AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನದ ಬಳಿ ನಿಧಿಗೆ ಹುಡುಕಾಟ ನಡೆಸುತ್ತಿದ್ದ ಮೂವರು ಅಂದರ್, ಯಾವೂರಲ್ಲಿ?

ನಿಧಿಗಾಗಿ 2 ದಿನದ ಹಿಂದೆ ವಿಶೇಷಪೂಜೆ ಮಾಡಿದ್ದ ಕಿರಾತಕರು, ನಂತರ ಭೂಮಿಯನ್ನು ಅಗೆಯುತ್ತಿದ್ದರಂತೆ. ರಸ್ತೆ ಪಕ್ಕದಲ್ಲಿ ದ್ವಿಚಕ್ರ ವಾಹನಗಳು ನಿಂತಿರೋದನ್ನು ಗಮನಿಸಿದ ವಾಡಿ ಠಾಣೆ ಪೊಲೀಸರು, ಸ್ಥಳಕ್ಕೆ ಹೋಗಿ ಗಮನಿಸಿದಾಗ ಸತ್ಯ ಗೊತ್ತಾಗಿದೆ.

ದೇವಸ್ಥಾನದ ಬಳಿ ನಿಧಿಗೆ ಹುಡುಕಾಟ ನಡೆಸುತ್ತಿದ್ದ ಮೂವರು ಅಂದರ್, ಯಾವೂರಲ್ಲಿ?
ಬಂಧಿತ ಆರೋಪಿಗಳು
ಪೃಥ್ವಿಶಂಕರ
| Edited By: |

Updated on:Dec 03, 2020 | 12:46 PM

Share

ಕಲಬುರಗಿ: ಜಿಲ್ಲೆಯಲ್ಲಿ ನಿಧಿಗಳ್ಳರ ಹಾವಳಿ ವಿಪರೀತವಾಗಿದೆ. ಅದೆಷ್ಟೊ ಪುಟಾಣಿಗಳು ನಿಧಿಗಳ್ಳರ ದುರಾಸೆಗೆ ಬಲಿಯಾಗಿದ್ದಾರೆ.  ಇನ್ನು ಹಲವರು ಜೈಲುಪಾಲಾಗಿದ್ದಾರೆ. ಆದರೂ ನಿಧಿ ಹುಡುಕುವವರ ಸಂಖ್ಯೆ ಕಡಿಮೆಯಾಗಿಲ್ಲ.

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿ ಹೊರವಲಯದ ಭಾಗ್ಯವಂತಿ ದೇವಸ್ಥಾನದ ಬಳಿ ನಿಧಿಗೆ ಹುಡುಕಾಟ ನಡೆಸುತ್ತಿದ್ದ ಮೂವರು ನಿಧಿಗಳ್ಳರನ್ನು ವಾಡಿ ಠಾಣೆಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ತರ್ಕಸಪೇಟ್ ಗ್ರಾಮದ ಸಾಯಿಬಣ್ಣ, ಶಾಂಪೂರಹಳ್ಳಿಯ ಹಣಮಂತ ಖತ್ರಿ, ರಾಂಪೂರಹಳ್ಳಿಯ ಬಸಲಿಂಗ ಬಂಧಿತರು.

2 ದಿನದ ಹಿಂದೆ ವಿಶೇಷಪೂಜೆ ಮಾಡಿದ್ದ ಕಿರಾತಕರು.. ಮೂವರ ಜೊತೆಗೆ ಇನ್ನೂ ಮೂವರು ಸೇರಿ ರಾಂಪೂರಹಳ್ಳಿಯ ಹೊರವಲಯದ ಭಾಗ್ಯವಂತಿ ದೇವಸ್ಥಾನದ ಬಳಿ ನಿಧಿಗೆ ಭೂಮಿ ಅಗೆಯುತ್ತಿದ್ರು. ನಿಧಿಗಾಗಿ 2 ದಿನದ ಹಿಂದೆ ವಿಶೇಷ ಪೂಜೆ ಮಾಡಿದ್ದ ಕಿರಾತಕರು, ನಂತರ ಭೂಮಿಯನ್ನು ಅಗೆಯುತ್ತಿದ್ದರಂತೆ.

ರಸ್ತೆ ಪಕ್ಕದಲ್ಲಿ ದ್ವಿಚಕ್ರ ವಾಹನಗಳು ನಿಂತಿರೋದನ್ನು ಗಮನಿಸಿದ ವಾಡಿ ಠಾಣೆ ಪೊಲೀಸರು, ಸ್ಥಳಕ್ಕೆ ಹೋಗಿ ಗಮನಿಸಿದಾಗ ಸತ್ಯ ಗೊತ್ತಾಗಿದೆ. ಒಟ್ಟು 6 ಜನರ ಪೈಕಿ ಮೂವರು ಪೊಲೀಸರಿಗೆ ಸಿಕ್ಕಿದ್ದು, ಇನ್ನು ಬಾಗಲಕೋಟೆ ಜಿಲ್ಲೆಯವರು ಎಸ್ಕೇಪ್ ಆಗಿದ್ದಾರೆ.

ಬಾಗಲಕೋಟೆ ಮೂಲದ ಮೂವರು ಮಂತ್ರವಾದಿಗಳು, ಸಾಯಿಬಣ್ಣ, ಹಣಮಂತ, ಬಸಲಿಂಗರಿಗೆ ನಿಧಿಗಾಗಿ ಆಸೆ ಹುಟ್ಟಿಸಿದ್ದರಂತೆ. ರಾಂಪೂರಹಳ್ಳಿ ಭಾಗವ್ಯವಂತಿ ದೇವಸ್ಥಾನದ ಬಳಿ ನಿಧಿಯಿದೆ. ಪೂಜೆ ಮಾಡಿ ನಿಧಿ ಹುಡುಕಿದ್ರೆ ಸಿಗುತ್ತೆ ಅಂತ ಹೇಳಿದ್ದರಂತೆ. ಅವರ ಮಾತನ್ನು ನಂಬಿ ಮೂವರು ಪೂಜೆ ಮಾಡಿ ನಿಧಿಗಾಗಿ ಶೋಧ ಮಾಡಲು ಹೋಗಿ ಈಗ ಜೈಲು ಪಾಲಾಗಿದ್ದಾರೆ.

ಒಟ್ನಲ್ಲಿ ನಿಧಿಗೆ ಹುಡುಕಾಟ ನಡೆಸಿದ್ದ ಮೂವರು ಜೈಲು ಪಾಲಾಗಿದ್ದಾರೆ. ನಿಧಿ ಆಸೆ ಹುಟ್ಟಿಸಿ ಯಾಮಾರಿಸುವ ದೊಡ್ಡ ಗ್ಯಾಂಗ್ ರಾಜ್ಯದಲ್ಲಿ ಸಕ್ರಿಯವಾಗಿದೆ. ಗ್ಯಾಂಗ್​ನ ಹೆಡೆಮುರಿ ಕಟ್ಟುವ ಕೆಲಸವನ್ನ ಪೊಲೀಸರು ಮಾಡಬೇಕಿದೆ. ಇಲ್ಲದಿದ್ದರೆ ಇನ್ನೂ ಅನೇಕರು ಇದೇ ರೀತಿ ಅಡ್ಡದಾರಿ ಹಿಡಿಯುವುದರಲ್ಲಿ ಅನುಮಾನವಿಲ್ಲ.

Published On - 12:56 pm, Sat, 28 November 20

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