Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗೋದು ಖಚಿತ: ಅವರು ಸಿಎಂ ಆದರೆ ಕುಣಿಗಲ್​ಗೆ ನಾನೇ ಮುಖ್ಯಮಂತ್ರಿ: ಶಾಸಕ ರಂಗನಾಥ್

ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗೋದು ಖಚಿತ. ಅವರು ಸಿಎಂ ಆದರೆ ಕುಣಿಗಲ್​ಗೆ ನಾನೇ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಶಾಸಕ ರಂಗನಾಥ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗೋದು ಖಚಿತ: ಅವರು ಸಿಎಂ ಆದರೆ ಕುಣಿಗಲ್​ಗೆ ನಾನೇ ಮುಖ್ಯಮಂತ್ರಿ: ಶಾಸಕ ರಂಗನಾಥ್
ಕಾಂಗ್ರೆಸ್ ಶಾಸಕ ರಂಗನಾಥ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 01, 2022 | 2:12 PM

ತುಮಕೂರು: ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗೋದು ಖಚಿತ. ಅವರು ಸಿಎಂ ಆದರೆ ಕುಣಿಗಲ್​ಗೆ ನಾನೇ ಮುಖ್ಯಮಂತ್ರಿ ಎಂದು ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಂಗನಾಥ್ ಹೇಳಿಕೆ ನೀಡಿದ್ದಾರೆ. ಕುಣಿಗಲ್ ಕ್ಷೇತ್ರದ ಹಳ್ಳಿಗಳಲ್ಲಿ ರಸ್ತೆ ಸಮಸ್ಯೆ ಇದೆ ಎಂದು ಹೇಳಿಕೊಂಡ ಮತದಾರರಿಗೆ ಶಾಸಕರಿಂದ ಹೇಳಿಕೆ ನೀಡಿದ್ದು, ನಿಮಗೆ ಇದೊಂದು ಸವಾಲು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್​ಗೆ ಬೆಂಬಲಿಸಿ. ಡಿ.ಕೆ. ಶಿವಕುಮಾರ ಸಿಎಂ ಆದ ಬಳಿಕ ಕ್ಷೇತ್ರದ ಅಭಿವೃದ್ಧಿ ಖಂಡಿತ ಆಗುತ್ತದೆ ಎಂದು ಮತದಾರರಲ್ಲಿ ಕಾಂಗ್ರೆಸ್ ಶಾಸಕ ರಂಗನಾಥ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ನಮ್ಮ ನಾಯಕರ ಮೇಲೆ ನಾನು ಸಂಪೂರ್ಣ ವಿಶ್ವಾಸವಿದೆ: ಲೆಹರ್ ಸಿಂಗ್

ನಮ್ಮ ನಾಯಕರ ಮೇಲೆ ನಾನು ಸಂಪೂರ್ಣ ವಿಶ್ವಾಸ ಇಟ್ಟಿದ್ದೇನೆ ಎಂದು ಬೆಂಗಳೂರಿನಲ್ಲಿ ಬಿಜೆಪಿ 3ನೇ ಅಭ್ಯರ್ಥಿ ಲೆಹರ್ ಸಿಂಗ್ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ, ದೇವೇಗೌಡರ ಜೊತೆಗೂ ಮಾತನಾಡುತ್ತೇನೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರನ್ನು ಬೆಂಬಲಿಸಿದ್ದೇನೆ. ಹಲವು ಸಂದರ್ಭಗಳಲ್ಲಿ ನಾನು ಅವರನ್ನು ಬೆಂಬಲಿಸಿದ್ದೇನೆ. ಅವರ ಬಜೆಟ್​ನ ಒಳ್ಳೆಯ ಅಂಶಗಳನ್ನು ನಾನು ಹೊಗಳಿದ್ದೇನೆ. ಹೆಚ್​.ಡಿ.ದೇವೇಗೌಡರ ಬಗ್ಗೆ ನನಗೆ ಬಹಳ ಗೌರವ ಇದೆ. ಎಲ್ಲ ಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ. ಹೀಗಾಗಿ ನಾನು ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಟಿವಿ 9ಗೆ ರಾಜ್ಯಸಭಾ ಬಿಜೆಪಿ 3ನೇ ಅಭ್ಯರ್ಥಿ ಲೆಹರ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಮತಗಳು ಯಾರಿಗೆ ಟ್ರಾನ್ಸಫರ್ ಆಗತ್ತೆ ಹೇಳಿ?

