ಸೋಲಾರ್ ನಿರ್ಮಿಸಲು ಕಂಪನಿಗೆ ಕೊಟ್ಟ ಜಮೀನನ್ನು ಅಡವಿಟ್ಟ ಕಂಪನಿ, ರೈತರಿಂದ ತೀವ್ರ ಪ್ರತಿಭಟನೆ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ‘ಸೋಲಾರ್ ಪಾರ್ಕ್‌ಗೆ ಬಾಡಿಗೆ ನೀಡಿದ ಜಮೀನನ್ನು ಸೋಲಾರ್ ಕಂಪನಿಯವರು ಅಡಮಾನ ಇರಿಸಿ ಸಾಲ ಪಡೆದಿದ್ದಾರೆ’ ಎಂದು ಆರೋಪಿಸಿ ರೈತರು ತಾಲ್ಲೂಕಿನ ತಿರುಮಣಿಯಲ್ಲಿನ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಸೋಲಾರ್ ನಿರ್ಮಿಸಲು ಕಂಪನಿಗೆ ಕೊಟ್ಟ ಜಮೀನನ್ನು ಅಡವಿಟ್ಟ ಕಂಪನಿ, ರೈತರಿಂದ ತೀವ್ರ ಪ್ರತಿಭಟನೆ
ಸೋಲಾರ್ ನಿರ್ಮಿಸಲು ಕಂಪನಿಗೆ ಕೊಟ್ಟ ಜಮೀನನ್ನು ಅಡವಿಟ್ಟ ಕಂಪನಿ, ರೈತರಿಂದ ತೀವ್ರ ಪ್ರತಿಭಟನೆ
Updated By: ಆಯೇಷಾ ಬಾನು

Updated on: Dec 09, 2021 | 1:34 PM

ತುಮಕೂರು: ಜಿಲ್ಲೆಯ ರೈತರು ಸೋಲಾರ್ ಗೆಂದು ಜಮೀನು ನೀಡಿದ್ದರು, ನಮ್ಮ ಜಮೀನು ಗುತ್ತಿಗೆ ಆಧಾರದ ಮೇಲೆ ಇರುತ್ತಲ್ವ ಅಂತಾ ಸೋಲಾರ್ ನಿರ್ಮಿಸಲು ಜಮೀನು ನೀಡಿದ್ದರು ಆದರೆ ಸೋಲಾರ್ ಕಂಪನಿ ರೈತರಿಂದ ಜಮೀನು ಪಡೆದು ಬ್ಯಾಂಕ್ ನಲ್ಲಿ ಅಡವಿಟ್ಟು ಹಣ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ‘ಸೋಲಾರ್ ಪಾರ್ಕ್‌ಗೆ ಬಾಡಿಗೆ ನೀಡಿದ ಜಮೀನನ್ನು ಸೋಲಾರ್ ಕಂಪನಿಯವರು ಅಡಮಾನ ಇರಿಸಿ ಸಾಲ ಪಡೆದಿದ್ದಾರೆ’ ಎಂದು ಆರೋಪಿಸಿ ರೈತರು ತಾಲ್ಲೂಕಿನ ತಿರುಮಣಿಯಲ್ಲಿನ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ಗುತ್ತಿಗೆ ಕರಾರಿನ ಪ್ರಕಾರ ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ರೈತರಿಂದ ಗುತ್ತಿಗೆ ಪಡೆದ ಜಮೀನನ್ನು ಪರಭಾರೆ ಮಾಡುವಂತಿಲ್ಲ. ಅಡಮಾನ ಇಟ್ಟು ಸಾಲ ಪಡೆಯುವಂತಿಲ್ಲ. ಆದರೆ ಕಂಪನಿಯೊಂದು ಕಾನೂನು ಉಲ್ಲಂಘಿಸಿ ಅಡಮಾನ ಇಟ್ಟು ಸಾಲ ಪಡೆದಿದೆ ಎಂದು ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸದಾಶಿವರೆಡ್ಡಿ, ಪ್ರಧಾನ ಕಾರ್ಯದರ್ಶಿ ಆರ್.ಪಿ.ಸಾಂಬಸದಾಶಿವರೆಡ್ಡಿ ಆರೋಪಿಸಿದ್ದಾರೆ.

ಸರ್ಕಾರ, ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಗಮನಕ್ಕೆ ತಾರದೆ ರೈತರ ಜಮೀನನ್ನು ಮಾರ್ಟ್‌ಗೇಜ್ ಮಾಡಿರುವ ಕಂಪನಿಯ ಗುತ್ತಿಗೆಯನ್ನು ಮೂರು ದಿನಗಳೊಳಗೆ ರದ್ದುಪಡಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸೋಲಾರ್ ಕಂಪನಿಯವರ ಈ ಕ್ರಮ ಖಂಡಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಇದನ್ನ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ. ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಅಕ್ಕಲಪ್ಪ, ಸತೀಶ್, ರೈತ ಜಯರಾಮ ರೆಡ್ಡಿ, ಕೋನಪ್ಪ, ಲಕ್ಷ್ಮಿನಾರಾಯಣ, ವೆಂಕಪ್ಪ, ನಾಗಶೇಷ, ನಾರಾಯಣರೆಡ್ಡಿ, ಚಿನ್ನಯ್ಯ, ಚನ್ನಕೇಶವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಸೋಲಾರ್ ನಿರ್ಮಿಸಲು ಕಂಪನಿಗೆ ಕೊಟ್ಟ ಜಮೀನನ್ನು ಅಡವಿಟ್ಟ ಕಂಪನಿ

ವರದಿ: ಮಹೇಶ್, ಟಿವಿ9 ತುಮಕೂರು

ಇದನ್ನೂ ಓದಿ: SIM cards: ನಿಮ್ಮ ಬಳಿ ಎಷ್ಟು ಸಿಮ್​ ಕಾರ್ಡ್​ಗಳಿಷ್ಟಿವೆ? ಸಿಮ್​ ಕಾರ್ಡ್ ಸಂಖ್ಯೆ​ಗೆ ಸರ್ಕಾರದಿಂದ ಮಿತಿ; ಹೆಚ್ಚಿಗಿದ್ದಲ್ಲಿ ಕನೆಕ್ಷನ್ ಕಟ್