ತುಮಕೂರಿನಲ್ಲಿ ಶ್ರೀಗಂಧ ಮರ ಕಡಿಯುವ ವೇಳೆ ಎನ್ ಕೌಂಟರ್ ಪ್ರಕರಣ: ಗುಂಡೇಟಿಗೆ ಬಲಿಯಾದವನ ಗುರುತು ಪತ್ತೆ

| Updated By: sandhya thejappa

Updated on: Aug 23, 2021 | 9:35 AM

ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಕಂಪ್ಲಾಪುರ ಮೀಸಲು ಅರಣ್ಯ ಪ್ರದೇಶದದಲ್ಲಿ ಮೂವರು ಶ್ರೀಗಂಧ ಮರ ಕಡಿಯುತ್ತಿದ್ದರು. ಇದೇ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗೆ ವಿಷಯ ತಿಳಿದು ಪರಿಶೀಲನೆಗೆ ಮುಂದಾದರು.

ತುಮಕೂರಿನಲ್ಲಿ ಶ್ರೀಗಂಧ ಮರ ಕಡಿಯುವ ವೇಳೆ ಎನ್ ಕೌಂಟರ್ ಪ್ರಕರಣ: ಗುಂಡೇಟಿಗೆ ಬಲಿಯಾದವನ ಗುರುತು ಪತ್ತೆ
ಮೃತಪಟ್ಟ ಶಿವರಾಜ್
Follow us on

ತುಮಕೂರು: ಆಗಸ್ಟ್ 21ರ ಮುಂಜಾನೆ ಶ್ರೀಗಂಧ ಮರ (Sandalwood tree) ಕಡಿಯುವ ವೇಳೆ ಗಾರ್ಡ್ ಒಬ್ಬರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಓರ್ವನ ಮೇಲೆ ಫೈರಿಂಗ್ (Firing) ಆಗಿತ್ತು. ಗುಂಡೇಟಿಗೆ ಬಲಿಯಾದ ಆ ವ್ಯಕ್ತಿಯ ಗುರುತು ಇಂದು (ಆಗಸ್ಟ್ 23) ಪತ್ತೆಯಾಗಿದೆ. ಮೂವರು ಶ್ರೀಗಂಧ ಮರವನ್ನು ಕಡಿಯುತ್ತಿರುವ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿ ಶರಣಾಗುವಂತೆ ಸೂಚಿಸುತ್ತಾರೆ. ಆದರೆ ಮರ ಕಡಿಯುತ್ತಿದ್ದ ವ್ಯಕ್ತಿಯೋರ್ವ ಅಧಿಕಾರಿಯ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಆಗ ಅಧಿಕಾರಿಗಳು ಗುಂಡು ಹಾರಿಸಿದ್ದರು.

ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಕಂಪ್ಲಾಪುರ ಮೀಸಲು ಅರಣ್ಯ ಪ್ರದೇಶದದಲ್ಲಿ ಮೂವರು ಶ್ರೀಗಂಧ ಮರ ಕಡಿಯುತ್ತಿದ್ದರು. ಇದೇ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗೆ ವಿಷಯ ತಿಳಿದು ಪರಿಶೀಲನೆಗೆ ಮುಂದಾದರು. ಅದರೆ ಶ್ರೀಗಂಧದ ಮರ ಕಡಿಯುತ್ತಿದ್ದವರು ಏಕಾಏಕಿ ದಾಳಿ ಮಾಡಲು ಯತ್ನಿಸಿದರು. ಹೀಗಾಗಿ ಅಧಿಕಾರಿ ಗುಂಡು ಹಾರಿಸಿದರು ಎಂದು ಮಾಹಿತಿಯಿಂದ ತಿಳಿದುಬಂದಿತ್ತು. ರಾಮನಗರ ತಾಲೂಕಿನ ಮೇಟರ ದೊಡ್ಡಿ ಗ್ರಾಮದ ಶಿವರಾಜ್ (30) ಎಂಬುವವನು ಗುಂಡೇಟಿಗೆ ಬಲಿಯಾದ ವ್ಯಕ್ತಿ ಎಂದು ಇದೀಗ ಗುರುತು ಪತ್ತೆಯಾಗಿದೆ.

ಆಗಸ್ಟ್ 20ರ ರಾತ್ರಿ ಮರ ಕಡಿಯುವ ಶಬ್ದ ಬರುತ್ತಿತ್ತು. ಶಬ್ದ ಆಲಿಸಿದ ಡಿಆರ್.ಎಫ್ ಮಹೇಶ್ ಹಾಗೂ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಆಗಸ್ಟ್ 21ರ ಬೆಳಿಗ್ಗೆ 9.30ರ ಸುಮಾರಿಗೆ ಕಳ್ಳರ ತಂಡ ಶ್ರೀಗಂಧದ ಮರ ಕಡಿಯುತ್ತಿರುವ ಸ್ಥಳ ಪತ್ತೆಯಾಗಿದೆ. ಈ ವೇಳೆ ಅರಣ್ಯಾಧಿಕಾರಿಗಳು ಮೂವರು ಕಳ್ಳರ ತಂಡ ಶ್ರೀಗಂಧ ಮರ ಕಡಿಯುತ್ತಿರುವುದನ್ನು ಕಂಡಿದ್ದಾರೆ. ತಕ್ಷಣವೇ ಮರ ಕಡಿಯುವುದನ್ನು ನಿಲ್ಲಿಸಿ ಶರಣಾಗುವಂತೆ ಡಿಆರ್ ಎಫ್ ಮಹೇಶ್ ಸೂಚನೆ ನೀಡಿದ್ದಾರೆ. ಅರಣ್ಯಾಧಿಕಾರಿಗಳ ಸೂಚನೆಗೆ ಕ್ಯಾರೆ ಎನ್ನದ ಖದೀಮರು ಅರಣ್ಯ ಸಿಬ್ಬಂದಿ ಶೇಖರ್ ಮೇಲೆ ಮರ ಕಡಿಯುತ್ತಿದ್ದ ಆಯುಧದಿಂದ ಹಲ್ಲೆಗೆ ಯತ್ನಿಸಿದ್ದಾರೆ. ಆಗ ಅರಣ್ಯಾಧಿಕಾರಿ ಮಹೇಶ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ಅವರ ಸೂಚನೆ ಪಾಲಿಸದ ಕಾರಣ ವಿಧಿಯಿಲ್ಲದೇ ಅರಣ್ಯಾಧಿಕಾರಿ ಮಹೇಶ್ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ

ಮಕ್ಕಳನ್ನು ಸ್ವಾಗತಿಸಲು ಸಜ್ಜಾದ ಶಾಲೆಗಳು; ಕೊರೊನಾ ಭೀತಿಯ ನಡುವೆಯೂ ಕಲಿಕೆಯ ಸಂಭ್ರಮ ಶುರು

ಕರ್ನಾಟಕದಲ್ಲಿ ಬಹುತೇಕ ಕಡೆ ಮಕ್ಕಳು ಮರಳಿ ಶಾಲೆಗೆ; 5 ಜಿಲ್ಲೆಗಳಲ್ಲಿ ಶಾಲೆ ಪುನರಾರಂಭ ಆಗಿಲ್ಲ, ಹಾಗಾದರೆ ಯಾವಾಗ?

(identity of the person who died of firing has been found while cutting sandalwood Tree in Tumkur)