ಎಸ್.ಎಂ. ಕೃಷ್ಣ ಕಾಲದಿಂದಲೂ ವಿದ್ಯುತ್ ಬಿಲ್ ಪಾವತಿಸದೆ 1 ಕೋಟಿ ರೂ ಬಾಕಿ, ಮನ್ನಾ ಮಾಡುವಂತೆ ರೈತರ ಆಗ್ರಹ

| Updated By: ಆಯೇಷಾ ಬಾನು

Updated on: Oct 20, 2021 | 1:35 PM

20 ವರ್ಷದಿಂದ ಇರುವ ವಿದ್ಯುತ್ ಬಿಲನ್ನ ಮನ್ನಾ ಮಾಡಿ ಇನ್ನೂ ಮುಂದೆ ಬಿಲ್ ಪಾವತಿಸುತ್ತೇವೆ ಅಂತಾ ಆಗ್ರಹಿಸಿದ್ದಾರೆ. ಸದ್ಯ ಈಗ ಅಷ್ಟೊಂದು ಹಣ ಕಟ್ಟಿ ಎಂದರೆ ಯಾರ ಬಳಿಯೂ ಇಲ್ಲ, ಇಲ್ಲಿ ರೈತರು ಹೆಚ್ಚಾಗಿ ಇರುವ ಕಾರಣ ಒಟ್ಟು ಹಣ ಕಟ್ಟಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ.

ಎಸ್.ಎಂ. ಕೃಷ್ಣ ಕಾಲದಿಂದಲೂ ವಿದ್ಯುತ್ ಬಿಲ್ ಪಾವತಿಸದೆ 1 ಕೋಟಿ ರೂ ಬಾಕಿ, ಮನ್ನಾ ಮಾಡುವಂತೆ ರೈತರ ಆಗ್ರಹ
ಎಸ್.ಎಂ. ಕೃಷ್ಣ ಕಾಲದಿಂದಲೂ ವಿದ್ಯುತ್ ಬಿಲ್ ಪಾವತಿಸದೆ 1 ಕೋಟಿ ರೂ ಬಾಕಿ, ಮನ್ನಾ ಮಾಡುವಂತೆ ರೈತರ ಆಗ್ರಹ
Follow us on

ತುಮಕೂರು: ಗ್ರಾಮೀಣ ಭಾಗಗಳಿಗೆ ಸೂಕ್ತ ವಿದ್ಯುತ್ ಪೂರೈಕೆಗೆ ಆಗ್ರಹಿಸಿ 2002 ರಲ್ಲಿ ರೈತ ಸಂಘ ಕರೆ ನೀಡಿದ್ದ ವಿದ್ಯುತ್ ಕರ ನಿರಾಕರಣ ಚಳುವಳಿ ತುಮಕೂರು ಜಿಲ್ಲೆಯಲ್ಲಿ ಮುಂದುವರೆದಿದೆ. ಜಿಲ್ಲೆಯ ತಿಪಟೂರು ತಾಲೂಕಿನ ತಿಮ್ಲಾಪುರ, ಬಸವನಹಳ್ಳಿ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಕಗೊಂಡನಹಳ್ಳಿಯ ಒಟ್ಟು 140 ಕುಟುಂಬಗಳು ಸುಮಾರು 20 ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ ಎನ್ನಲಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿಕೊಂಡು ಬಂದಿವೆ. ಈಗಲೂ ಇದು ಮುಂದುವರೆದಿದೆ. ಸದ್ಯ ವಿದ್ಯುತ್ ಸಮಸ್ಯೆ ಬಗೆಹರಿದಿರುವುದರಿಂದ ಬಿಲ್ ಪಾವತಿಸಲು ಸಿದ್ಧರಿದ್ದಾರೆ ಎನ್ನಲಾಗಿದೆ. ಆದರೆ ಇದುವರೆಗೂ ಅಸಲು ಬಡ್ಡಿ ಸೇರಿ 1.04 ಕೋಟಿ ರೂ ಆಗಿದ್ದು ಅದನ್ನು ಮನ್ನಾ ಮಾಡಿ. ಈಗಿಂದ ಬರುವ ಬಿಲನ್ನು ಕಟ್ಟುತ್ತೇವೆ ಅಂತಾ ರೈತರು ಆಗ್ರಹಿಸಿದ್ದಾರೆ.

