Google: ಗೂಗಲ್​ನಿಂದ ಉದ್ಯೋಗಿಗಳಿಗೆ 1,21,000 ರೂಪಾಯಿ ಒಂದು ಸಲದ ನಗದು ಬೋನಸ್ ಘೋಷಣೆ

ಆಲ್ಫಾಬೆಟ್ ಇಂಕ್​ನ ಗೂಗಲ್​ ತನ್ನ ಉದ್ಯೋಗಿಗಳಿಗೆ ಒಂದು ಸಲದ ಬೋನಸ್ 1,21,000 ರೂಪಾಯಿ ಘೋಷಣೆ ಮಾಡಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Google: ಗೂಗಲ್​ನಿಂದ ಉದ್ಯೋಗಿಗಳಿಗೆ 1,21,000 ರೂಪಾಯಿ ಒಂದು ಸಲದ ನಗದು ಬೋನಸ್ ಘೋಷಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 09, 2021 | 11:17 AM

ಆಲ್ಫಾಬೆಟ್ ಇಂಕ್‌ಗೆ ಸೇರಿದ ಗೂಗಲ್ ಈ ವರ್ಷ ಜಾಗತಿಕವಾಗಿ ತನ್ನ ಉದ್ಯೋಗಿಗಳಿಗೆ ಹೆಚ್ಚುವರಿ ಬೋನಸ್ ನೀಡುವುದಾಗಿ ಬುಧವಾರ ಘೋಷಣೆ ಮಾಡಿದೆ. ಏಕೆಂದರೆ ಟೆಕ್ ದೈತ್ಯ ಕಂಪೆನಿ ಗೂಗಲ್ ತನ್ನ ರಿಟರ್ನ್-ಟು-ಆಫೀಸ್ ಯೋಜನೆಯನ್ನು ಹಿಂದಕ್ಕೆ ತಳ್ಳಿದೆ. ಕಂಪೆನಿಯ ದೊಡ್ಡ ಸಂಖ್ಯೆಯಲ್ಲಿನ ಸಿಬ್ಬಂದಿ ಮತ್ತು ಇಂಟರ್ನ್‌ಗಳು ಸೇರಿದಂತೆ ಎಲ್ಲ ಉದ್ಯೋಗಿಗಳಿಗೆ ಈ ತಿಂಗಳು ತಮ್ಮ ದೇಶದಲ್ಲಿ 1,600 ಅಮೆರಿಕನ್ ಡಾಲರ್ ಅಥವಾ ಸಮಾನ ಮೌಲ್ಯದ ಒಂದು-ಬಾರಿಯ ನಗದು ಬೋನಸ್ ಅನ್ನು ಗೂಗಲ್ ನೀಡುತ್ತದೆ ಎಂದು ಕಂಪೆನಿಯ ವಕ್ತಾರರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಉದ್ಯೋಗಿಗಳನ್ನು ಬೆಂಬಲಿಸುವ ಸಲುವಾಗಿ ಗೂಗಲ್​ನಿಂದ ಮನೆಯಿಂದ ಕೆಲಸದ ಭತ್ಯೆ ಮತ್ತು ಯೋಗಕ್ಷೇಮದ ಬೋನಸ್ ನೀಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಬೆನಿಫಿಟ್​ ಘೋಷಣೆ ಮಾಡಿದೆ. ಕಂಪೆನಿಯು ಈ ಉದ್ದೇಶಕ್ಕಾಗಿ ಒಟ್ಟು ಎಷ್ಟು ಮೊತ್ತ ಮೀಸಲಿಟ್ಟಿದೆ ಎಂಬುದರ ಕುರಿತು ವಿವರಗಳನ್ನು ನೀಡದೆ ವಕ್ತಾರರು ಮಾಹಿತಿ ತಿಳಿಸಿದ್ದಾರೆ. 2021ರ ಮಾರ್ಚ್‌ನಲ್ಲಿ ಗೂಗಲ್​ನ ಆಂತರಿಕ ಸಮೀಕ್ಷೆಯು ಕಳೆದ ವರ್ಷದಲ್ಲಿ ತನ್ನ ಉದ್ಯೋಗಿ ಯೋಗಕ್ಷೇಮದಲ್ಲಿ ಕುಸಿತವನ್ನು ತೋರಿಸಿದೆ. ಅದರ ನಂತರ ಕಂಪೆನಿಯು 500 ಯುಎಸ್​ಡಿ ಯೋಗಕ್ಷೇಮದ ನಗದು ಬೋನಸ್ ಸೇರಿ ಹಲವು ಬೆನಿಫಿಟ್​ಗಳನ್ನು ಘೋಷಿಸಿತು.

ಕಳೆದ ವಾರ ಒಮಿಕ್ರಾನ್ ವೇರಿಯಂಟ್ ಆತಂಕಗಳು ಮತ್ತು ಕಂಪೆನಿ-ಆದೇಶದ ಲಸಿಕೆಗಳಿಗೆ ತನ್ನ ಉದ್ಯೋಗಿಗಳಿಂದ ಪ್ರತಿರೋಧದ ಮಧ್ಯೆ ಗೂಗಲ್ ತನ್ನ ಕಚೇರಿಗೆ ಹಿಂತಿರುಗುವ ಯೋಜನೆಯನ್ನು ಅನಿರ್ದಿಷ್ಟವಾಗಿ ಮುಂದಕ್ಕೆ ಹಾಕಿತು. ಜನವರಿ 10ರಿಂದ ಸಿಬ್ಬಂದಿ ಕಚೇರಿಗೆ ಮರಳುವ ನಿರೀಕ್ಷೆಯಿದೆ.

ಇದನ್ನೂ ಓದಿ: Google Pay: ಧ್ವನಿ ಕಮಾಂಡ್​ನಿಂದ ಬ್ಯಾಂಕ್​ ಖಾತೆಗೆ ಹಣ ವರ್ಗಾಯಿಸುವ ಫೀಚರ್ ತರಲಿದೆ ಗೂಗಲ್ ಪೇ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್