ಹಣದ ಆಸೆಗೆ ತಂಡ ಕಟ್ಟಿ ಹೆಂಡತಿಯ ಮೇಲೆಯೆ ಹೀನಾಯ ಕೃತ್ಯ; ಪತಿ ಸೇರಿ 6 ಜನ ಅರೆಸ್ಟ್
ಬೆಂಗಳೂರಿನಿಂದ ಜನ್ನೆನಹಳ್ಳಿಗೆ ಬಂದ ವೈರಮುಡಿ ಪತ್ನಿ ಹಾಗೂ ತಾಯಿ ಮಹಾದೇವಮ್ಮ, ಏನೋ ಮಾತುಕತೆ ಮಾಡಬಹುದು ಇನ್ನಾದರೂ ಬಗೆಹರಿಯಬಹದು ಅಂತಾ ಅಂದುಕೊಂಡಿದ್ದರು, ಆದರೆ ಬೇರೆ ಕಡೆ ಕುಳಿತು ಮಾತನಾಡೋಣ ಬಾ ಎಂದು ಕರೆದು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.
ತುಮಕೂರು: ಹಣದಾಸೆಗೆ ಹೆಂಡತಿಯನ್ನೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಲ್ಪತರು ನಾಡು ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜನ್ನೇನಹಳ್ಳಿ ಗ್ರಾಮದ ವೈರಮುಡಿ ಹಾಗೂ ಮಮತಾ ಕಳೆದ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಸುಂದರ ಸಂಸಾರ ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ ಕಳೆದ ಒಂದು ವರ್ಷದಿಂದ ಪರಸ್ಪರ ಗಲಾಟೆ ಮಾಡಿಕೊಂಡು ದೂರವಾಗಿದ್ದಾರೆ. ಗಂಡ ವೈರಮುಡಿ ತುಮಕೂರಿನಲ್ಲಿದ್ದರೆ ಮಮತಾ ಬೆಂಗಳೂರಿನಲ್ಲಿ ವಾಸವಾಗಿದ್ದಳು.
6 ಲಕ್ಷ ಹಣಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಪತಿ ವೈರಮುಡಿ ಹಾಗೂ ಮಮತ ಬೆಂಗಳೂರಿನ ಕಡಬಗೆರೆ ಕ್ರಾಸ್ ನಲ್ಲಿ 12 ಲಕ್ಷಕ್ಕೆ ಮನೆಯೊಂದನ್ನ ಖರೀದಿಸಿದ್ದರು. ಆಗ ತಲಾ 6 ಲಕ್ಷ ಹಾಕಿ ಮನೆಕೊಂಡು ಸಂಸಾರ ಮಾಡುತ್ತಿದ್ದರು ಆದರೆ ಜಗಳಗಳಿಂದ ಇಬ್ಬರು ದೂರವಾಗಿ ಪ್ರತ್ಯೇಕವಾಗಿದ್ದಾರೆ. ಆಗ ಆಸ್ತಿ ವಿಚಾರಕ್ಕೆ ಜಗಳ ಶುರುವಾಗಿದೆ. ಜೊತೆಗೆ ದೂರವಿದ್ದ ಕಾರಣ ತುಮಕೂರಿನಲ್ಲಿರುವ ಆಸ್ತಿಯ ಮೇಲೂ ಮಮತಾ ಕಣ್ಣು ಹಾಕಬಹುದೆಂದು ಊಹಿಸಿ ಆಕೆಯ ಮೇಲೆ ಹಲ್ಲೆ ನಡೆಸಲು ಪ್ಲಾನ್ ಮಾಡಿದ್ದಾರೆ. ಅದರಂತೆ ಬೆಂಗಳೂರಿನಲ್ಲಿದ್ದ ಮಮತಾಳನ್ನ ಮಾತುಕತೆ ನಡೆಸಲು ಊರಿಗೆ ಕರೆಸಿದ್ದಾರೆ.
