ಸೇತುವೆ ಕುಸಿತ: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಮಾಜಿ ಡಿಸಿಎಂ ಪರಮೇಶ್ವರ್
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವಲ್ಪದರಲ್ಲೇ ಭಾರಿ ಅನಾಹುತದಿಂದ ಪಾರಾಗಿದ್ದಾರೆ.
ತುಮಕೂರು: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ (G Parameshwara) ಸ್ವಲ್ಪದರಲ್ಲೇ ಭಾರಿ ಅನಾಹುತದಿಂದ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ಬಳಿಕ 5 ನಿಮಿಷಕ್ಕೆ ಕೊರಟಗೆರೆ ತಾಲ್ಲೂಕಿನ ತೀತಾ-ಗೊರವನಹಳ್ಳಿ ಸೇತುವೆ ಕುಸಿತಗೊಂಡಿದೆ. ತೀತಾ ಸೇತುವೆ ನಿನ್ನೆ (ಆ 25) ರಾತ್ರಿ ಸುರಿದ ಮಳೆಗೆ, ಇಂದು ಮುಂಜಾನೆ ಅರ್ಧ ಕುಸಿದಿತ್ತು.
ಸೇತುವೆ ಕುಸಿತ ಹಿನ್ನೆಲೆ ಇಂದು ಸಂಜೆ ಡಾ.ಜಿ ಪರಮೇಶ್ವರ್ ಭೇಟಿ ನೀಡಿದ್ದರು. ಭೇಟಿ ವೇಳೆ ಸೇತುವೆ ಮೇಲೆ ನಿಂತು ಸೇತುವೆ ಕುಸಿತವನ್ನು ವೀಕ್ಷಿಸಿದ್ದರು. ಸೇತುವೆ ವೀಕ್ಷಿಸಿ ಮುಂದೆ ಹೋದ 5 ನಿಮಿಷಕ್ಕೆ ಸೇತುವೆಯ ಇನ್ನೊಂದು ಭಾಗ ಕುಸಿತಗೊಂಡಿದ್ದು, ಪರಮೇಶ್ವರ್ ನಿಂತು ವೀಕ್ಷಿಸಿದ್ದ ಸ್ಥಳವೂ ಕುಸಿತಗೊಂಡಿದೆ. ಡಾ.ಜಿ.ಪರಮೇಶ್ವರ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 26, 2022 06:58 PM