ಪ್ಯಾರಸಿಟಮಾಲ್ ಸೇರಿದಂತೆ 16 ಔಷಧಗಳನ್ನು ನೇರವಾಗಿ ಕೌಂಟರ್‌ನಲ್ಲಿ ಮಾರಲು ಸರ್ಕಾರ ನಿರ್ಧಾರ
ಇನ್ನು ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಈ 16 ಔಷಧಗಳನ್ನು ಕೌಂಟರ್ಗಳಿಂದ (ಔಷಧಾಲಯಗಳು) ಖರೀದಿಸಬಹುದು.
ನವದೆಹಲಿ: ಸಾಮಾನ್ಯವಾಗಿ ಬಹುತೇಕರು ಬಳಸುವಂತಹ ಪ್ಯಾರಸಿಟಮಾಲ್‌ನಂತಹ 16 ಔಷಧಗಳನ್ನು ಕೌಂಟರ್‌ನಲ್ಲಿ ಮಾರಾಟ ಮಾಡಲು ಸರ್ಕಾರವು ನಿರ್ಧರಿಸಿದೆ. ಕಾನೂನನ್ನು ಮಾರ್ಪಡಿಸುವ ಮೂಲಕ ಈ ಅತ್ಯಗತ್ಯ ಮತ್ತು ಅತಿ ಹೆಚ್ಚು ಬಳಕೆಯಲ್ಲಿರುವ 16 ಔಷಧಗಳನ್ನು ಕೌಂಟರ್‌ನಲ್ಲಿ ದೊರೆಯುವಂತೆ ಮಾಡಲಾಗುವುದು ಎಂದು ಭಾರತೀಯ ಗೆಜೆಟ್‌ನಲ್ಲಿ ಪ್ರಕಟಿಸಲಾದ ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹೀಗಾಗಿ, ಇನ್ನು ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಈ 16 ಔಷಧಗಳನ್ನು ಕೌಂಟರ್ಗಳಿಂದ (ಔಷಧಾಲಯಗಳು) ಖರೀದಿಸಬಹುದು. ಆ್ಯಂಟಿಬಯೋಟಿಕ್‌ಗಳು ಸೇರಿದಂತೆ ಹಲವಾರು ಔಷಧಿಗಳನ್ನು ಕೌಂಟರ್‌ನಲ್ಲಿ ಮಾರಾಟ ಮಾಡಲಾಗುವುದು. ದೇಶದಲ್ಲಿ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಬಹುದಾದ ಔಷಧಿಗಳನ್ನು ಪಟ್ಟಿಯಲ್ಲಿ ಸೇರಿಸಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಬಹುಶಃ ಇದೇ ಮೊದಲಾಗಿದೆ.
ಇದನ್ನೂ ಓದಿ: ಇನ್ನು ಈ 16 ಔಷಧಿ ಖರೀದಿಸಲು ಪ್ರಿಸ್ಕ್ರಿಪ್ಷನ್ ಬೇಕಾಗಿಲ್ಲ; ಶೀಘ್ರದಲ್ಲೇ ಪರಿಷ್ಕೃತ ನಿಯಮ ಜಾರಿ
ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟವಾಗುವ ಇತರ ಔಷಧಿಗಳಲ್ಲಿ ಕೆಲವು ಡಿಕೊಂಗಸ್ಟೆಂಟ್‌ಗಳು, ಸಾಮಾನ್ಯವಾಗಿ ಬಳಸುವ ಲಾಕ್ಸಾಟಿವ್ಸ್, ಕೆಲವು ಮೌತ್‌ವಾಶ್‌ಗಳು, ಮೊಡವೆ-ನಿವಾರಕ ಕ್ರೀಮ್‌ಗಳು ಮತ್ತು ಪೇಯ್ನ್ ಕಿಲ್ಲರ್ಗಳು ಸೇರಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಔಷಧಗಳ ನಿಯಂತ್ರಣ ಕಾಯಿದೆ, 1945ಕ್ಕೆ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಈ 16 ಔಷಧಗಳನ್ನು ನಿರಂತರವಾಗಿ 5 ದಿನಕ್ಕಿಂತ ಹೆಚ್ಚು ಮುಂದುವರಿಸಬಾರದು, ರೋಗಲಕ್ಷಣಗಳು ಕಡಿಮೆಯಾಗದಿದ್ದರೆ ರೋಗಿಯು ವೈದ್ಯರನ್ನು ಸಂಪರ್ಕಿಸಬೇಕು ಎಂಬ ಷರತ್ತನ್ನೂ ವಿಧಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Tue, 7 June 22