ಕಲಬುರಗಿ: ಇನ್ನು ರಾಜ್ಯದಲ್ಲಿ ನಿಧಿಗಾಗಿ ಶೋಧ ನಡೆಸುವಂತಹ ಘಟನೆ ನಡೆಯುತ್ತಿರುವುದು ಇದೆ ಮೊದಲಲ್ಲ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಯಲ್ಲಿ ಕೆಲವರು ನಿಧಿ ಹುಡುಕಾಟ ಮಾಡೋದನ್ನೇ ತಮ್ಮ ದೈನಂದಿನ ಕೆಲಸ ಮಾಡಿಕೊಂಡಿದ್ದು, ಅನೇಕ ದೇವಸ್ಥಾನ, ಕೋಟೆಗಳಲ್ಲಿ ನಿಧಿಗಾಗಿ ಭೂಮಿ ಅಗೆಯುತ್ತಲೇ ಇದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ನಿಧಿಯಾಸೆಗಾಗಿ ದುಷ್ಕರ್ಮಿಗಳು ದೇವಸ್ಥಾನದ ಶಿವಲಿಂಗವನ್ನೇ ಕಿತ್ತೆಸೆದಿರುವ ಘಟನೆ ನಡೆದಿತ್ತು.
ಇದನ್ನೂ ಓದಿ:ದೇವಸ್ಥಾನದ ಬಳಿ ನಿಧಿಗೆ ಹುಡುಕಾಟ ನಡೆಸುತ್ತಿದ್ದ ಮೂವರು ಅಂದರ್, ಯಾವೂರಲ್ಲಿ?
ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಗೂರು ಎನ್ ಗ್ರಾಮದ ಹೊರವಲಯದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಶಿವಲಿಂಗವನ್ನು ದುಷ್ಕರ್ಮಿಗಳು ಕಿತ್ತೆಸೆದಿದ್ದರು. ಶಿವಲಿಂಗ ಇದ್ದ ಜಾಗದಲ್ಲಿ ನಿಧಿಗಾಗಿ ಶೋಧ ನಡೆಸಿದ್ದು, ಮಲ್ಲಿಕಾರ್ಜುನ ಅನ್ನೋ ವ್ಯಕ್ತಿಯ ಜಾಗದಲ್ಲಿ ಪುಟ್ಟ ದೇವಸ್ಥಾನವಿತ್ತು. ದುಷ್ಕರ್ಮಿಗಳು ರಾತ್ರಿ ಯಾರು ಇಲ್ಲದ ಸಮಯದಲ್ಲಿ ನುಗ್ಗಿ, ಶಿವಲಿಂಗವನ್ನು ಕಿತ್ತು ಬೇರಡೆ ಇಟ್ಟು ನಿಧಿ ಹುಡುಕಾಟ ನಡೆಸಿದ್ದರು. ಅದೇ ಸ್ಥಳದಲ್ಲಿ ಪೂಜೆ ಕೂಡಾ ಮಾಡಿದ್ದರು. ಇನ್ನು ಅಂದು ಕಾರ್ ಹುಣ್ಣಿಮೆ ಇದ್ದಿದ್ದರಿಂದ, ಹುಣ್ಣಿಮೆ ಮತ್ತು ಅಮವಾಸ್ಯೆ ದಿನ ಪೂಜೆ ಮಾಡಿದ್ರೆ ನಿಧಿ ಸಿಗುತ್ತೆ ಅನ್ನೋ ನಂಬಿಕೆ ಕೆಲವರಲ್ಲಿದೆ. ಹುಣ್ಣಿಮೆ ದಿನವೇ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದುಷ್ಕರ್ಮಿಗಳು ನಿಧಿ ಹುಡುಕಾಟ ನಡೆಸಿದ್ದರು.
ಹಾವೇರಿ: ರಟ್ಟಿಹಳ್ಳಿ ತಾಲೂಕು ಪುರದಕೆರೆ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಹುಂಡಿ ಕಳ್ಳತನ ಮಾಡಿ, ಓಪನ್ ಆಗದಿದ್ದಕ್ಕೆ ಅಲ್ಲಿಯೇ ಬಿಸಾಡಿ ಹೋದ ಘಟನೆ ನಡೆದಿದೆ. ಇನ್ನು ರಟ್ಟಿಹಳ್ಳಿ ತಾಲೂಕಿನಲ್ಲಿಯೇ ಬೀಡು ಬಿಟ್ಟಿರುವ ಕಳ್ಳರು, ಕಳೆದ 2 ತಿಂಗಳಿನಿಂದ ಹಲವು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದಾರೆ. ಅದರಂತೆ ನಿನ್ನೆಯೂ ದೇವಸ್ಥಾನದ ಬೃಹತ್ ಗಾತ್ರದ ಹುಂಡಿ ಹೊತ್ತೊಯ್ದು ಒಡೆಯಲು ಯತ್ನಿಸಿದ್ದಾರೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Thu, 15 June 23