ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಅಲ್ಲ; ಆಕೆಯ ಗಂಡನ ಕಾರುಬಾರು – ಮಿಡಿಗೇಶಿ ಗ್ರಾಮಸ್ಥರಿಂದ ಪ್ರತಿಭಟನೆ

| Updated By: ಸಾಧು ಶ್ರೀನಾಥ್​

Updated on: Dec 25, 2021 | 10:26 AM

ತುಮಕೂರು: ಗ್ರಾಮ ಪಂಚಾಯತಿಯಲ್ಲಿ ಹಲವಾರು ಕಡೆ ಪತಿಯರ ಹಸ್ತಕ್ಷೇಪ ಇರುವುದು ಸಾಮಾನ್ಯವಾಗುತ್ತಿದೆ. ಪ್ರತಿಯೊಂದು ಕೂಡ ಪತ್ನಿಯ ಹೆಸರಲ್ಲಿ ಗ್ರಾಮ ಪಂಚಾಯತಿಯಲ್ಲಿ ಅಧಿಕಾರ‌ ಮಾಡೋದು, ದಬ್ಬಾಳಿಕೆ ಮಾಡೋದು ಕೂಡ ಹಲವೆಡೆ ಕಂಡು ಬಂದಿದೆ. ಸದ್ಯ ಇಂತಹ ಪ್ರಕರಣ ತುಮಕೂರು ಜಿಲ್ಲೆಯಲ್ಲಿಯೂ ಕಂಡುಬಂದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಪ್ರೇಮಲತಾ ಹಾಗೂ ಪತಿ ರವಿಕುಮಾರ್ ಅಧಿಕಾರ ದುರುಪಯೋಗ ಮಾಡಿಕೊಳ್ತಿದ್ದಾರೆ ಎನ್ನೋ‌ ಆರೋಪ ಕೇಳಿಬಂದಿದೆ. ಪ್ರೇಮಲತಾ ಪತಿ ರವಿಕುಮಾರ್ ಪತ್ನಿ ಹೆಸರಿನಲ್ಲಿ ಅಧಿಕಾರ ಚಲಾಯಿಸುತ್ತಿರುವ ಆರೋಪ […]

ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಅಲ್ಲ; ಆಕೆಯ ಗಂಡನ ಕಾರುಬಾರು - ಮಿಡಿಗೇಶಿ ಗ್ರಾಮಸ್ಥರಿಂದ ಪ್ರತಿಭಟನೆ
ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಅಲ್ಲ; ಆಕೆಯ ಗಂಡನ ಕಾರುಬಾರು, ಗ್ರಾಮಸ್ಥರಿಂದ ಪ್ರತಿಭಟನೆ
Follow us on

ತುಮಕೂರು: ಗ್ರಾಮ ಪಂಚಾಯತಿಯಲ್ಲಿ ಹಲವಾರು ಕಡೆ ಪತಿಯರ ಹಸ್ತಕ್ಷೇಪ ಇರುವುದು ಸಾಮಾನ್ಯವಾಗುತ್ತಿದೆ. ಪ್ರತಿಯೊಂದು ಕೂಡ ಪತ್ನಿಯ ಹೆಸರಲ್ಲಿ ಗ್ರಾಮ ಪಂಚಾಯತಿಯಲ್ಲಿ ಅಧಿಕಾರ‌ ಮಾಡೋದು, ದಬ್ಬಾಳಿಕೆ ಮಾಡೋದು ಕೂಡ ಹಲವೆಡೆ ಕಂಡು ಬಂದಿದೆ. ಸದ್ಯ ಇಂತಹ ಪ್ರಕರಣ ತುಮಕೂರು ಜಿಲ್ಲೆಯಲ್ಲಿಯೂ ಕಂಡುಬಂದಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಪ್ರೇಮಲತಾ ಹಾಗೂ ಪತಿ ರವಿಕುಮಾರ್ ಅಧಿಕಾರ ದುರುಪಯೋಗ ಮಾಡಿಕೊಳ್ತಿದ್ದಾರೆ ಎನ್ನೋ‌ ಆರೋಪ ಕೇಳಿಬಂದಿದೆ. ಪ್ರೇಮಲತಾ ಪತಿ ರವಿಕುಮಾರ್ ಪತ್ನಿ ಹೆಸರಿನಲ್ಲಿ ಅಧಿಕಾರ ಚಲಾಯಿಸುತ್ತಿರುವ ಆರೋಪ ಕೇಳಿಬಂದಿದೆ. ಅಧ್ಯಕ್ಷೆ ಹಾಗೂ ಪತಿ ವಿರುದ್ಧ ಗ್ರಾಮಸ್ಥರು ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮ ಪಂಚಾಯತಿಯಲ್ಲಿ ಅನುದಾನ ದುರುಪಯೋಗ ಹಾಗೂ 15 ನೇ ಹಣಕಾಸು ಯೋಜನೆ ಅಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ನರೇಗಾ ಯೋಜನೆಯಲ್ಲಿಯೂ ಕೂಡ ಅವ್ಯವಹಾರ ನಡೆಸಿದ್ದಾರೆ ಅಂತಾ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಮಿಡಿಗೇಶಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದ್ದು ಅಧ್ಯಕ್ಷೆ ಪ್ರೇಮಲತಾ ಹಾಗೂ ಅವರ ಪತಿ ರವಿಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಪಾಧ್ಯಕ್ಷರು ಕೂಡ ಅಧಿಕಾರ ದುರುಪಯೋಗ ಮಾಡಿಕೊಳ್ತಿದ್ದಾರೆ. ಕೂಡಲೇ ಸರಿಪಡಿಸಿಬೇಕು ಎಂದು ಒತ್ತಾಯಿಸಿದ್ದಾರೆ. (ಮಹೇಶ್, ಟಿವಿ 9)

