ತುಮಕೂರು: ಹೊಲದಲ್ಲಿ ಎತ್ತೊಂದು ಕಾಲು ಮುರಿದುಕೊಂಡು ಬಿದ್ದಿತ್ತು. ಅದನ್ನು ಕಂಡು ಗೋಲಾಡುತ್ತಿದ್ದ ಎತ್ತಿನ ಮಾಲೀಕನಿಗೆ ಸಾಂತ್ವನ ಹೇಳಿ ಮಾನವೀಯತೆ ಮೆರೆದ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಬೇರೆ ಎತ್ತುಗಳನ್ನ ಖರೀದಿ ಮಾಡೋಕೆ ಹಣ ಸಹಾಯ ಮಾಡುತ್ತೇನೆ ಎಂದು ಆತನಿಗೆ ಧೈರ್ಯ ತುಂಬಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ (ಡಿಸಿಎಂ) ಡಾ. ಜಿ. ಪರಮೇಶ್ವರ್ ಅವರು ಇಂದು ತಮ್ಮ ಕೊರಟಗೆರೆ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದರು. ಆ ವೇಳೆ ಮಾರ್ಗ ಮಧ್ಯೆ, ಹೊಲದಲ್ಲಿ ಕಣ್ಣೀರು ಹಾಕಿಕೊಂಡು ರೈತನೊಬ್ಬ ಕುಳಿತಿರುವುದು ಅವರಿಗೆ ಕಂಡುಬಂದಿದೆ. ಉತ್ತಮ ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಭೂಮಿಯನ್ನು ಹದ ಮಾಡುತ್ತಿದ್ದ ವೇಳೆ ರೈತನ ಒಂದು ಎತ್ತು ಕಾಲು ಮುರಿದುಕೊಂಡು ಒದ್ದಾಡುತ್ತಿತ್ತು. ಅದನ್ನು ಕಂಡು ವಿಧಿಯಿಲ್ಲದೆ ರೈತ ಗೋಳಾಡತೊಡಗಿದ್ದ.
ಈ ಮೂಕ ವೇದನೆಯನ್ನು ಗಮನಿಸಿದ ಡಿಸಿಎಂ ಜಿ. ಪರಮೇಶ್ವರ್ ಅವರು ರೈತನ ಬಳಿ ಧಾವಿಸಿದರು. ಅನ್ನದಾತನನ್ನು ಸಮಾಧಾನ ಪಡಿಸಿದ ಪರಮೇಶ್ವರ್, ಬೇರೆ ಎತ್ತುಗಳನ್ನ ಖರೀದಿ ಮಾಡೋಕೆ ಹಣ ಸಹಾಯ ಮಾಡುತ್ತೇನೆ, ಧೈರ್ಯವಾಗಿರು ಎಂದು ಧೈರ್ಯ ತುಂಬಿದ್ದಾರೆ. ಕೊರಟಗೆರೆ ತಾಲೂಕಿನ ಚಿಂಪಗಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು.. ಜಾತ್ರೆಯಲ್ಲಿ ಮಹಿಳೆಯರಿಗೆ ಬಳೆ ಕೊಡಿಸಿದ ಮಾಜಿ ಡಿಸಿಎಂ ಪರಮೇಶ್ವರ್
(former dcm dr g parameshwar lends helping hand to a farmer in a village in koratagere)