ಶಿರಾಡಿಘಾಟ್ ಜಲಪಾತವೊಂದರ ಬಳಿ ಕೆಳಗೆ ಉರುಳಿಬಿದ್ದ ಕಾರು, ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಶಿರಾಡಿಘಾಟ್ನಲ್ಲಿ ಮಾನ್ಸೂನ್ ಸೀಸನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುತ್ತದೆ, ಜೋರಾಗಿ ಅಲ್ಲದಿದ್ದರೂ ಜಿಟಿಜಿಟಿ ಮಳೆ ಇಲ್ಲಿಯ ಸಾಮಾನ್ಯ ದೃಶ್ಯವಾಗಿರುತ್ತದೆ. ಹಾಗಾಗಿ ರಸ್ತೆಗಳು ಸದಾ ಒದ್ದೆಯಾಗಿರುತ್ತವೆ ಮತ್ತು ಚಾಲಕರು ಬಹಳ ಜಾಗರೂಕತೆಯಿಂದ ತಮ್ಮ ವಾಹನಗಳನ್ನು ಓಡಿಸುವ ಅವಶ್ಯಕತೆಯಿರುತ್ತದೆ. ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಇಲ್ಲಿ ಜಲಪಾತಕ್ಕೆ ಉರುಳಿರುವ ಕಾರು ಬೆಂಗಳೂರು ಮೂಲದ್ದೆಂದು ಹೇಳಲಾಗುತ್ತಿದೆ.
ಹಾಸನ, ಜುಲೈ 12: ಈ ಕಾರಲ್ಲಿದ್ದವರು ನಿಜಕ್ಕೂ ಅದೃಷ್ಟವಂತರು. ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ (Shiradi Ghat) ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಒಂದು ಚಿಕ್ಕ ಜಲಪಾತಕ್ಕೆ ಕಾರು ಉರುಳಿ ಬಿದ್ದರೂ ಅದರಲ್ಲಿದ್ದವರು ಸೇಫ್ ಆಗಿದ್ದಾರೆ, ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಮ್ಮ ಹಾಸನ ವರದಿಗಾರ ನೀಡುವ ಮಾಹಿತಿ ಪ್ರಕಾರ ಜಲಪಾತ ವೀಕ್ಷಣೆಗೆಂದು ಬಂದಿದ್ದ ಕಾರಿನಲ್ಲಿದ್ದ ಜನ ಅದನ್ನು ಜಲಪಾತದ ಮೇಲ್ಭಾಗದಲ್ಲಿ ಪಾರ್ಕ್ ಮಾಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತ ಅಂದರೆ ತಪ್ಪಾದೀತು-ಕೆಳಗೆ ಜಾರಿದೆ. ಸುಮಾರು20-30ಅಡಿ ಕಾರು ಕೆಳಗೆ ಬಿದ್ದರೂ ಅದರಲ್ಲಿದ್ದವರೆಲ್ಲ ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಶಿರಾಡಿಘಾಟ್ ರಸ್ತೆಯಲ್ಲಿ ಮರ ತುಂಬಿದ್ದ ಲಾರಿ ಪಲ್ಟಿ, ಫುಲ್ ಟ್ರಾಫಿಕ್ ಜಾಮ್
ವಿಡಿಯೋ ಸುದ್ದಿಗಳಿಗಾಗು ಕ್ಲಿಕ್ ಮಾಡಿ

