Karnataka Rain: ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಗೊರವನಹಳ್ಳಿ ಬಳಿ ಇರುವ ತೀತಾ ಸೇತುವೆ ಸಂಪೂರ್ಣ ಕುಸಿತ

ಕೊರಟಗೆರೆ ತಾಲೂಕಿನಲ್ಲಿ ಭಾರೀ ಮಳೆಯಿಂದ ಗೊರವನಹಳ್ಳಿ ಬಳಿ ಇರುವ ತೀತಾ ಸೇತುವೆ ಕುಸಿತಗೊಂಡಿದೆ.

Karnataka Rain: ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಗೊರವನಹಳ್ಳಿ ಬಳಿ ಇರುವ ತೀತಾ ಸೇತುವೆ ಸಂಪೂರ್ಣ ಕುಸಿತ
ಸೇತುವೆ ಕುಸಿತ
Edited By:

Updated on: Aug 27, 2022 | 2:33 PM

ತುಮಕೂರು: ಕೊರಟಗೆರೆ ತಾಲೂಕಿನಲ್ಲಿ ಭಾರೀ ಮಳೆಯಿಂದ (Rain) ಗೊರವನಹಳ್ಳಿ ಬಳಿ ಇರುವ ತೀತಾ ಸೇತುವೆ (Bridge) ಕುಸಿತಗೊಂಡಿದೆ. ಇದರಿಂದ ಕೊರಟಗೆರೆ, ಗೊರವನಹಳ್ಳಿ, ತೀತಾ, ತೊಂಡೆಬಾವಿ ರಸ್ತೆ ಬಂದಾಗಿದೆ. ನಿನ್ನೆ ಬೆಳಿಗ್ಗೆ ಅರ್ಧ ಭಾಗ ಕುಸಿದಿತ್ತು ಹೀಗಾಗಿ ಕೊರಟಗೆರೆ ಶಾಸಕ ಮಾಜಿ ಡಿಸಿಎಂ ಜಿ. ಪರಮೇಶ್ವರ್ (G Parmeshwara) ಭೇಟಿ ನೀಡಿ ವೀಕ್ಷಿಸಿದ್ದರು.

ಜಿ. ಪರಮೇಶ್ವರ್ ವೀಕ್ಷಿಸಿ ತರೆಳಿದ ಐದೇ ನಿಮಿಷದಕ್ಕೆ ಸಂಜೆ ವೇಳೆಗೆ ಸಂಪೂರ್ಣ ಕುಸಿತವಾಗಿದೆ. ಈ ಸಂಬಂಧ ಪಿಡಬ್ಲುಡಿ ಇಲಾಖೆ ಸದ್ಯ ಎರಡು ಕಡೆ ಓಡಾಟಕ್ಕೆ ಮಣ್ಣಿನ ದಿಬ್ಬ ಹೇರಿ ನಿರ್ಬಂಧ ಹೇರಿದೆ. ಇದರಿಂದ ಜನರು ಮತ್ತು ವಿದ್ಯಾರ್ಥಿಗಳು ಕೊರಟಗೆರೆ, ತುಮಕೂಗೆ 15 ಕಿಲೋಮೀಟರ್ ಸುತ್ತುವರಿದು ಬರಬೇಕಿದೆ.

ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಮಾಜಿ ಡಿಸಿಎಂ ಪರಮೇಶ್ವರ್

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವಲ್ಪದರಲ್ಲೇ ಭಾರಿ ಅನಾಹುತದಿಂದ ಪಾರಾಗಿದ್ದಾರೆ. ನಿನ್ನೆ (ಆ 26) ಪರಮೇಶ್ವರ್ ಅರ್ಧ ಕುಸಿದಿದ್ದ ತೀತಾ-ಗೊರವನಹಳ್ಳಿ ಸೇತುವೆಗೆ ಭೇಟಿ ನೀಡಿದ್ದರು, ಭೇಟಿ ನೀಡಿ  5 ನಿಮಿಷದ ಬಳಿಕ  ಸೇತುವೆ ಕುಸಿತಗೊಂಡಿದೆ. ತೀತಾ ಸೇತುವೆ (ಆ 25) ರಾತ್ರಿ ಸುರಿದ ಮಳೆಗೆ, ಶುಕ್ರವಾರ ಮುಂಜಾನೆ ಸೇತುವೆ ಅರ್ಧ ಕುಸಿದಿತ್ತು.

ಸೇತುವೆ ಕುಸಿತ ಹಿನ್ನೆಲೆ ಶುಕ್ರವಾರ ಸಂಜೆ ಡಾ.ಜಿ ಪರಮೇಶ್ವರ್ ಭೇಟಿ ನೀಡಿದ್ದರು. ಭೇಟಿ ವೇಳೆ ಸೇತುವೆ ಮೇಲೆ ನಿಂತು ಸೇತುವೆ ಕುಸಿತವನ್ನು ವೀಕ್ಷಿಸಿದ್ದರು. ಸೇತುವೆ ವೀಕ್ಷಿಸಿ ಮುಂದೆ ಹೋದ 5 ನಿಮಿಷಕ್ಕೆ ಸೇತುವೆಯ ಇನ್ನೊಂದು ಭಾಗ ಕುಸಿತಗೊಂಡಿದ್ದು, ಪರಮೇಶ್ವರ್ ನಿಂತು ವೀಕ್ಷಿಸಿದ್ದ ಸ್ಥಳವೂ ಕುಸಿತಗೊಂಡಿತ್ತು. ಡಾ.ಜಿ.ಪರಮೇಶ್ವರ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು. ಸದ್ಯ ಸಂಪೂರ್ಣ ಸೇತುವೆ ಕುಸಿತಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Sat, 27 August 22