AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crypto Tax: ಏಪ್ರಿಲ್​ 1ರಿಂದ ಕ್ರಿಪ್ಟೋ ಮೇಲೆ ತೆರಿಗೆ; ಅದಕ್ಕೂ ಮುನ್ನ ಮಾರಬೇಕೋ ಹೇಗೆ?

ಏಪ್ರಿಲ್ 1, 2022ರಿಂದ ಅನ್ವಯ ಆಗುವಂತೆ ಕ್ರಿಪ್ಟೋಕರೆನ್ಸಿಗಳ ಮೇಲೆ ತೆರಿಗೆ ವಿಧಿಸಲಾಗುವುದು. ಅದರ ಲೆಕ್ಕಾಚಾರಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Crypto Tax: ಏಪ್ರಿಲ್​ 1ರಿಂದ ಕ್ರಿಪ್ಟೋ ಮೇಲೆ ತೆರಿಗೆ; ಅದಕ್ಕೂ ಮುನ್ನ ಮಾರಬೇಕೋ ಹೇಗೆ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 29, 2022 | 4:10 PM

Share

ಹೊಸ ಹಣಕಾಸು ವರ್ಷದ ಆರಂಭ ಏಪ್ರಿಲ್ 1, 2022ರಿಂದ ಆಗುತ್ತದೆ. ಅಂದಿನಿಂದ ಕ್ರಿಪ್ಟೋಕರೆನ್ಸಿ (Cryptocurrency) ಹೂಡಿಕೆದಾರರು ಈ ಡಿಜಿಟಲ್ ಟೋಕನ್‌ಗಳಲ್ಲಿ ಹೂಡಿಕೆ ಮಾಡುವಾಗ, ವಹಿವಾಟು ನಡೆಸುವಾಗ ಅಥವಾ ನಷ್ಟವನ್ನೇ ಕಂಡರೂ ಅದರ ಬಾಧೆಯನ್ನು ವಿವಿಧ ಹಂತಗಳಲ್ಲಿ ಅನುಭವಿಸುತ್ತಾರೆ. ವಜೀರ್​ಎಕ್ಸ್ ಸಿಇಒ ನಿಶ್ಚಲ್ ಶೆಟ್ಟಿ ಅವರ ಮಾತಿನಲ್ಲಿ ಹೇಳುವುದಾದರೆ, ಉದ್ಯಮವು “ನೋವಿನ ಅವಧಿ”ಯನ್ನು ಪ್ರವೇಶಿಸಿದೆ. ಲೋಕಸಭೆಯು ಶುಕ್ರವಾರ ಹಣಕಾಸು ಮಸೂದೆ 2022 ಅನ್ನು ಅಂಗೀಕರಿಸಿದ್ದು, ವರ್ಚುವಲ್ ಡಿಜಿಟಲ್ ಆಸ್ತಿಗಳ (VDAs) ಮೇಲಿನ ತೆರಿಗೆಯ ಕೇಂದ್ರ ಬಜೆಟ್ 2022-23ರ ಪ್ರಸ್ತಾವನೆಗಳನ್ನು ಅನುಮೋದಿಸಿತು. ಏಪ್ರಿಲ್ 1ರಿಂದ ಈ ಬದಲಾವಣೆಗಳು ಜಾರಿಗೆ ಬರುತ್ತವೆ. ಹೊಸ ನಿಯಮಗಳು ಪ್ರಾರಂಭವಾಗುವ ಮೊದಲು ಡಿಜಿಟಲ್ ಟೋಕನ್‌ಗಳನ್ನು ಮಾರಾಟ ಮಾಡುವುದು ಉತ್ತಮವೇ ಎಂದು ಹೂಡಿಕೆದಾರರು ಈಗ ಆಲೋಚಿಸುತ್ತಿದ್ದಾರೆ.

