ಬಣವೆಗೆ ತಗುಲಿದ್ದ ಬೆಂಕಿ ನಂದಿಸಲು ಹೋದ ರೈತ ಅದೇ ಬೆಂಕಿಯಲ್ಲಿ ಸುಟ್ಟು ಭಸ್ಮ
ತುಮಕೂರು: ಬಣವೆಗೆ ತಗುಲಿದ್ದ ಬೆಂಕಿ ನಂದಿಸಲು ಹೋದ ರೈತ ಸಜೀವದಹನವಾಗಿರುವ ಘಟನೆ ಪಾವಗಡ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಹೊಸರಾಮ್ ನಾಯಕ್(60) ಮೃತ ರೈತ. ತೊಗರಿ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ತೊಗರಿ ಬೆಳೆ ಬಣವೆಗೆ ಬೆಂಕಿ ಬಿದ್ದು ಹತ್ತಿ ಉರಿದಿದೆ. ಇದನ್ನು ಗಮನಿಸಿದ ರೈತ ಹೊಸರಾಮ್ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಒಣ ಹುಲ್ಲಿಗೆ ಬೆಂಕಿ ತಗುಲಿದ್ದ ಪರಿಣಾಮ ರೈತ ಬೆಂಕಿಯಲ್ಲಿ ಸಿಲುಕಿ ಸಂಪೂರ್ಣ ಭಸ್ಮವಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದು […]
ತುಮಕೂರು: ಬಣವೆಗೆ ತಗುಲಿದ್ದ ಬೆಂಕಿ ನಂದಿಸಲು ಹೋದ ರೈತ ಸಜೀವದಹನವಾಗಿರುವ ಘಟನೆ ಪಾವಗಡ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಹೊಸರಾಮ್ ನಾಯಕ್(60) ಮೃತ ರೈತ. ತೊಗರಿ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ತೊಗರಿ ಬೆಳೆ ಬಣವೆಗೆ ಬೆಂಕಿ ಬಿದ್ದು ಹತ್ತಿ ಉರಿದಿದೆ. ಇದನ್ನು ಗಮನಿಸಿದ ರೈತ ಹೊಸರಾಮ್ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಒಣ ಹುಲ್ಲಿಗೆ ಬೆಂಕಿ ತಗುಲಿದ್ದ ಪರಿಣಾಮ ರೈತ ಬೆಂಕಿಯಲ್ಲಿ ಸಿಲುಕಿ ಸಂಪೂರ್ಣ ಭಸ್ಮವಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದು ಬೆಂಕಿಯನ್ನ ನಂದಿಸಿದ್ದಾರೆ. ತಿರುಮಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.