ಬಿಜೆಪಿ ಮುಖಂಡ ಪೃಥ್ವಿಸಿಂಗ್ಗೆ ಚಾಕು ಇರಿತ ಪ್ರಕರಣ: ಗಲಾಟೆ ವೇಳೆ ಚನ್ನರಾಜ ಹಟ್ಟಿಹೊಳಿ ಕಾರು ಪತ್ತೆ
prithvi singh Asselt Case: ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಅವರ ಅತ್ಯಾಪ್ತ ಪೃಥ್ವಿ ಸಿಂಗ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಈ ಕೃತ್ಯದ ಹಿಂದೆ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಹೆಸರು ಕೇಳಿಬಂದಿದೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ಗಲಾಟೆ ನಡೆದ ಸಮಯದಲ್ಲೇ ಹಲ್ಲೆಗೊಳಗಾದ ಪೃಥ್ವಿ ಸಿಂಗ್ ಮನೆ ಬಳಿ ಚನ್ನರಾಜ ಹಟ್ಟಿಹೊಳಿ ಓಡಾಡಿರುವ ದೃಶ್ಯ ಸಿಟಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗಾವಿ, (ಡಿಸೆಂಬರ್ 05): ಒಂದೆಡೆ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇಡೀ ಸರ್ಕಾರ, ವಿರೋಧ ಪಕ್ಷ ಬೆಳಗಾವಿಯಲ್ಲಿದೆ (Belagavi). ಇದರ ನಡುವೆ ರಮೇಶ್ ಜಾರಕಿಹೊಳಿ (Ramesh Jarkiholi) ಆಪ್ತ ಬಿಜೆಪಿ ಎಸ್ಸಿ ಮೋರ್ಚಾದ ಕಾರ್ಯಕರ್ತ ಪೃಥ್ವಿ ಸಿಂಗ್ಗೆ ಚಾಕು ಇರಿಯಲಾಗಿದೆ. ಅದರಲ್ಲೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಹಾಗೂ ಆಪ್ತರಾದ ಸುಜಯ್, ಸದ್ದಾಂ ದಾಳಿ ಮಾಡಿದ್ದಾರೆ ಎಂದು ದಾಳಿಗೊಳಗಾದ ಪೃಥ್ವಿ ಸಿಂಗ್ ಆರೋಪಿಸಿದ್ದಾರೆ. ಆದ್ರೆ, ಇದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಚನ್ನರಾಜ ಅಲ್ಲಗೆಳೆದಿದ್ದಾರೆ. ಆದ್ರೆ, ಗಲಾಟೆ ವೇಳೆ ಪೃಥ್ವಿ ಮನೆ ಬಳಿ ಚನ್ನರಾಜ ಹಟ್ಟಿಹೊಳಿ ಕಾರು ಓಡಾಡಿದ ದೃಶ್ಯ ಟಿವಿ9ಗೆ ಲಭ್ಯವಾಗಿದೆ.
ಬಿಜೆಪಿ ಮುಖಂಡ ಪೃಥ್ವಿಸಿಂಗ್ ಮನೆ ಬಳಿ ಚನ್ನರಾಜ ಹಟ್ಟಿಹೊಳಿ ಕಾರು ಪತ್ತೆಯಾಗಿದೆ.ಬೆಳಗಾವಿಯ ಜಯನಗರದಲ್ಲಿರೋ ಪೃಥ್ವಿಸಿಂಗ್ ಮನೆ ಬಳಿ ಚನ್ನರಾಜ ಹಟ್ಟಿಹೊಳಿ ಅವರ ಕಪ್ಪು ಬಣ್ಣದ ಇನ್ನೋವಾ ಕಾರು ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ಟಿವಿ9ಗೆ ಸಿಕ್ಕಿದೆ.
ಇದನ್ನೂ ಓದಿ: ಪೃಥ್ವಿ ಸಿಂಗ್ ನಟೋರಿಯಸ್ ಫೆಲೋ, ಸುಳ್ಳು ಹೇಳುತ್ತಿದ್ದಾನೆ: ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ
ಸೋಮವಾರ ಸಂಜೆ 4.51ರ ವೇಳೆ ಕಾರಿನಲ್ಲಿ ಚನ್ನರಾಜ ಹಟ್ಟಿಹೊಳಿ ತೆರಳಿದ ದೃಶ್ಯವು ಸಹ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಆರೋಪಗಳಿಗೆ ಸಿಸಿಟಿವಿ ದೃಶ್ಯ ಪುಷ್ಠಿ ನೀಡಿದಂತಿದೆ. ಹಾಗಾದ್ರೆ, ಗಲಾಟೆ ವೇಳೆ ಚನ್ನರಾಜ ಹಟ್ಟಿಹೊಳಿ ಸ್ಥಳದಲ್ಲೇ ಇದ್ರಾ ಎನ್ನುವ ಎನ್ನುವ ಶಂಕೆ ವ್ಯಕ್ತವಾಗಿದೆ. ಮುಂದೆ ನಿಂತುಕೊಂಡೇ ಹಲ್ಲೆ ಮಾಡಿಸಿದ್ರಾ? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ.
ಘಟನೆ ನಡೆದು 14 ಗಂಟೆಯಾದರೂ ದಾಖಲಾಗದ ಕೇಸ್
ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಮತ್ತು ಬೆಂಬಲಿಗರಿಂದ ಹಲ್ಲೆ ಆಗಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಆದ್ರೆ, ಈ ವರೆಗೂ ಪೊಲೀಸರು ಕೂಡ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿಲ್ಲ. ಘಟನೆ ನಡೆದ 14 ಗಂಟೆಗಳ ಕಳೆದರೂ ಸಹ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಪೃಥ್ವಿ ಸಿಂಗ್ ಕುಟುಂಬಸ್ಥರು ಕೇಸ್ ನೀಡುತ್ತಿಲ್ಲ ಎಂದು ಎಪಿಎಂಸಿ ಠಾಣೆ ಪೊಲೀಸರು, ಇದುವರೆಗೂ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಇತ್ತ ಕುಟುಂಬಸ್ಥರು ಅಳೆದು ತೂಗಿ ಕೇಸ್ ನೀಡಲು ಚಿಂತನೆ ನಡೆಸಿದ್ದಾರೆ.
ಇನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ರಮೇಶ್ ಜಾರಕಿಹೊಳಿ ಅವರು ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಆಪ್ತನ ಆರೋಗ್ಯ ವಿಚಾರಿಸಲಿದ್ದು, ಇದು ರಾಜಕೀಯವಾಗಿ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 am, Tue, 5 December 23