ಕೆಎಸ್​ಆರ್​​ಟಿಸಿ ಬಸ್ಸಿನಲ್ಲಿ ಹೃದಯಾಘಾತ, ನಿರ್ವಾಹಕ ಸಾವು
ಚಿಕ್ಕಮಗಳೂರು: ವಿರಳ ಸಾವೊಂದು ಸಂಚರಿಸುತ್ತಿದ್ದ ಬಸ್​ನಲ್ಲಿ ಬಂದೆರಗಿದೆ. ನಿರ್ವಾಹಕರೊಬ್ಬರು ಬಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಲಯಮಾರುತ ಬಳಿ ಘಟನೆ ನಡೆದಿದೆ. ವಿಜಯ್ (43) ಹೃದಯಾಘಾತದಿಂದ ಸಾವನ್ನಪ್ಪಿರುವ ನಿರ್ವಾಹಕ. ವಿಜಯ್ ಚಿಕ್ಕಮಗಳೂರು-ಉಡುಪಿ ಕೆಎಸ್​ಆರ್​​ಟಿಸಿ (KSRTC) ಬಸ್ ನಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ಬೆಳಗ್ಗೆ 6.30ಕ್ಕೆ ಚಿಕ್ಕಮಗಳೂರಿನಿಂದ ಉಡುಪಿ ಕಡೆ ಹೊರಟಿದ್ದ ಬಸ್​ನಲ್ಲಿ ಈ ಘಟನೆ ನಡೆದಿದೆ.

ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟ ಆರೋಪ:
ಕಲಬುರಗಿ: ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟ ಆರೋಪ ಎದುರಾಗಿದೆ. ಕಲಬುರಗಿಯ ಕರುಣೇಶ್ವರ ಬಡಾವಣೆಯಲ್ಲಿರುವ ಡಾ. ಜಂಪಾ ಕ್ಲಿನಿಕ್ ವಿರುದ್ಧ ಮೃತಳ ಕುಟುಂಬಸ್ಥರು ಈ ಆರೋಪ ಮಾಡಿದ್ದಾರೆ. ಕಲಬುರಗಿ ತಾಲೂಕಿನ ಇಟಗಾದ ನಾಗಮ್ಮ ಬಾಗೋಡಿ (45) ಎಂಬುವವರಿಗೆ ಇದೇ ಕ್ಲಿನಿಕ್‌ನಲ್ಲಿ 3 ದಿನದ ಹಿಂದೆ ಗರ್ಭಕೋಶ ಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆ ಬಳಿಕ ನಾಗಮ್ಮ ಬಾಗೋಡಿ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಕಳೆದ ರಾತ್ರಿ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಾಗಮ್ಮ ಮೃತಪಟ್ಟಿದ್ದಾರೆ.

ಇದನ್ನೂ ಓದಿ:

Nagshekar: 50 ಲಕ್ಷ ರೂ ವಂಚನೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಖ್ಯಾತ ನಿರ್ದೇಶಕ ನಾಗಶೇಖರ್

ಕಲಬುರಗಿ: 2009ರಲ್ಲಿ ಸುಳ್ಳು ದಾಖಲಾತಿ ನೀಡಿ ಬ್ಯಾಂಕ್​ನಿಂದ 1.35 ಕೋಟಿ ರೂ. ಸಾಲ ಪಡೆದು ವಂಚನೆ; ಪ್ರಕರಣ ಬೆನ್ನತ್ತಿದ್ದ ಸಿಬಿಐ

Published On - 10:15 am, Sat, 25 December 21