Rama Navami 2022: ತುಮಕೂರಿನಲ್ಲಿ ಕೇಸರಿ ಶಾಲು ಧರಿಸಿ ಪಾನಕ ಹಂಚಿ ರಾಮನವಮಿ ಆಚರಿಸಿದ ಹಿಂದೂ ಮುಸ್ಲಿಮರು

| Updated By: ಆಯೇಷಾ ಬಾನು

Updated on: Apr 10, 2022 | 12:20 PM

ಹಿಂದೂ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರೀರಾಮನವಮಿ ಆಚರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟರೆ ಮುಸ್ಲಿಮರು ಟೋಪಿ ಧರಿಸಿ ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

Rama Navami 2022: ತುಮಕೂರಿನಲ್ಲಿ ಕೇಸರಿ ಶಾಲು ಧರಿಸಿ ಪಾನಕ ಹಂಚಿ ರಾಮನವಮಿ ಆಚರಿಸಿದ ಹಿಂದೂ ಮುಸ್ಲಿಮರು
Rama Navami 2022: ತುಮಕೂರಿನಲ್ಲಿ ಕೇಸರಿ ಶಾಲು ಧರಿಸಿ ಪಾನಕ ಹಂಚಿ ರಾಮನವಮಿ ಆಚರಿಸಿದ ಹಿಂದೂ ಮುಸ್ಲಿಮರು
Follow us on

ತುಮಕೂರು: ರಾಜ್ಯದಲ್ಲಿಂದು ಶ್ರೀರಾಮನವಮಿ ಸಂಭ್ರಮ ಜೋರಾಗಿದೆ. ಧರ್ಮಗಳನ್ನು ಮರೆತು ಹಿಂದೂ ಮುಸ್ಲಿಮರು ಪಾನಕ, ಮಜ್ಜಿಗೆ ನೀಡಿ ಸಂಭ್ರಮಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ತುಮಕೂರಿನ ಭದ್ರಮ್ಮ ಸರ್ಕಲ್ನಲ್ಲೂ ಇದೇ ರೀತಿಯ ದೃಶ್ಯಗಳು ಕಂಡು ಬಂದಿವೆ. ರಾಮನವಮಿ ಹಿನ್ನೆಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟು ಜೈ ಶ್ರೀರಾಮ್ ಎಂದು‌ ಘೋಷಣೆ ಕೂಗುತ್ತ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸುತ್ತಿದ್ದಾರೆ. ಇದೇ ವೇಳೆ ಮುಸ್ಲಿಂ ಯುವಕರೂ ಸಹ ಅವರೊಂದಿಗೆ ಕೈ ಜೋಡಿಸಿದ್ದಾರೆ.

ಹಿಂದೂ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರೀರಾಮನವಮಿ ಆಚರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟರೆ ಮುಸ್ಲಿಮರು ಟೋಪಿ ಧರಿಸಿ ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸಾರ್ವಜನಿಕರಿಗೆ ಪಾನಕ ಹಂಚಿ ಸಂಭ್ರಮಿಸುತ್ತಿದ್ದಾರೆ. ಹಿಂದೂ ಮುಸ್ಲಿಂ ಎಲ್ಲರೂ ಒಂದೆ. ನಮ್ಮಲ್ಲಿ ಭೇದ-ಭಾವವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟರೆ ಮುಸ್ಲಿಮರು ಟೋಪಿ ಧರಿಸಿ ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ

ರಾಮನವಮಿಗೆ ಮುಸ್ಲಿಂ ವ್ಯಕ್ತಿಯ ನಿಸ್ವಾರ್ಥ ಸೇವೆ
ಇನ್ನು ಮತ್ತೊಂದೆಡೆ ಬೆಂಗಳೂರಿನ ರಾಜಾಜಿನಗರದ ರಾಮಮಂದಿರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಮುಸ್ಲಿಂ ವ್ಯಕ್ತಿ ನಿಸ್ವಾರ್ಥ ಸೇವೆ ಮಾಡಿ ಮಾದರಿಯಾಗಿದ್ದಾರೆ. 52 ವರ್ಷ ವಯಸ್ಸಿನ ಹುಸೇನ್ ಎಂಬ ಮುಸ್ಲಿಂ ವ್ಯಕ್ತಿ ಹಲವು ವರ್ಷಗಳಿಂದ ರಾಮನವಮಿಯಂದು ಈ ರೀತಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಪ್ರತಿ ರಾಮನವಮಿಯ ಹಿಂದಿನ ದಿನ ದೇವಸ್ಥಾನದಲ್ಲಿ ಕೆಲಸ ಮಾಡಲು ಹಾಜರಾಗುತ್ತಾರೆ. ಧೂಳು, ಕ್ಲೀನ್ ಮಾಡುವುದು, ರಥ ತೊಳೆಯುವ ಕಾಯಕ ಈ ರೀತಿ ಸೇವೆ ಮಾಡಿ ಯಾವುದೇ ಹಣ ಪಡೆಯದೆ ಹಲವು ವರ್ಷಗಳಿಂದ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷದಂತೆ ನಿನ್ನೆಯೂ ಸಿದ್ಧತೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಇಂದು ನಾಡಿನೆಲ್ಲೆಡೆ ರಾಮ ನವಮಿ ಹಬ್ಬದ ಸಂಭ್ರಮ; ದೇವರಿಗೆ ವಿಶೇಷ ಪೂಜೆ

ಯಶ್​ ಮಾತ್ರವಲ್ಲ, ಫ್ಯಾನ್ಸ್​ ಕೂಡ ಮಾಡ್ತಿದ್ದಾರೆ ದಾಖಲೆ; ಸಿದ್ಧವಾಗ್ತಿದೆ ಅತಿ ದೊಡ್ಡ ಮೊಸಾಯಿಕ್​ ಪೋಟ್ರೇಟ್

Published On - 11:12 am, Sun, 10 April 22