ಪತ್ನಿಯ ಬಟ್ಟೆ ಬಿಚ್ಚಿ ಹೊಡೆದ ಪತಿರಾಯ ಇನ್ನೂ ಬೆಂಗಳೂರಿನಿಂದ ಜನ್ನೆನಹಳ್ಳಿಗೆ ಬಂದ ವೈರಮುಡಿ ಪತ್ನಿ ಹಾಗೂ ತಾಯಿ ಮಹಾದೇವಮ್ಮ, ಏನೋ ಮಾತುಕತೆ ಮಾಡಬಹುದು ಇನ್ನಾದರೂ ಬಗೆಹರಿಯಬಹದು ಅಂತಾ ಅಂದುಕೊಂಡಿದ್ದರು, ಆದರೆ ಬೇರೆ ಕಡೆ ಕುಳಿತು ಮಾತನಾಡೋಣ ಬಾ ಎಂದು ಕರೆದು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ. ಮಹಿಳೆ ಅನ್ನೋದು ನೋಡದೇ ಬಟ್ಟೆ ಕಳಚಿ ಸಿಕ್ಕ ಪಟ್ಟೆ ಹಲ್ಲೆ ನಡೆಸಿದ್ದಾನೆ. ರಕ್ತ ಹೆಪ್ಪುಗಟ್ಟೋ ತರ ಹಲ್ಲೆ ಮಾಡಿದ್ದಾನೆ. ಇನ್ನು ತನ್ನ ಹೆಂಡತಿ ಅನ್ನೋದು ಲೆಕ್ಕಿಸದೆ ತಾನು ಚಿತ್ರ ಹಿಂಸೆ ನೀಡಿದ್ದಲ್ಲದೆ. ಇತರೆ ಆರು ಜನರು ಮಮತಾ ಮೇಲೆ ಹಲ್ಲೆ ನಡೆಸಿದ್ದಾರೆ. ಮಮತಾ ತಲೆ, ಕಣ್ಣು, ಎದೆಭಾಗ, ಕೈಗಳಿಗೆ ಸಿಕ್ಕ ಪಟ್ಟೆ ಗಾಯಗಳಾಗಿವೆ. ಗ್ರಾಮದಿಂದ ಹಿಡಿದು ಹೊರವಲಯದ ವರೆಗೂ ಬೀದಿಯಲ್ಲೆಲ್ಲ ಹೊಡೆದುಕೊಂಡೇ ಹೋಗಿ ಅಟ್ಟಹಾಸ ಮೆರೆದಿದ್ದಾರೆ. ದೊಣ್ಣೆ, ಇಟ್ಟಿನ ಕಟ್ಟಿಗೆಗಳಿಂದ ಮಮತಾಳ ಮೇಲೆ ಹಲ್ಲೆ ನಡೆದಿದ್ದು ಕೂಗಾಡಿ, ಚಿರಾಡಿದರೂ ಪಾಪಿಗಳು ಹೊಡೆಯುವುದನ್ನು ನಿಲ್ಲಿಸಿಲ್ಲ. ಇನ್ನು ಜೊತೆಯಲ್ಲಿದ್ದ ಅತ್ತೆ ಮಹಾದೇವಮ್ಮನ ಮೇಲೂ ಹಲ್ಲೆ ನಡೆದಿದೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಿದ್ದ ಮಮತಾ ಇನ್ನೂ ವೈರಮುಡಿ ಪತ್ನಿ ಮಮತಾ ಸ್ವಲ್ಪ ಮಟ್ಟಿಗೆ ಎಲ್ಲಾ ತಿಳಿದ ಮಹಿಳೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಳು ಎನ್ನಲಾಗಿದ್ದು, ಹಣಕಾಸಿನ ವಿಚಾರ ಕೂಡ ತಿಳಿದಿದ್ದಳು. ಹಣದಲ್ಲಿ ಜೋರಿದ್ದ ಕಾರಣ ಮನೆ ಮಾರಿ ಕೊಟ್ಟ ಹಣವನ್ನ ವಾಪಸ್ ಮಾಡು ಅಂತಾ ಪೀಡಿಸುತ್ತಿದ್ದನಂತೆ ಅದರಂತೆ ಕರೆಸಿ ಹಲ್ಲೆ ಮಾಡಿದ್ದಾರೆ. ವೈರಮುಡಿ ಹಾಗೂ ಆರು ಜನರದಿಂದ ಕೃತ್ಯ ನಡೆದಿದ್ದು ಈ ಸಂಬಂಧ ಸಿ.ಎಸ್. ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದ್ಯ ವೈರಮುಡಿ ಹಾಗೂ ಆರು ಜನರ ತಂಡವನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಕೊಲೆ ಯತ್ನ ಕೇಸ್ ದಾಖಲಾಗಿದ್ದು ಇದರ ಹಿಂದೆ ರಾಜಕೀಯ ವಾಸನೆ ಇದೆ ಎನ್ನಲಾಗುತ್ತಿದೆ. ತುರುವೇಕೆರೆ ಶಾಸಕ ಮಸಾಲೆ ಜಯರಾಂ ಬೆಂಬಲಿಗರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಒಟ್ಟಾರೆ ಸುಖವಾಗಿ ಇದ್ದ ಸಂಸಾರದಲ್ಲಿ ಅದೇನಾಯ್ತೋ ಗೊತ್ತಿಲ್ಲ ಹಣ ಆಸ್ತಿ ವಿಚಾರಕ್ಕೆ ಕಟ್ಟಿಕೊಂಡ ಗಂಡನೇ ಈ ಕೃತ್ಯ ಎಸಗಿರಿದೋ ನಿಜಕ್ಕೂ ದುರಂತ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನವಂಶಿ ಕೃಷ್ಣಗೆ ನೂತನ ಸಚಿವ ಎಂಟಿಬಿ ನಾಗರಾಜ್ ಫುಲ್ ಕ್ಲಾಸ್
Published On - 1:08 pm, Fri, 6 August 21