AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮಕ್ಕಳು, ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ

ಮೂರು ವರ್ಷದ ಹಿಂದೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಮದುವೆಯಾದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಪತಿಗೆ ಅಕ್ರಮ ಸಂಬಂಧ ಇದ್ದ ಬಗ್ಗೆ ತಿಳಿಸುತ್ತಿದ್ದಂತೆ ಈ ಬಗ್ಗೆ ಪತ್ನಿ ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಮಕ್ಕಳು ಹಾಗೂ ಪತ್ನಿಯನ್ನು ಪತಿ ಮನೆಯಿಂದ ಹೊರ ಹಾಕಿದ್ದು ಪತ್ನಿ ಮುಸ್ಕಾನ್ ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.

ತುಮಕೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮಕ್ಕಳು, ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ
ನೊಂದ ಮಹಿಳೆ ಮುಸ್ಕಾನ್ ಖಾನ್
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ | Edited By: ಆಯೇಷಾ ಬಾನು|

Updated on: Oct 05, 2023 | 12:38 PM

Share

ತುಮಕೂರು, ಅ.05: ಪತಿಯ ಪರಸಂಗದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಪತ್ನಿಯನ್ನ ಪತಿ ಹೊರಹಾಕಿದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ನಡೆದಿದೆ. ಇಬ್ಬರು ಮಕ್ಕಳೊಂದಿಗೆ ಪತಿ ಮನೆಯಿಂದ ಆಚೆ ಬಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ (Turuvekere Police Station) ದೂರು ದಾಖಲಿಸಿದ್ದು ನ್ಯಾಯ ಕೊಡಿಸಿ ಎಂದು ಅಂಕಲಾಚಿದ್ದಾರೆ. ಇನ್ನು ಮಹಿಳೆಗೆ ಮೋಸ ಮಾಡಿದ ವ್ಯಕ್ತಿ ಎರಡನೇ ಮದುವೆಯಾಗಿರುವುದು ತಿಳಿದು ಬಂದಿದೆ. ಮೊದಲ ಪತ್ನಿಗೆ ವಿಚ್ಚೇದನ ನೀಡದೇ, ಜೀವನಾಂಶ ಕೊಡದೇ ಎರಡನೇ ಮದುವೆ ಆಗಿದ್ದಾನೆ ಎನ್ನಲಾಗುತ್ತಿದೆ.

ಮೊಬೈಲ್ ಮೂಲಕ ಪತಿ ಕಳ್ಳಾಟ ಬಯಲು

2018ರ ಡಿಸೆಂಬರ್​ನಲ್ಲಿ ರಾಮನಗರ ಮೂಲದ ಮುಸ್ಕಾನ್ ಖಾನ್ ಎಂಬ ಹುಡುಗಿಯನ್ನ ತುರುವೇಕೆರೆ ಜೀಲಾನ್ ಬೇಗ್ ಮದುವೆಯಾಗಿದ್ದ. ಮುಸ್ಕಾನ್ ಕುಟುಂಬ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿತ್ತು. ವರದಕ್ಷಿಣೆಯಾಗಿ ಒಂದೂವರೆ ಕೆಜಿ ಒಡವೆ ಹಣ ನೀಡಿದ್ದರು. ಇಷ್ಟೆಲ್ಲಾ ಅದ್ದೂರಿಯಾಗಿ ಮದುವೆ ಆಗಿದ್ದ ಜೀಲಾನ್​ ಮದುವೆ ಬಳಿಕವೂ ಹಲವರ ಜೊತೆ ಅಕ್ರಮ ಸಂಬಂಧ ಇಟ್ಟು ಕೊಂಡಿದ್ದನಂತೆ. ದಂಪತಿಗೆ ಇಬ್ಬರು ಮಕ್ಕಳಿದ್ದರೂ ಜೀಲಾನ್​ಗೆ ಪರಸಂಗದ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು. ತನ್ನ ಪತಿಯ ಚಲ್ಲಾಟವನ್ನು ಮೊಬೈಲ್​ನಲ್ಲಿ ನೋಡಿದ್ದ ಪತ್ನಿ ಮುಸ್ಕಾನ್ ಖಾನ್ ತನ್ನ ಪತಿಗೆ ಎಚ್ಚರಿಸಿದ್ದಾಳೆ. ಈ ರೀತಿಯ ಕಳ್ಳಾಟ ಬೇಡ ಎಂದು ಮನವಿ ಮಾಡಿದ್ದಾಳೆ. ಆದರೆ ಮೊಬೈಲ್​ನಲ್ಲಿ ಬೇರೆ ಹುಡುಗಿಯರ ನಂಬರ್​ಗಳು, ಕಾಂಟ್ಯಾಕ್ಟ್ ಹೆಚ್ಚುತ್ತಾ ಹೋಗಿದೆ. ಇದರಿಂದ ನೊಂದ ಮುಸ್ಕಾನ್ ಈ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ಆಗ ಪತಿ ಕುಟುಂಬಸ್ಥರೆಲ್ಲ ಸೇರಿಕೊಂಡು ಮುಸ್ಕಾನ್​ನನ್ನು ಹೊರ ಹಾಕಿದ್ದಾರೆ. ಇಬ್ಬರು ಮಕ್ಕಳನ್ನು ಸೇರಿದಂತೆ ಮುಸ್ಕಾನ್​ಗೆ ಏನೂ ಹಿಂತಿರುಗಿಸದೇ ಮನೆಯಿಂದ ಆಚೆ ಹಾಕಲಾಗಿದೆ.

ಇದನ್ನೂ ಓದಿ: ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸಮೀಪದ ಬಸ್​ ನಿಲ್ದಾಣವನ್ನೇ ಕದ್ದೊಯ್ದ ಖದೀಮರು

ವಿಚ್ಛೇದನ ನೀಡದೆ 2ನೇ ಮದುವೆ ಆದ ಜೀಲಾನ್

ಸದ್ಯ ಮುಸ್ಕಾನ್ ತನ್ನ ಪತಿ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ ನನ್ನನ್ನು ಹೊರ ಹಾಕಿದ್ದಾರೆ. ತನಗೆ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇನ್ನು ಜೀಲಾನ್ ಮಧುಗಿರಿ ಮೂಲದ ಮತ್ತೋರ್ವ ಮುಸ್ಕಾನ್ ಎಂಬ ಮಹಿಳೆಯನ್ನ ಎರಡನೇ ಮದುವೆ ಆಗಿದ್ದಾನೆ. ಮೊದಲ ಪತ್ನಿಗೆ ವಿಚ್ಛೇದನ ನೀಡದೇ, ಜೀವನಾಂಶ ಕೊಡದೇ ಎರಡನೇ ಮದುವೆ ಆಗಿದ್ದಾನೆ. ಜೀಲಾನ್ ಮದುವೆಯಾದ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು ಆಕೆ ಗಂಡನನ್ನು ಬಿಟ್ಟು ಜೀಲಾನ್​ನ ಮದುವೆ ಆಗಿದ್ದಾಳೆ ಎನ್ನಲಾಗುತ್ತಿದೆ. ಜೀಲಾನ್​ ತುರುವೇಕೆರೆಯಲ್ಲಿ ಜೆಕೆ ಗ್ಯಾಸ್ ಏಜೆನ್ಸಿ ಇಟ್ಟುಕೊಂಡಿದ್ದಾನೆ.

ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್