ತುಮಕೂರು, ಏ.07: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ತೆರಳಿದ್ದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ, ಬಿಜೆಪಿಯ ಮೂವರು ಕಾರ್ಯಕರ್ತರು ಹಲ್ಲೆ ಮಾಡಿ, ಬಳಿಕ ಚಾಕುವಿನಿಂದ ಇರಿದ ಆರೋಪ ಕೇಳಿಬಂದಿದೆ. ಕುಣಿಗಲ್ (Kunigal) ತಾಲ್ಲೂಕಿನ ನಡೇಮಾವಿನಪುರದಲ್ಲಿ ಘಟನೆ ನಡೆದಿದೆ. ವೆಂಕಟಗೌಡನಪಾಳ್ಯದ ಕೀರ್ತಿ ಹಲ್ಲೆಗೊಳಗಾದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಚಂದ್ರು, ಜಗದೀಶ್, ಸುನೀಲ್ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತರೆಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಕೀರ್ತಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಂಗ್ರೆಸ್ ಮುಖಂಡ ಡಿಕೆ ಸುರೇಶ್(DK Suresh) ಅವರ ನಾಮಪತ್ರ ಸಲ್ಲಿಕೆಗೆ ಯಾಕೆ ಹೋಗಿದ್ದೆ ಅಂತ ಕೀರ್ತಿ ಅವರ ಜೊತೆ ಮೂವರು ಗಲಾಟೆ ತೆಗೆದಿದ್ದಾರೆ. ಬಳಿಕ ದೊಣ್ಣೆಯಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದಾರೆ ಅಂತ ಆರೋಪ ಕೇಳಿಬಂದಿದೆ. ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆಂದು ಯೂತ್ ಕಾಂಗ್ರೆಸ್ಪ್ರಧಾನ ಕಾರ್ಯದರ್ಶಿ ಕೀರ್ತಿ ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು ಆರೋಪಿಗಳ ವಿರುದ್ಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬಿಜೆಪಿ ಮುಖಂಡ ಪೃಥ್ವಿಸಿಂಗ್ಗೆ ಚಾಕು ಇರಿತ ಪ್ರಕರಣ: ಗಲಾಟೆ ವೇಳೆ ಚನ್ನರಾಜ ಹಟ್ಟಿಹೊಳಿ ಕಾರು ಪತ್ತೆ
ಬೆಂಗಳೂರು: ಪತಿ ಸೀರೆಯಿಂದ ಪತ್ನಿಯ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿ ವೆಂಕಟೇಶ್ ಕೊಲೆ ಮಾಡಿದ ಆರೋಪಿ. ನೇತ್ರಾವತಿ ಮೃತ ದುರ್ದೈವಿ. ನಿನ್ನೆ(ಏ.06) ರಂದು ರಾತ್ರಿ ವೆಂಕಟೇಶ್ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಬೆಳಿಗ್ಗೆ ಪಕ್ಕದ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Sun, 7 April 24