SIM cards: ನಿಮ್ಮ ಬಳಿ ಎಷ್ಟು ಸಿಮ್ ಕಾರ್ಡ್ಗಳಿಷ್ಟಿವೆ? ಸಿಮ್ ಕಾರ್ಡ್ ಸಂಖ್ಯೆಗೆ ಸರ್ಕಾರದಿಂದ ಮಿತಿ; ಹೆಚ್ಚಿಗಿದ್ದಲ್ಲಿ ಕನೆಕ್ಷನ್ ಕಟ್
ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಹೊಂದಿರಬಹುದು ಎಂಬ ಬಗ್ಗೆ ಹೊಸ ಆದೇಶ ಹೊರಡಿಸಲಾಗಿದೆ. ಆಯಾ ರಾಜ್ಯಗಳಿಗೆ ತಕ್ಕಂತೆ ಇದು ಬದಲಾಗಲಿದೆ. ಆ ಬಗ್ಗೆ ವಿವರ ಇಲ್ಲಿದೆ.
ಒಂಬತ್ತಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿರುವವರ ಫೋನ್ ಸಂಪರ್ಕವನ್ನು ಕಡಿತ ಮಾಡುವಂತೆ ಕೇಂದ್ರ ಸರ್ಕಾರವು ಆದೇಶವನ್ನು ಹೊರಡಿಸಿದೆ. ದೂರಸಂಪರ್ಕ ಇಲಾಖೆಯ (DoT) ಇತ್ತೀಚಿನ ಆದೇಶದ ಪ್ರಕಾರ, ಅಧಿಕಾರಿಗಳು ಮೊದಲು ಬಹು ಸಿಮ್‌ಗಳನ್ನು ಪರಿಶೀಲನೆ ಮಾಡುತ್ತಾರೆ ಮತ್ತು ಪರಿಶೀಲಿಸದಿದ್ದಲ್ಲಿ, ಒಂದನ್ನು ಹೊರತುಪಡಿಸಿ, ಎಲ್ಲ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರ, ಮತ್ತು ಈಶಾನ್ಯ ರಾಜ್ಯಗಳಲ್ಲಿ ಇರುವ ಜನರಿಗೆ ಆರು ಸಿಮ್ ಕಾರ್ಡ್‌ಗಳನ್ನು ಮರು ಪರಿಶೀಲಿಸಲಾಗುತ್ತದೆ. ಇತ್ತೀಚಿನ ಆದೇಶದ ಪ್ರಕಾರ, ಚಂದಾದಾರರಿಗೆ ಅವರು ಉಳಿಸಿಕೊಳ್ಳಲು ಬಯಸುವ ಸಂಪರ್ಕವನ್ನು ಆಯ್ಕೆ ಮಾಡಲು ಮತ್ತು ಉಳಿದ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲು ಅವಕಾಶ ನೀಡಲಾಗುತ್ತದೆ.
“DoT ನಡೆಸಿದ ಡೇಟಾ ವಿಶ್ಲೇಷಣೆಯ ಸಮಯದಲ್ಲಿ, ಒಬ್ಬ ವೈಯಕ್ತಿಕ ಚಂದಾದಾರರು ಎಲ್ಲಾ TSPಗಳಲ್ಲಿ (ಟೆಲಿಕಾಂ ಸೇವಾ ಪೂರೈಕೆದಾರರು) ಒಂಬತ್ತಕ್ಕಿಂತ ಹೆಚ್ಚು ಮೊಬೈಲ್ ಸಂಪರ್ಕಗಳನ್ನು (ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಮತ್ತು ಅಸ್ಸಾಂ LSAಗಳ ಸಂದರ್ಭದಲ್ಲಿ ಆರು) ಹೊಂದಿರುವುದು ಕಂಡುಬಂದರೆ ಎಲ್ಲ ಮರು-ಪರಿಶೀಲನೆಗಾಗಿ ಮೊಬೈಲ್ ಸಂಪರ್ಕಗಳನ್ನು ಕಡಿತ ಮಾಡಲಾಗುತ್ತದೆ,” ಎಂದು ಡಿಒಟಿ ಆದೇಶದಲ್ಲಿ ತಿಳಿಸಿದೆ. ಹಣಕಾಸಿನ ಅಪರಾಧಗಳು, ತೊಂದರೆ ನೀಡುವಂಥ ಕರೆಗಳು, ಸ್ವಯಂಚಾಲಿತ ಕರೆಗಳು (Automated Calls) ಮತ್ತು ಮೋಸದ ಚಟುವಟಿಕೆಗಳ ಘಟನೆಗಳನ್ನು ಪರಿಶೀಲಿಸಲು ಈ ಕ್ರಮ ಬಂದಿದೆ. ನಿಯಮದ ಪ್ರಕಾರ, ಬಳಕೆಯಲ್ಲಿ ಇಲ್ಲದ- ಎಲ್ಲಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್‌ನಿಂದ ತೆಗೆದುಹಾಕಲು ಟೆಲಿಕಾಂ ಆಪರೇಟರ್‌ಗಳಿಗೆ ದೂರಸಂಪರ್ಕ ಇಲಾಖೆ ಕೇಳಿದೆ.