2002 ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಪ್ರದೇಶಗಳಿಗೆ ದಿನಕ್ಕೆ ಕೇವಲ 90 ನಿಮಿಷ ಮಾತ್ರ ವಿದ್ಯುತ್ ನೀಡಲಾಗುತ್ತಿತ್ತು. ಇದನ್ನ ಖಂಡಿಸಿ ರೈತರು ವಿದ್ಯುತ್ ಕರ ನಿರಾಕರಣ ಚಳುವಳಿ ಹಮ್ಮಿಕೊಂಡಿದ್ದರು. ನಂತರ ಸಮಸ್ಯೆ ಬಗೆಹರಿದಿದ್ದ ಕಾರಣ ಚಳುವಳಿ ಹಿಂಪಡೆದಿದ್ದರು. ಆದರೆ ತಿಪಟೂರು ತಾಲೂಕಿನ ತಿಮ್ಲಾಪುರ, ಬಸವನಹಳ್ಳಿ, ಲಕ್ಮಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಮಾತ್ರ ವಿದ್ಯುತ್ ಬಿಲ್ ಪಾವತಿಸಿಲ್ಲ. ಈ ಭಾಗದಲ್ಲಿ ಚಳುವಳಿ ಮುಂದುವರೆದಿದೆ. ಸದ್ಯ ಈ ಚಳುವಳಿಗೆ 20 ವರ್ಷ ಕಳೆದಿದೆ. ಗ್ರಾಮಗಳಿಗೆ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರು ಹಾಗೂ ಮುಖಂಡರ ಜೊತೆಗೆ ಚರ್ಚೆ ನಡೆಸಿ ಬಿಲ್ ಪಾವತಿಸುವಂತೆ ಮನವೊಲಿಸಿದ್ದಾರೆ. ಆದರೆ ಇದಕ್ಕೆ ರೈತರು ಸ್ಪಂದಿಸಿಲ್ಲ. ಇದುವರೆಗೂ ಇರುವ ಬಾಕಿ ಹಣ ಮನ್ನಾ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.

ಗ್ರಾಮಸ್ಥರ ಜೊತೆ ಅಧಿಕಾರಿಗಳ ಚರ್ಚೆ

 

20 ವರ್ಷದಿಂದ ಇರುವ ವಿದ್ಯುತ್ ಬಿಲನ್ನ ಮನ್ನಾ ಮಾಡಿ ಇನ್ನೂ ಮುಂದೆ ಬಿಲ್ ಪಾವತಿಸುತ್ತೇವೆ ಅಂತಾ ಆಗ್ರಹಿಸಿದ್ದಾರೆ. ಸದ್ಯ ಈಗ ಅಷ್ಟೊಂದು ಹಣ ಕಟ್ಟಿ ಎಂದರೆ ಯಾರ ಬಳಿಯೂ ಇಲ್ಲ, ಇಲ್ಲಿ ರೈತರು ಹೆಚ್ಚಾಗಿ ಇರುವ ಕಾರಣ ಒಟ್ಟು ಹಣ ಕಟ್ಟಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ. ಒಂದು ಕುಟುಂಬಕ್ಕೆ 60 ಸಾವಿರದಿಂದ 1 ಲಕ್ಷದ ವರೆಗೆ ವಿದ್ಯುತ್ ಬಿಲ್ ಕಟ್ಟಬೇಕು ಎನ್ನಲಾಗಿದೆ. ಸದ್ಯ ಕೆಇಬಿನವರು ಬಿಲ್ ಪಾವತಿಸುವಂತೆ ಒತ್ತಾಯ ಮಾಡಿದ್ದು ರೈತರು ಇನ್ನೂ ಮುಂದೆ ಕಟ್ಟುತ್ತೇವೆ ಅಂತಾ ಹೇಳಿದ್ದಾರೆ.

ಒಟ್ಟು 1.04 ಕೋಟಿ ಹಣ ಕಟ್ಟಬೇಕಿದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಗೆ ರೈತರು ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ನಿರ್ಧಾರವಾದಲ್ಲಿ ವಿದ್ಯುತ್ ಬಿಲ್ ಮನ್ನಾವಾಗುವ ಸಾಧ್ಯತೆ ಇದೆ. ಒಟ್ಟಾರೆ ಇದುವರೆಗೂ ಉಳಿಸಿಕೊಂಡಿರುವ ಹಣವನ್ನ ಇಲಾಖೆ ಕಟ್ಟುವಂತೆ ರೈತರು ಮನವಿ ಮಾಡಿದ್ದು ಈ ಸಮಸ್ಯೆ ಹೇಗೆ ಬಗೆಹರಿಯುತ್ತೋ ಕಾದುನೋಡಬೇಕಿದೆ.

ವರದಿ- ಮಹೇಶ್

ಇದನ್ನೂ ಓದಿ: ಆಮ್ ಆದ್ಮಿ ಪಕ್ಷದಿಂದ ರಸ್ತೆ ಗುಂಡಿಗಳ ಹಬ್ಬ ಅಭಿಯಾನ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