ಕೆ ಬಂದರೆ, ನಂತರ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಪರಿಣಾಮ ಬೀರುತ್ತದೆ. ಆದರೆ ಕೆಲವು ಮಹಿಳೆಯರ ಪ್ರತಿರಕ್ಷಣಾ ವ್ಯವಸ್ಥೆಯು ಆ ವೈರಸ್ ಅನ್ನು ನಿಲ್ಲಿಸಲು ಅಥವಾ ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ದೀರ್ಘಕಾಲದವರೆಗೆ ಹೆಚ್ಚಿನ ಅಪಾಯದ ಹೆಚ್​ಪಿವಿಗೆ ಒಡ್ಡಿಕೊಂಡರೆ, ಈ ಕ್ಯಾನ್ಸರ್​ ಅಪಾಯವು ಬಹಳ ಹೆಚ್ಚಾಗುತ್ತದೆ. ಈ ಕ್ಯಾನ್ಸರ್‌ನ ಯಾವುದೇ ಆರಂಭಿಕ ಲಕ್ಷಣಗಳು ಕಂಡುಬಂದಿಲ್ಲವಾದರೂ. ಉನ್ನತ ಮಟ್ಟಕ್ಕೆ ಬಂದ ನಂತರವೇ ಇದರ ಲಕ್ಷಣಗಳು ಅರ್ಥವಾಗುತ್ತವೆ. ಆದ್ದರಿಂದ ಕಾಲಕಾಲಕ್ಕೆ ಪರೀಕ್ಷಿಸಬೇಕು. ಪಿರಿಯಡ್ಸ್​ನಲ್ಲಿ ಅನಿಯಮಿತತೆ, ಪಿರಿಯಡ್ಸ್ ಹೊರತುಪಡಿಸಿ ಬೇರೆ ರಕ್ತಸ್ರಾವ ಇತ್ಯಾದಿಗಳನ್ನು ಗರ್ಭಕಂಠದ ಕ್ಯಾನ್ಸರ್​ನ ಲಕ್ಷಣಗಳೆಂದು ಪರಿಗಣಿಸಲಾಗಿದೆ.

ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು, ಹೆಚ್​ಪಿವಿ ತಡೆಗಟ್ಟುವ ಲಸಿಕೆಯನ್ನು ನೀಡಬೇಕು. ಆದಾಗ್ಯೂ, ಲಸಿಕೆ ನಂತರವೂ ನಿಯಮಿತ ಸ್ಕ್ರೀನಿಂಗ್ ಅಗತ್ಯ. ಈ ಕ್ಯಾನ್ಸರ್ ಬಗ್ಗೆ ಮಹಿಳೆಯರು ಜಾಗೃತರಾಗಿರುವುದು ಬಹಳ ಮುಖ್ಯ.

ಇದನ್ನೂ ಓದಿ: Women health: ಮುಟ್ಟಿನ ಸಂದರ್ಭದಲ್ಲಿ ಮೂಡ್ ಸ್ವಿಂಗ್ ಆಗುತ್ತದೆಯೇ? ಕಾರಣ ತಿಳಿಯಿರಿ

ಅಂಡರ್‌ ವೈಯರ್ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರಬಹುದೇ? ವೈದ್ಯರ ಸಲಹೆ ಏನು ತಿಳಿಯಿರಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್