ಗೆಲ್ಲುವುದರಲ್ಲಿ ತೊಂದರೆ ಏನಿಲ್ಲ. ಕಾಂಗ್ರೆಸ್ ಮತಗಳು ಯಾರಿಗೆ ಟ್ರಾನ್ಸಫರ್ ಆಗತ್ತೆ ಹೇಳಿ? ದೇವೇಗೌಡರಿಗೂ ಕಾಂಗ್ರೆಸ್ ಸಹಾಯ ಮಾಡಿತ್ತು ಎಂದು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಹೇಳಿಕೆ ನೀಡಿದ್ದಾರೆ. ಈಗಲೂ ಅದನ್ನೇ ಕೋರಿದ್ದೆವು. ಸಹಾಯ ಮಾಡುತ್ತಾರೆ ಅಂದುಕೊಂಡಿದ್ದೆವು. ಸಿದ್ದರಾಮಣ್ಣ ಮನೆಗೆ ಹೋಗೋದಕ್ಕೆ ಕೇಳಿದ್ದೆ. ಬೆಳಗ್ಗೆ ಫೋನ್ ಮಾಡಿದಾಗ ತುಂಬ ಜನ ಇದ್ದಾರೆ ಅಂದರು. ಆಮೇಲೆ ಚನ್ನರಾಯಪಟ್ಟಣ ಹೋಗುತ್ತಾರೆ ಅಂದರು. ಸಿದ್ದರಾಮಣ್ಣನ್ನು ನಾನು ಮೀಟ್ ಮಾಡುತ್ತೇನೆ. ಸಿದ್ದರಾಮಣ್ಣ ನಮಗೇನೂ ದೂರ ಅಲ್ಲ ಎಂದು ಹೇಳಿದರು.

ಕಾಂಗ್ರೆಸ್​ ಪಕ್ಷದ ನಡೆ ಬಗ್ಗೆ ಹಿರಿಯ ನಾಯಕರು ಬೇಸರ

ಪರಿಷತ್ ಅಥವಾ ರಾಜ್ಯಸಭೆ ಟಿಕೇಟ್​ ನಿರೀಕ್ಷೆಯಲ್ಲಿದ್ದ ನಾಯಕರು, ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬಿ.ಎಲ್​ ಶಂಕರ, ವಿ.ಆರ್. ಸುದರ್ಶನ್​ ಬೇಸರಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಮಹತ್ವದ ಸ್ಥಾನಮಾನ ನೀಡುವ ಭರವಸೆ ನೀಡಲಾಗಿದೆ. ಪರಿಷತ್, ರಾಜ್ಯಸಭೆ ಟಿಕೇಟ್​ ಘೋಷಣೆ ಬಳಿಕ ಮುಖ್ಯಮಂತ್ರಿ ಚಂದ್ರು, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಮುದ್ದಹನುಮಗೌಡ, ಎಂಡಿ ಲಕ್ಷಿನಾರಾಯಣ ಅಸಮಾಧಾನಗೊಂಡಿದ್ದಾರೆ. ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಸ್ಥಾನ ನೀಡಿದರೂ ಮುಖ್ಯಮಂತ್ರಿ ಚಂದ್ರು ಬೇಸರಗೊಂಡಿದ್ದಾರೆ. ಒಳ ರಾಜಕೀಯದ ಬಗ್ಗೆ ಮುದ್ದಹನುಮೇ ಗೌಡ ಗುಡುಗಿದ್ದಾರೆ. ಪಕ್ಷ ಗುರುತಿಸದ ಹಿನ್ನಲೆ ಬ್ರಿಜೇಶ್ ಕಾಳಪ್ಪ ಬೇಸರ ವ್ಯಕ್ತಪಡಿಸಿದ್ದು, ಕಾಂಗ್ರೆಸ್​ ಪಕ್ಷದ ನಡೆ ಬಗ್ಗೆ ಹಿರಿಯ ನಾಯಕರು ಬೇಸರ ಹೊಂದಿದ್ದಾರೆ. ಸದ್ಯ ಕೈ ಪಡೆಗೆ ಹಿರಿಯ ನಾಯಕರ ಅಸಮಾಧಾನ ತಲೆನೋವಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 1:41 pm, Wed, 1 June 22

ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