ನಿಯಮದ ಪ್ರಕಾರ, “ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕದ ಹೊರಹೋಗುವ (ಡೇಟಾ ಸೇವೆಗಳನ್ನು ಒಳಗೊಂಡಂತೆ) ಸೌಲಭ್ಯಗಳನ್ನು 30 ದಿನಗಳಲ್ಲಿ ಸ್ಥಗಿತಗೊಳಿಸಲಾಗುತ್ತದೆ” ಮತ್ತು ಚಂದಾದಾರರು ಪರಿಶೀಲನೆಗೆ ಹಾಜರಾಗದೆ ಇದ್ದರೆ ಮತ್ತು ಅವರ ಆಯ್ಕೆಯನ್ನು ಸರೆಂಡರ್ ಮಾಡಲು, ಮೊಬೈಲ್ ಸಂಪರ್ಕ ಕಡಿತಗೊಳಿಸಲು ವರ್ಗಾಯಿಸಲು ಚಲಾಯಿಸಿದರೆ “ಒಳಬರುವ ಸೇವೆಯನ್ನು 45 ದಿನಗಳಲ್ಲಿ ಸ್ಥಗಿತಗೊಳಿಸಲಾಗುತ್ತದೆ”. ಯಾವುದೇ ಚಂದಾದಾರರು ಮರು-ಪರಿಶೀಲನೆಗೆ ಬಾರದಿದ್ದಲ್ಲಿ ಫ್ಲ್ಯಾಗ್ ಮಾಡಿದ ಸಂಖ್ಯೆಯನ್ನು ಡಿಸೆಂಬರ್ 7ರಿಂದ 60 ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ.
“ಅಂತರರಾಷ್ಟ್ರೀಯ ರೋಮಿಂಗ್‌ನಲ್ಲಿರುವ ಅಥವಾ ದೈಹಿಕ ಅಂಗವೈಕಲ್ಯ ಅಥವಾ ಆಸ್ಪತ್ರೆಗೆ ದಾಖಲಾದ ಚಂದಾದಾರರಿಗೆ ಹೆಚ್ಚುವರಿ 30 ದಿನಗಳನ್ನು ಒದಗಿಸಲಾಗುತ್ತದೆ,” ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೂ ಯಾವುದೇ ಕಾನೂನು ಜಾರಿ ಸಂಸ್ಥೆಗಳು ಅಥವಾ ಹಣಕಾಸು ಸಂಸ್ಥೆಗಳು ಸಂಖ್ಯೆಯನ್ನು ಫ್ಲ್ಯಾಗ್ ಮಾಡಿದ್ದರೆ ಅಥವಾ ತೊಂದರೆಗೊಳಗಾದ ಕರೆ ಮಾಡುವವರೆಂದು ಗುರುತಿಸಿದ್ದರೆ, ಹೊರಹೋಗುವ ಸೌಲಭ್ಯಗಳನ್ನು 5 ದಿನಗಳಲ್ಲಿ ಸ್ಥಗಿತಗೊಳಿಸಲಾಗುತ್ತದೆ, 10 ದಿನಗಳಲ್ಲಿ ಒಳಬರುತ್ತದೆ ಮತ್ತು ಯಾರೂ ಬಾರದಿದ್ದಲ್ಲಿ 15 ದಿನಗಳಲ್ಲಿ ಸಂಪೂರ್ಣ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಪರಿಶೀಲನೆ.
ಇದನ್ನೂ ಓದಿ: Mobile SIM Card : ಕೇಂದ್ರದ ಹೊಸ ಆದೇಶದಿಂದ ಮನೆ ಬಾಗಿಲಿಗೆ ತಲುಪಲಿದೆ ಮೊಬೈಲ್ ಸಿಮ್ ಕಾರ್ಡ್