ಪಾವಗಡ: ಗ್ಯಾಸ್​ ಟ್ಯಾಂಕರ್ ಪಲ್ಟಿ, ಅನಿಲ ಸೋರಿಕೆಯಿಂದ ಸ್ಥಳೀಯರಲ್ಲಿ ಆತಂಕ

ಪಾವಗಡ: ಗ್ಯಾಸ್​ ಟ್ಯಾಂಕರ್ ಪಲ್ಟಿ, ಅನಿಲ ಸೋರಿಕೆಯಿಂದ ಸ್ಥಳೀಯರಲ್ಲಿ ಆತಂಕ

ತುಮಕೂರು: ಪಾವಗಡ ತಾಲೂಕಿನ ದೊಮ್ಮತಮರಿ ಗ್ರಾಮದ ಬಳಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ನಡೆದಿದೆ. ರಸ್ತೆ ಬದಿ ಉರುಳಿಬಿದ್ದ ಟ್ಯಾಂಕರ್​ನಿಂದ ಅನಿಲ ಸೋರಿಕೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕುಣಿಗಲ್​ನಿಂದ ಅನಂತಪುರಕ್ಕೆ ಗ್ಯಾಸ್ ಟ್ಯಾಂಕರ್ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ.

Published On - 4:45 pm, Mon, 27 April 20

Click on your DTH Provider to Add TV9 Kannada