ಏಪ್ರಿಲ್ 1ರಿಂದ ಹೂಡಿಕೆದಾರರ ಆದಾಯದ ಗಾತ್ರವನ್ನು ಲೆಕ್ಕಿಸದೆ ಕ್ರಿಪ್ಟೋ ಸ್ವತ್ತುಗಳಿಂದ ಯಾವುದೇ ಆದಾಯದ ಮೇಲೆ ಶೇಕಡಾ 30ರಷ್ಟ ಬಂಡವಾಳ ಲಾಭದ ತೆರಿಗೆ ಅನ್ವಯಿಸುತ್ತದೆ; ಹೂಡಿಕೆದಾರರು ಡಿಜಿಟಲ್ ಟೋಕನ್‌ಗಳನ್ನು ಖರೀದಿಸಿದಾಗ ಅಥವಾ ಮಾರಾಟ ಮಾಡುವಾಗ ಪ್ರತಿ ಬಾರಿಯೂ ಶೇ 1ರಷ್ಟು ಟಿಡಿಎಸ್ ಅನ್ನು ವಿಧಿಸಲಾಗುತ್ತದೆ – ಈ ತೆರಿಗೆಗಳು ಮಾರುಕಟ್ಟೆಯಲ್ಲಿನ ಲಿಕ್ವಿಡಿಟಿಯನ್ನು ನಾಶ ಮಾಡಲು ಮತ್ತು ಹೂಡಿಕೆ ವ್ಯವಸ್ಥಾಪಕರ ಪ್ರಕಾರ, ಹೂಡಿಕೆದಾರರು ಸ್ಟಾಕ್‌ಗಳಂತಹ ಇತರ ಆಯ್ಕೆಗಳಿಗೆ ಬದಲಾಗುವುದನ್ನು ಖಚಿತಪಡಿಸಿಕೊಳ್ಳಲು ಸಾಕು. ಹೊಸ ನಿಯಮಗಳ ಪ್ರಕಾರ, ಹೂಡಿಕೆದಾರರು ಒಂದು ಕ್ರಿಪ್ಟೋಕರೆನ್ಸಿಯಲ್ಲಿನ ಲಾಭಗಳ ವಿರುದ್ಧ ನಷ್ಟವನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗುವುದಿಲ್ಲ.

ಮಸೂದೆಯ ಸೆಕ್ಷನ್ 115BBHನ ನಿಯಮಾವಳಿ (2)(b), ಕಾಯ್ದೆಯ ಯಾವುದೇ ಇತರ ನಿಬಂಧನೆಗಳ ವಿರುದ್ಧ VDA ನಷ್ಟವನ್ನು ಹೊಂದಿಸುವುದಕ್ಕೆ ಹೂಡಿಕೆದಾರರಿಗೆ ಅವಕಾಶ ನೀಡುವುದಿಲ್ಲ. ಪ್ರಸಕ್ತ ಹಣಕಾಸು ವರ್ಷ 2021-22 ಅಂತ್ಯಗೊಳ್ಳುವ ಮೊದಲು ಹೂಡಿಕೆದಾರರು ಅಂತಹ ಸ್ವತ್ತುಗಳನ್ನು ಮಾರಾಟ ಮಾಡಬೇಕಾದರೆ ಲಾಭವನ್ನು ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ಕನಿಷ್ಠ ಪ್ರಮಾಣದಲ್ಲಿ ಅನ್ವಯವಾಗುವ ದರಗಳಲ್ಲಿ ತೆರಿಗೆ ವಿಧಿಸಲಾಗುತ್ತದೆ.

ಇದನ್ನೂ ಓದಿ: Cryptocurrency Index IC15: ಭಾರತದ ಮೊದಲ ಕ್ರಿಪ್ಟೋಕರೆನ್ಸಿಗಳ ಸೂಚ್ಯಂಕ ಐಸಿ15 ಪ್ರಾರಂಭಿಸಿದ ಕ್ರಿಪ್ಟೋವೈರ್

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