ಚಾಮರಾಜನಗರ: ಸಿದ್ಧವಾಗಿ ವರ್ಷ ಕಳೆದ್ರು ವೀಕ್ಷಣೆಗೆ ಲಭ್ಯವಾಗದ ಆನೆ ಕ್ಯಾಂಪ್, ಪ್ರವಾಸಿಗರು ಅಸಮಾಧಾನ
ಚಾಮರಾಜಗರದಲ್ಲಿ ತೆಪ್ಪಕಾಡು ಮಾದರಿಯಲ್ಲಿ ಆನೆ ಕ್ಯಾಂಪ್ನ್ನು ಈಗಾಗಲೇ ಅರಣ್ಯ ಇಲಾಖೆ ಆರಂಭಿಸಿದೆ. ಆದರೆ ಪ್ರವಾಸಿಗರ ವೀಕ್ಷಣೆಗೆ ಇನ್ನು ಕಾಲ ಕೂಡಿ ಬಂದಿಲ್ಲ. ಇದೀಗ ಆನೆ ಶಿಬಿರದ ವಿಳಂಬ ಹಿನ್ನಲೆ ಸಿಬ್ಬಂದಿಗಳ ವಿರುದ್ಧ ಪ್ರವಾಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಚಿವರ ಅನುಮತಿ ಸಿಕ್ಕಿಲ್ಲವೆಂಬ ಆರೋಪ ಕೇಳಿಬಂದಿದೆ.

ಚಾಮರಾಜನಗರ, ಜುಲೈ 14: ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳನ್ನ (Elephants) ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಚಾಮರಾಜನಗರ (Chamarajanagar) ಜಿಲ್ಲೆಗಿದೆ. ಇದೀಗ ಹೊಸ ಆನೆ ಕ್ಯಾಂಪ್ ತೆರೆಯುವ ಮೂಲಕ ಪ್ರವಾಸಿಗರಿಗೆ ಹೊಸ ಟಚ್ ನೀಡಲು ಅರಣ್ಯಾಧಿಕಾರಿಗಳು ಮುಂದಾಗಿರುವುದು ಗೊತ್ತಿರುವ ವಿಷಯ. ಆದರೆ ವರ್ಷ ಕಳೆದರೂ ವೀಕ್ಷಣೆಗೆ ಇನ್ನು ಆನೆ ಬಿಡಾರ ಸಿದ್ಧವಾಗಿಲ್ಲ. ಹೀಗಾಗಿ ಪ್ರವಾಸಿಗರು ಅರಣ್ಯ ಸಿಬ್ಬಂದಿ ವಿರುದ್ಧ ಭಾರೀ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.
ಬೂದಿ ಪಡಗ ಆನೆ ಕ್ಯಾಂಪ್ ಕಳೆದ ವರ್ಷ ಜುಲೈ 30 ರಂದು ಪ್ರವಾಸಿಗರಿಗೆ ತೆರೆಯಲಿದೆ ಎಂದು ಸುದ್ದಿಯಾಗಿತ್ತು. ಆದರೆ ಆ ಸುದ್ದಿ ಇದೀಗ ಸುಳ್ಳಾಗಿದ್ದು, ಆನೆ ಬಿಡಾರ ಸಂಪೂರ್ಣವಾಗಿದ್ದರು ಸಚಿವರ ಅನುಮತಿ ಸಿಕ್ಕಿಲ್ಲ ಅನ್ನೋ ಒಂದೇ ಕಾರಣಕ್ಕೆ ಒಂದೊಳ್ಳೆ ಕೆಲಸ ನೆಲೆಗುದಿಗೆ ಬಿದ್ದಿದ್ದು ನಿಜಕ್ಕೂ ದುರಂತವೇ ಸರಿ.
ಇದನ್ನೂ ಓದಿ: ದಿಂಬಂ ಘಾಟ್ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ಅತಿ ಹೆಚ್ಚು ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷದಿಂದ ಅಪಖ್ಯಾತಿ ಕೂಡ ಚಾಮರಾಜನಗರಕ್ಕೆ ಇದೆ. ಈ ಆನೆ ಕ್ಯಾಂಪ್ ಮಾಡುವುದರಿಂದ ಕಾಡಾನೆ ಪದೇ ಪದೇ ನಾಡಿಗೆ ನುಗ್ಗಿದಾಗ ಕ್ಯಾಂಪ್ನಲ್ಲಿರುವ ಆನೆಗಳ ಮೂಲಕ ನಾಡಿಗೆ ಬಂದ ಆನೆಗಳನ್ನ ವಾಪಸ್ ಕಾಡಿಗೆ ಓಡಿಸುವಲ್ಲಿ ಅನುಕೂಲವಾಗಲಿದೆ. ಇದರ ಜೊತೆಗೆ ಬರುವಂತ ಪ್ರವಾಸಿಗರಿಗೆ ಕಾಡು ಪ್ರಾಣಿ ಹಾಗೂ ಆನೆಗಳ ಕುರಿತ ಮಾಹಿತಿ ಸಹ ಲಭ್ಯವಾಗಲಿದೆ.
ಕಳೆದ ಬಾರಿಯ ಅಧಿವೇಶನಕ್ಕೂ ಮುಂಚೆ ಬಿಳಿಗಿರಿ ಆನೆ ಕ್ಯಾಂಪ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ವರ್ಷ ಕಳೆದರೂ ಅರಣ್ಯ ಸಚಿವರು ಇತ್ತ ಮುಖ ಮಾಡದ ಹಿನ್ನಲೆ ಪ್ರವಾಸಿಗರಿಗೆ ಇನ್ನು ಕ್ಯಾಂಪ್ ಪ್ರವೇಶಿಸುವ ಸೌಭಾಗ್ಯ ದೊರೆತಿಲ್ಲ.
ಇದನ್ನೂ ಓದಿ: ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಅದೇನೆ ಹೇಳಿ ಈಗಾಗಲೇ ಚಾಮರಾಜಗರದಲ್ಲಿ ಮೂರು ಸಫಾರಿ ಕೇಂದ್ರವಿದ್ದು, ಬಿಳಿಗಿರಿ ವನ್ಯಧಾಮದಲ್ಲಿಯೂ ಸಫಾರಿ ಕೇಂದ್ರ ಆರಂಭವಾದರೆ ಪ್ರವಾಸಿಗರ ಸಂಖ್ಯೆಯೂ ದ್ವಿಗುಣವಾಗುತ್ತೆ. ಇನ್ನು ತೆಪ್ಪಕಾಡು ಮಾದರಿಯಲ್ಲೇ ಆನೆ ಕ್ಯಾಂಪ್ ಆರಂಭವಾದರೆ ಅರಣ್ಯ ಇಲಾಖೆಗೆ ಮತ್ತಷ್ಟು ಆದಾಯ ಹೆಚ್ಚಾಗುವುದು ಪಕ್ಕಾ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:16 am, Mon, 14 July 25