ಮನೆಯಲ್ಲಿ ಸ್ಫೋಟ, ಗೋಡೆ ಕುಸಿದು 6 ಜನರಿಗೆ ಗಂಭೀರ ಗಾಯ; ಸ್ಥಳಕ್ಕೆ ಶಾಸಕ ಟಿ.ಬಿ ಜಯಚಂದ್ರ ಭೇಟಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 29, 2023 | 3:24 PM

ಮಧುಗಿರಿ ರಸ್ತೆಯ ಪಾರ್ಕ್ ಮೊಹಲ್ಲಾದ ನಜೀರ್ ಎಂಬುವವರ ಮನೆಯಲ್ಲಿ ಆಕಸ್ಮಿಕ ಸ್ಫೋಟವಾಗಿದ್ದು, ಕೂಡಲೇ ಗಾಯವಾದವರಿಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಸ್ದಳಕ್ಕೆ ತುಮಕೂರು ಎಸ್ಪಿ ಕೆ.ವಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆಯಲ್ಲಿ ಸ್ಫೋಟ, ಗೋಡೆ ಕುಸಿದು 6 ಜನರಿಗೆ ಗಂಭೀರ ಗಾಯ; ಸ್ಥಳಕ್ಕೆ ಶಾಸಕ ಟಿ.ಬಿ ಜಯಚಂದ್ರ ಭೇಟಿ
ತುಮಕೂರು
Follow us on

ತುಮಕೂರು, ಸೆ.29: ಆಕಸ್ಮಿಕ ಸ್ಫೋಟವಾಗಿ ಮನೆ ಗೋಡೆ ಕುಸಿದು ಆರು ಜನರಿಗೆ ಗಂಭೀರ ಗಾಯವಾದ ಘಟನೆ ತುಮಕೂರು(Tumakuru) ಜಿಲ್ಲೆಯ ಶಿರಾ ನಗರದಲ್ಲಿ ನಡೆದಿದೆ. ಮಧುಗಿರಿ ರಸ್ತೆಯ ಪಾರ್ಕ್ ಮೊಹಲ್ಲಾದ ನಜೀರ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಗಾಯವಾದವರಿಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೌದು, ಸ್ಫೋಟದಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಸ್ಫೋಟಕ್ಕೆ ನಿಖರ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಇನ್ನು ಸ್ದಳಕ್ಕೆ ತುಮಕೂರು ಎಸ್ಪಿ ಕೆ.ವಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಟಿ.ಬಿ ಜಯಚಂದ್ರ ಭೇಟಿ ನೀಡಿ  ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಬಾಲಕ ಸಾವು

ಕೋಲಾರ: ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಸಾಗರ ಕೆರೆಯಲ್ಲಿ ನಡೆದಿದೆ. ಮುಳಬಾಗಿಲು ಪಟ್ಟಣದ ನಿವಾಸಿ ಸಲೀಂ (20) ಮೃತ ಬಾಲಕ. ನಿನ್ನೆ(ಸೆ.29) ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಈ ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ:ಸಿಲಿಂಡರ್ ಸ್ಫೋಟಗೊಂಡು ಕಾರ್ಮಿಕನಿಗೆ ಗಂಭೀರ ಗಾಯ: ನೆರವಿಗೆ ಬಾರದ ಬೇಕರಿ ಮಾಲೀಕ

ಮಾದಕವಸ್ತು ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿ ಸಿಸಿಬಿ ಪೊಲೀಸರ ಬಲೆಗೆ

ಇದೇ ಸೆ.26 ರಂದು ಮಂಗಳೂರು ನಗರದ ಬೆಂದೂರ್ ವೆಲ್ ಪರಿಸರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಗರದ ಕಾಲೋಜುವೊಂದರ ಪದವಿ ವಿದ್ಯಾರ್ಥಿಯಾಗಿರುವ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಲುಕುಮಾನುಲ್ ಹಕೀಂ (22) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 1 ಲಕ್ಷ 25 ಸಾವಿರ ಮೌಲ್ಯದ 25 ಗ್ರಾಂ‌ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ ಸೇರಿದಂತೆ ಒಟ್ಟು 1 ಲಕ್ಷ 60 ಸಾವಿರ ಮೌಲ್ಯದ ವಸ್ತುಗಳನ್ನು ಕೂಡ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