ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರ್; ದಂಪತಿ ಸ್ಥಳದಲ್ಲೇ ದುರ್ಮರಣ, ಮಕ್ಕಳು ಪಾರು

| Updated By: preethi shettigar

Updated on: Sep 19, 2021 | 1:05 PM

ಮೃತ ಬಿ.ಎಸ್.ರವಿ ದಂಪತಿ ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ದಂಪತಿಯ ಮಗ ಹಾಗೂ ಮಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರ್; ದಂಪತಿ ಸ್ಥಳದಲ್ಲೇ ದುರ್ಮರಣ, ಮಕ್ಕಳು ಪಾರು
ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರ್
Follow us on

ತುಮಕೂರು: ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಮಾಯಸಂದ್ರ ಬಳಿಯ ಚಿಕ್ಕಪುರ ಗೇಟ್ ಬಳಿ ನಡೆದಿದೆ. ಕುಟಂಬ ಸಮೇತ ತುರುವೇಕೆರೆಯ ಬೇಟೆರಾಯ ಸ್ವಾಮಿ ದೇವಸ್ಥಾನಕ್ಕೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಬಿ.ಎಸ್.ರವಿ(54), ಪತ್ನಿ ಜ್ಯೋತಿ(48) ಮೃತ ದುರ್ದೈವಿಗಳು.

ಮೃತ ಬಿ.ಎಸ್.ರವಿ ದಂಪತಿ ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ದಂಪತಿಯ ಮಗ ಹಾಗೂ ಮಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ರು ಮೂಕ ಪ್ರೇಕ್ಷಕರಾದ ಜನ
ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿಯ ದದಾಮಟ್ಟಿ ಕ್ರಾಸ್ ಬಳಿ ಬೈಕ್‌ಗೆ ಹಿಟ್ ಆಂಡ್ ರನ್ ಘಟನೆ ಸಂಭವಿಸಿದೆ. ಘಟನೆಯಲ್ಲಿ ರಸ್ತೆ ಬದಿಗೆ ಬಿದ್ದ ಯುವಕ-ಯುವತಿ ರಕ್ತದ ಮಡುವಿನಲ್ಲಿ ಒದ್ದಾಡಿದ ಅಮಾನವೀಯ ದೃಶ್ಯಗಳು ಕಂಡು ಬಂದಿವೆ.

ನಿನ್ನೆ ಸಂಜೆ ವಿಜಯಪುರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿಯ ದದಾಮಟ್ಟಿ ಕ್ರಾಸ್ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ಬಿಎಲ್ಡಿಇ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ಸಚಿನ್ ಶಿವಾನಂದ ಕುಂಬಾರ್ ಎಂಬ ಯುವಕ ಹಾಗೂ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಸುಜಾತಾ ಮಠಪತಿ ಎಂಬ ಯುವತಿ ಇಬ್ಬರು ಬೈಕ್ನಲ್ಲಿ ರಾಷ್ಟ್ರೀಯ ಹೆದ್ದಾರಿ 50 ರ ಮುಖಾಂತರ ಪ್ರಯಾಣಿಸುತ್ತಿದ್ದರು. ಈ ವೇಳೆ ಬೈಕ್ಗೆ ಬೇರೊಂದು ವಾಹನ ಡಿಕ್ಕಿ ಹೊಡೆದು ಹೊರೆಟು ಹೋಗಿದೆ. ಅಪಘಾತದಲ್ಲಿ ಸಚಿನ್ ಹಾಗೂ ಸುಜಾತಾಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು ಇಬ್ಬರೂ ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಒದ್ದಾಡಿದ್ದಾರೆ.

ಯುವಕ-ಯುವತಿ ಕಾಪಾಡಿ ಕಾಪಾಡಿ ಎಂದು ರಸ್ತೆ ಮೇಲೆ ಬಿದ್ದು ಅಂಗಲಾಚಿದರೂ ಯಾರೊಬ್ಬ ವ್ಯಕ್ತಿಯೂ ಸಹಾಯಕ್ಕೆ ಮುಂದಾಗಿಲ್ಲ. ಕಾಲು ಮುರಿದು ಕೊಂಡು ರಕ್ತದ ಮಡುವಿನಲ್ಲಿ ಬಿದ್ದ ಯುವಕ ಹಾಗೂ ಯುವತಿಯ ಚೀರಾಟದ ವಿಡಿಯೋವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದು ವಿಡಿಯೋ ವೈರಲ್ ಆಗಿದೆ. ಕೊನೆಗೆ ಘಟನಾ ಸ್ಥಳದಲ್ಲಿದ್ದ ಯಾರೋ ಆಂಬ್ಯುಲೆನ್ಸ್ಗೆ ಕರೆ ಮಾಡಿ ಕರೆಸಿದ್ದು ಯುವಕ ಯುವತಿಯನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದ್ರೆ ಚಿಕಿತ್ಸೆ ಫಲಿಸದೇ ಯುವಕ ಸಚಿನ್ ಮೃತಪಟ್ಟಿದ್ದಾನೆ.

ಇಂಡಿ ತಾಲೂಕಿನ ಬೂದಿಹಾಳ ಗ್ರಾಮದ ಸಚಿನ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ತಿಕೋಟ ಪಟ್ಟಣದ ಮಠಪತಿ ಗಲ್ಲಿ ನಿವಾಸಿ ಸುಜಾತಾಳಿಗೆ ಚಿಕಿತ್ಸೆ ಮುಂದುವರೆದಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:
Accident | ಬೆಳಗಿನ ಜಾವ ಆಕ್ಸಿಡೆಂಟ್​: ನಿಂತಿದ್ದ ತೈಲ ಟ್ಯಾಂಕರ್​ಗೆ ಕಾರ್​ ಡಿಕ್ಕಿ, ಭೀಕರ ಅಪಘಾತದಲ್ಲಿ 6 ವಿದ್ಯಾರ್ಥಿಗಳ ಸಾವು

ಆಟೋ, ಡಿಯೋ ಸ್ಕೂಟರ್​ಗೆ ಲ್ಯಾಂಬೋರ್ಗಿನಿ ಕಾರ್​ ಡಿಕ್ಕಿ: ಅಪಘಾತವೆಸಗಿದ ಚಾಲಕ ಶರವೇಗದಲ್ಲಿ ಎಸ್ಕೇಪ್​

Published On - 12:04 pm, Sun, 19 September 21